ಬೆಂಗಳೂರು : ತೆಲುಗು ಖ್ಯಾತ ನಟ ಜೂನಿಯರ್‌ ಎನ್‌ಟಿಆರ್‌ ಹೊಸ ಲುಕ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ತಾರಕ್‌ ಹೊಸ ಗೆಟಪ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇನ್ನು ಹೊಸ ಸಿನಿಮಾಗಾಗಿ ಎನ್‌ಟಿಆರ್‌ ತಯಾರಿ ನಡೆಸಿದ್ದಾರೆ ಎನ್ನುವ ಸುದ್ದಿ ಸಿನಿರಂಗದಲ್ಲಿ ಹರಿದಾಡುತ್ತಿದೆ.


COMMERCIAL BREAK
SCROLL TO CONTINUE READING

ಹೌದು.. ಮಾಸ್‌ ಹೀರೋ ಎನ್‌ಟಿಆರ್‌ ಆರ್‌ಆರ್‌ಆರ್‌ ಸಿನಿಮಾದಲ್ಲಿ ಕೋಮರಂ ಭೀಮ್‌ ಆಗಿ ನಟಿಸಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸ್ಟಾರ್‌ಗಿರಿ ಪಡೆದಿದ್ದಾರೆ. ಅಪಾರ ಫ್ಯಾನ್ಸ್‌ ಫಾಲೋಯಿಂಗ್‌ ಹೊಂದಿರುವ ತಾರಕ್‌ ಅವರು ಸದ್ಯ ನ್ಯೂ ಲುಕ್‌ನಲ್ಲಿ ಮಿಂಚಿದ್ದಾರೆ. ಈ ಹೊಸ ಅವತಾರ ಕೊರಟಾಲ ಶಿವ ನಿರ್ದೇಶನದ ಮುಂಬರುವ ಸಿನಿಮಾಗೆ ತಯಾರಿ ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ: Vedha Teaser Release: ರಕ್ತ ಮತ್ತು ಕ್ರೂರತೆಯ ಕಥೆ ಹೇಳುವ ವೇದ ಚಿತ್ರದ ಟೀಸರ್


ಸ್ವಲ್ಪ ʼಬಾದ್‌ಶಾʼ ಶೈಲಿಯ ಗೆಟಪ್‌ನಲ್ಲಿ ಎನ್‌ಟಿಆರ್‌ ಕಾಣಿಸಿಕೊಂಡಿದ್ದಾರೆ. ತಾರಕ್‌ಗೆ ಮುಂಬೈ ಮೂಲದ ಖ್ಯಾತ ಕೇಶ ವಿನ್ಯಾಸಗಾರ ಅಲಿಮ್ ಹಕೀಮ್ ಮಾಸ್‌ ಕಿಂಗ್‌ಗೆ ನ್ಯೂ ಲುಕ್‌ ಕೊಟ್ಟಿದ್ದಾರೆ. ʼಯಮದೊಂಗʼ ಸಿನಿಮಾದಿಂದ ಹಿಡಿದು ಪ್ರತಿ ಸಿನಿಮಾದಲ್ಲೂ ಎನ್‌ಟಿಆರ್‌ ನ್ಯೂ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಕೊರಟಾಲ ಶಿವ ಸಿನಿಮಾಗಾಗಿ ಸಂಪೂರ್ಣ ಮೇಕ್ ಓವರ್ ಮಾಡಿಕೊಂಡಿರುವಂತಿದೆ.


ಎನ್‌ಟಿಆರ್ ಮತ್ತು ಕೊರಟಾಲ ಶಿವ ಕಾಂಬಿನೇಷನ್‌ನ ಜನತಾ ಗ್ಯಾರೇಜ್ ಉತ್ತಮ ಯಶಸ್ಸನ್ನು ಗಳಿಸಿತ್ತು. ಮತ್ತೊಮ್ಮೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಸಿನಿಮಾದ ಮೇಲೆ ಒಳ್ಳೆಯ ನಿರೀಕ್ಷೆ ಹುಟ್ಟಿಕೊಂಡಿದೆ. ಸದ್ಯ ಎನ್‌ಟಿರ್‌ 30 (NTR30) ಸಿನಿಮಾ ಸೆಟ್ಟೆರಲಿದ್ದು, ಈ ಚಿತ್ರಕ್ಕಾಗಿ ತಾರಕ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ತಾರಕ್ ಹೊಸ ಲುಕ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.