ಬೆಂಗಳೂರು: ಈ ಕ್ರಿಕೆಟ್ ಮತ್ತು ಬಾಲಿವುಡ್ ಅಂದ್ರೇನೆ ಒಂದು ರೀತಿಯ ಸೆಳೆತವಿದ್ದ ಹಾಗೆ. ಈ ಎರಡು ಲೋಕದಲ್ಲಿ ವಿಹರಿಸಿ ಕೊನೆಗೆ ದಂಪತಿಗಳಾಗಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಸಾಕಶಷ್ಟಿವೆ. ಅದರಲ್ಲಿ ಇತ್ತಿಚೆಗಿನದೆಂದರೆ ಅದು ವಿರುಷ್ಕಾ ಜೋಡಿ.


COMMERCIAL BREAK
SCROLL TO CONTINUE READING

ಈಗ ಅಂತಹದದ್ದೇ ಸುದ್ದಿ ಬಾಲಿವುಡ್ ಮತ್ತು ಕ್ರಿಕೆಟ್ ಲೋಕದಲ್ಲಿ ಸುದ್ದಿ ಮಾಡುತ್ತಿದೆ. ಓ ಹಾಗಾದ್ರೆ ಯಾರಂತಿರಾ ಆ ಜೋಡಿ, ಅದು ಬೇರೆ ಯಾರು ಅಲ್ಲ, ಕನ್ನಡದ ಹುಡುಗ ಮತ್ತು ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಮತ್ತು ಬೆಂಗಳೂರಿನಲ್ಲಿಯೇ ಬೆಳೆದು ಈಗ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಿಧಿ ಅಗರವಾಲ್. 



ಹೌದು,ಈ ಎರಡು ಜೋಡಿಗಳು ಈಗ ಆಗಾಗ ಕಣ್ಣು ತಪ್ಪಿಸಿಕೊಂಡು ಡೇಟಿಂಗ್ ನಡೆಸುತ್ತಾರೆ ಎನ್ನುವ ಸುದ್ದಿ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಇವರಿಬ್ಬರು  ಒಟ್ಟಿಗೆ ಸುತ್ತಾಡುತ್ತಿರುವ ಫೋಟೋಗಳು ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವುದು ಇದಕ್ಕೆ ಇನ್ನಷ್ಟು ಪುಷ್ಟಿ ದೊರೆತಿದೆ.ಈ ಕುರಿತಾಗಿ ಈಗ ಸ್ಪಷ್ಟನೆ ನೀಡಿರುವ ರಾಹುಲ್, ನಾವಿಬ್ಬರು ಉತ್ತಮ ಸ್ನೇಹಿತರಾಗಿದ್ದು ಹಲವು ವರ್ಷಗಳಿಂದಲೂ ಪರಸ್ಪರ ಪರಿಚಯವಿರುವ ಕಾರಣ ಭೇಟಿ ಮಾಡಿದ್ದೇವು ಎಂದು ತಿಳಿಸಿದ್ದಾರೆ. 


ಇದೇ ಸಂದರ್ಭದಲ್ಲಿ ಬಾಲಿವುಡ್ ನಟಿ ನಿಧಿ ಅಗರವಾಲ್ ಜತೆ ಡೇಟಿಂಗ್ ಕೇಳಿದಾಗ "ತಾನು ಪ್ರೀತಿಸುವ ಮಹಿಳೆಯನ್ನು ಮಹಾರಾಣಿಯಾಗಿ ನೋಡಿಕೊಳ್ಳುತ್ತೇನೆ. ಅಲ್ಲದೆ ಆ ವಿಷಯವನ್ನು ಯಾರಿಂದಲೂ ಮುಚ್ಚಿಡಲು ಪ್ರಯತ್ನ ಮಾಡುವುದಿಲ್ಲ. ನಾವಿಬ್ಬರು ಒಂದೇ ನಗರದಿಂದ ಮುಂಬೈಗೆ ಬಂದವರು. ಇಬ್ಬರ ವೃತ್ತಿ ಜೀವನದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುತ್ತಿದ್ದೇವೆ. ಹಲವು ಬಾರಿ ಈ ಕುರಿತು ಮಾತನಾಡಲು ಸಿಗುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.