ಬಹುನಿರೀಕ್ಷಿತ ʼಕಾಲಾ ಪತ್ಥರ್ʼ ರಿಲೀಸ್... ಶಿಲೆಯ ಸುತ್ತ ಸುತ್ತುತ್ತಾ ಮೋಡಿ ಮಾಡುತ್ತಿದೆ ಈ ʼಕಪ್ಪುಕಲ್ಲುʼ
Kaala Pathar Movie Review: ಇದೇನಪ್ಪ ಆರ್ಮಿ ಕುರಿತ ಸಿನಿಮಾ ಅನ್ಕೋಬೇಡಿ. ಖಂಡಿತಾ ಅಲ್ಲ. ಸೇನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಕುರಿತಾದ ಚಿತ್ರವಾಗಿದ್ದು, ಆತನ ವೈಯಕ್ತಿಕ ಬದುಕಿನ ಸುತ್ತ ಈ ಚಿತ್ರ ಸಾಗುತ್ತದೆ. ಕುಟುಂಬ, ಸಂಬಂಧ ಮೊದಲಾದ ಸಂಗತಿಗಳಿದ್ದು, ಒಂದು ರೀತಿ ಪ್ರೇಕ್ಷಕರನ್ನ ಈ ಸಿನಿಮಾ ಮೋಡಿ ಮಾಡಿ ಕಾಡುತ್ತೆ.
ವಿಕ್ಕಿ ವರುಣ್ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ‘ಕಾಲಾ ಪತ್ಥರ್’ ಸಿನಿಮಾ ಇಂದು ಭರ್ಜರಿಯಾಗಿ ರಿಲೀಸ್ ಆಗಿದೆ. ಶಂಕರ್ ಎಂಬ ಪಾತ್ರದಲ್ಲಿ ಶೈನ್ ಆಗಿರೋ ವಿಕ್ಕಿ ವರುಣ್ ಬಿಎಸ್ʼಎಫ್ ಯೋಧನಗಿರುತ್ತಾರೆ. ಇದೇನಪ್ಪ ಆರ್ಮಿ ಕುರಿತ ಸಿನಿಮಾ ಅನ್ಕೋಬೇಡಿ. ಖಂಡಿತಾ ಅಲ್ಲ. ಸೇನೆಯಲ್ಲಿ ಕೆಲಸ ಮಾಡುವ ವ್ಯಕ್ತಿಯ ಕುರಿತಾದ ಚಿತ್ರವಾಗಿದ್ದು, ಆತನ ವೈಯಕ್ತಿಕ ಬದುಕಿನ ಸುತ್ತ ಈ ಚಿತ್ರ ಸಾಗುತ್ತದೆ. ಕುಟುಂಬ, ಸಂಬಂಧ ಮೊದಲಾದ ಸಂಗತಿಗಳಿದ್ದು, ಒಂದು ರೀತಿ ಪ್ರೇಕ್ಷಕರನ್ನ ಈ ಸಿನಿಮಾ ಮೋಡಿ ಮಾಡಿ ಕಾಡುತ್ತೆ.
ಇದನ್ನೂ ಓದಿ: ತಮ್ಮ ಇಡೀ ಜೀವಮಾನದಲ್ಲಿಯೇ ಒಂದು ಬಾರಿಯೂ ಮದ್ಯಪಾನ ಮಾಡದ ಭಾರತದ ನಾಲ್ವರು ದಿಗ್ಗಜ ಕ್ರಿಕೆಟಿಗರು ಇವರೇ!
ಒಂದು ಕಪ್ಪುಕಲ್ಲು. ಉತ್ತರ ಭಾರತದ ವ್ಯಕ್ತಿಯೊಬ್ಬ ಶಿಲೆಗೆ ಇಟ್ಟ ನೆಚ್ಚಿನ ಹೆಸರು ‘ಕಾಲಾಪತ್ಥರ್’. ಸಿನಿಮಾ ತಂಡ ಹೇಳಿದಂತೆ ಚಿತ್ರ ನೋಡಿದಾಗ ಇದೇ ಶೀರ್ಷಿಕೆ ಏಕೆ ಬಂತು ಅನ್ನೋದು ಗೊತ್ತಾಗುತ್ತದೆ. ಅಣ್ಣಾವ್ರ ಮೊಮ್ಮಗಳು ಧನ್ಯರಾಮ್ ಕುಮಾರ್ ಪಕ್ಕ ಹಳ್ಳಿ ಹುಡುಗಿಯಾಗಿ ಶಿಕ್ಷಕಿ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಲವು ಕಡೆ ಕೆಲವು ಸನ್ನಿವೇಶಗಳು ಬೇಡವಾಗಿತ್ತು ಅನಿಸೋದು ಸಹಜ. ದ್ವಿತೀಯಾರ್ಧದಲ್ಲಿ ಒಂದು ಟ್ವಿಸ್ಟ್ ಅಂತೂ ಖಂಡಿತ ಇದೆ.
ಬೇರೆಯದ್ದೆ ರೀತಿಯ ಸಿನಿಮಾ ಇದಾಗಿದ್ದು ಖಂಡಿತ ನೋಡಿ ಎಂಜಾಯ್ ಮಾಡಬಹುದು. ಮೊದಲಾರ್ಧದಲ್ಲಿ BGM ಕಿರಿಕಿರಿ ಅನಿಸಿದ್ದು ಇದೆ. ಜೊತೆಗೆ ಫಸ್ಟ್ ಹಾಫ್ ನಲ್ಲಿ ಸ್ಕ್ರೀನ್ ಪ್ಲೇ ಚುರುಕು ಕಂಡಿದ್ದರೆ ಇನ್ನಷ್ಟು ಖುಷಿ ಕೊಡುತ್ತಿತ್ತು. ಬೇರೆಯದ್ದೆ ರೀತಿಯ ಜಾನರ್ ಸಿನಿಮಾ ಇದಾಗಿದ್ದು ಫ್ಯಾಮಿಲಿ ಸಮೇತ ನೋಡಿ ಖುಷಿಪಡಬಹುದು.
ಇದನ್ನೂ ಓದಿ: ಏರ್‌ಟೆಲ್ ಕೈಗೆಟುಕುವ ಬೆಲೆಯ ಪ್ಲಾನ್, 6 ತಿಂಗಳು ರಿಚಾರ್ಜ್ ಮಾಡೋದೆ ಬೇಡ!
ಕಾಲಾಪತ್ಥರ್ ಸಿನಿಮಾವನ್ನು ಭುವನ್ ಮೂವೀಸ್ ಲಾಂಛನದಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ನಿರ್ಮಿಸಿದ್ದಾರೆ. ಚಿತ್ರಕ್ಕೆ ಕೆಂಡಸಂಪಿಗೆ, ಕಾಲೇಜ್ ಕುಮಾರ ಖ್ಯಾತಿಯ ವಿಕ್ಕಿ ವರುಣ್ ಆಕ್ಷನ್ ಕಟ್ ಹೇಳಿರುವುದರ ಜೊತೆಗೆ ನಾಯಕನಾಗಿ ಕೂಡಾ ನಟಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.