ಏರ್‌ಟೆಲ್ ಕೈಗೆಟುಕುವ ಬೆಲೆಯ ಪ್ಲಾನ್, 6 ತಿಂಗಳು ರಿಚಾರ್ಜ್ ಮಾಡೋದೆ ಬೇಡ!

Airtel Affordable Plan:  ಜುಲೈ ಮೊದಲ ವಾರದಲ್ಲಿ ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ಕಂಪನಿಗಳು ರಿಚಾರ್ಜ್ ದರ ಏರಿಕೆ ಮಾಡಿದ್ದರು. 

Written by - Yashaswini V | Last Updated : Sep 13, 2024, 01:23 PM IST
  • ಗ್ರಾಹಕರಿಗಾಗಿ ಏರ್‌ಟೆಲ್ ಕೊಡುಗೆ
  • ಕೈಗೆಟುಕುವ ಬೆಲೆಯ ರಿಚಾರ್ಜ್ ಪ್ಲಾನ್ ಬಿಡುಗಡೆ
  • ಒಮ್ಮೆ ಈ ಪ್ಲಾನ್ ಹಾಕಿಸಿದ್ರೆ 6 ತಿಂಗಳು ರಿಚಾರ್ಜ್ ಮಾಡೋದೇ ಬೇಡ...
ಏರ್‌ಟೆಲ್ ಕೈಗೆಟುಕುವ ಬೆಲೆಯ ಪ್ಲಾನ್, 6 ತಿಂಗಳು ರಿಚಾರ್ಜ್ ಮಾಡೋದೆ ಬೇಡ!  title=

Airtel Affordable Plan: ಏರ್‌ಟೆಲ್, ಜಿಯೋ, ವೊಡಾಫೋನ್ ಐಡಿಯಾ ರಿಚಾರ್ಜ್ ಬೆಲೆಯನ್ನು ಘೋಷಿಸಿದ್ದ ಬೆನ್ನಲ್ಲೇ ಗ್ರಾಹಕರು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿ‌ಎಸ್‌ಎನ್‌ಎಲ್ ನತ್ತ ಮುಖ ಮಾದ ತೊಡಗಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತಿರುವ ರಿಲಯನ್ಸ್ ಜಿಯೋ, ಏರ್‌ಟೆಲ್ ಗ್ರಾಹಕರಿಗಾಗಿ ಹೊಸ ಹೊಸ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿವೆ. ಇದೀಗ ಈ ಸಾಲಿನಲ್ಲಿ ಏರ್‌ಟೆಲ್ ಕಡಿಮೆ ದರದಲ್ಲಿ ದೀರ್ಘಾವಧಿಯ ಯೋಜನೆಯನ್ನು ಬಿಡುಗಡೆ ಮಾಡಿದೆ. 

ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆ (Affordable recharge plan): 
ವಿಶೇಷವೆಂದರೆ ಏರ್‌ಟೆಲ್ ಬಿಡುಗಡೆ ಮಾಡಿರುವ ಈ  ಕೈಗೆಟುಕುವ ಬೆಲೆಯ ರಿಚಾರ್ಜ್ ಯೋಜನೆಯನ್ನು ಒಮ್ಮೆ ರಿಚಾರ್ಜ್ ಮಾಡಿದರೆ ಆರು ತಿಂಗಳವರೆಗೆ ರಿಚಾರ್ಜ್ ಗೊಡವೆಯೇ ಇರುವುದಿಲ್ಲ. ಯಾವುದೀ ಯೋಜನೆ, ಇದರ ಬೆಲೆ ಎಷ್ಟು? ಈ ರಿಚಾರ್ಜ್ ಯೋಜನೆಯ ಪ್ರಯೋಜನಗಳೇನು ಎಂದು ತಿಳಿಯೋಣ... 

ಇದನ್ನೂ ಓದಿ- ಗೂಗಲ್‌ನಲ್ಲಿ ಅಪ್ಪಿತಪ್ಪಿಯೂ ಈ 'ಐದು' ವಿಷಯಗಳನ್ನು ಸರ್ಚ್ ಮಾಡಲೇಬೇಡಿ! ಇಲ್ಲವೇ ಜೈಲೂಟ ಫಿಕ್ಸ್!

ಏರ್‌ಟೆಲ್ 180 ದಿನಗಳ ರಿಚಾರ್ಜ್ ಯೋಜನೆ (Airtel 180 days recharge plan): 
ಏರ್‌ಟೆಲ್ ಇತ್ತೀಚೆಗೆ 999 ರೂ.ನಲ್ಲಿ 180 ದಿನಗಳ ದೀರ್ಘಾವಧಿಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಗ್ರಾಹಕರು ಈ ಪ್ಲಾನ್ ಅನ್ನು ಒಮ್ಮೆ ಆಕ್ಟಿವ್ ಮಾಡಿದರೆ ಆರು ತಿಂಗಳವರೆಗೆ ರಿಚಾರ್ಜ್ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. 

ಏರ್‌ಟೆಲ್ ದೀರ್ಘಾವಧಿ ಯೋಜನೆ ಪ್ರಯೋಜನಗಳು (Airtel Long Term Plan Benefits): 
ಏರ್‌ಟೆಲ್ ನ 999ರೂ. ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆಗಳು, ಉಚಿತ ಎಸ್ಎಮ್‌ಎಸ್ ಜೊತೆಗೆ ಅನ್‌ಲಿಮಿಟೆಡ್ ಡೇಟಾಬ್ಯಾಕ್‌ ಸೌಲಭ್ಯವನ್ನೂ ಸಹ ನೀಡಲಾಗುತ್ತದೆ. 

ಇದನ್ನೂ ಓದಿ- ಬಂದ್ ಆಗುತ್ತಾ ಅನ್ಲಿಮಿಟೆಡ್ ಕಾಲ್, ಡೇಟಾ ಪ್ಲಾನ್ಸ್: ಜಿಯೋ, ಏರ್‌ಟೆಲ್‌, ವಿಐ ಗ್ರಾಹಕರಿಗೆ ಹೆಚ್ಚಾಯ್ತು ಟೆನ್ಷನ್

ಏರ್‌ಟೆಲ್ ತಿಂಗಳ ಯೋಜನೆ: 
ಒಂದೊಮ್ಮೆ ನೀವು ಈ ದೀರ್ಘಾವಧಿಯ ಯೋಜನೆಯನ್ನು ಪಡೆಯಲು ಸಾಧ್ಯವಾಗದಿದ್ದರೆ ಏರ್‌ಟೆಲ್ 155 ರೂ. ರಿಚಾರ್ಜ್ ಯೋಜನೆಯನ್ನು ಕೂಡ ಪರಿಚಯಿಸಿದೆ. 28 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಗ್ರಾಕರಿಗೆ ಅನಿಯಮಿತ ಕರೆ ಜೊತೆಗೆ ನಿತ್ಯ 100 ಎಸ್‌ಎಮ್‌ಎಸ್ ಸೀಮಿತ ಡೇಟಾ ಸೌಲಭ್ಯವನ್ನು ಒದಗಿಸಲಾಗುತ್ತದೆ.  

ಏರ್‌ಟೆಲ್ ರಿಚಾರ್ಜ್ ಸಂಬಂಧಿತ ಹೆಚ್ಚಿನ ಮಾಹಿತಿಗಾಗಿ ನೀವು ಏರ್‌ಟೆಲ್ ಥ್ಯಾಂಕ್ಸ್ ಆಪ್‌ಗೆ ಭೇಟಿ ನೀಡಿ ಪರಿಶೀಲಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News