Kaatera Collections: ಕನ್ನಡದ ಸ್ಟಾರ್ ನಟ ದರ್ಶನ್ ಚಿತ್ರಗಳಿಗೆ ಪ್ರಾದೇಶಿಕವಾಗಿ ಒಳ್ಳೆಯ ಕ್ರೇಜ್ ಇದೆ. ಬಹುತೇಕ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬಿಡುಗಡೆಯಾಗುತ್ತವೆ.. ಸದ್ಯ 'ಕಾಟೇರ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದು.. ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.


COMMERCIAL BREAK
SCROLL TO CONTINUE READING

ಚಿತ್ರವು ಶುಕ್ರವಾರ (ಡಿಸೆಂಬರ್ 29, 2023) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ.. ಯಶಸ್ವಿ ಚಾಲನೆಯಲ್ಲಿದೆ. ಈ ಸಿನಿಮಾ ರಿಲೀಸ್ ಆದ ಮೇಲೆ ಈಗಾಗಲೇ ವಿಶ್ವದಾದ್ಯಂತ ಬಿಡುಗಡೆಯಾಗಿರುವ ಪ್ರಭಾಸ್ - ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಸ್ಪೀಡ್ ಕಡಿಮೆಯಾಗಿದೆ. ಸಲಾರ್ ಕನ್ನಡದಲ್ಲಿ ಹತ್ತು ದಿನದಲ್ಲಿ ಕಲೆಕ್ಷನ್ ಮಾಡಿದ್ದನ್ನು ಮೂರು ದಿನದಲ್ಲಿ ಕಲೆಕ್ಟ್ ಮಾಡೋದು ಈ ಕಾಟೇರ ಸಿನಿಮಾದ ವಿಚಾರ.


ಇದನ್ನೂ ಓದಿ-ಪ್ರತಾಪ್ ಭವಿಷ್ಯ ಇದೇ ಎಂದು ಕಟುವಾಗಿ ನುಡಿದ ಸ್ವಾಮೀಜಿ! ವರ್ತೂರು ಯಾತನೆಯ ಹಿಂದಿನ ಗುಟ್ಟು ಬಿಚ್ಚಿಟ್ಟ ಗುರೂಜಿ !


‘ಕಾಟೇರ’ ಚಿತ್ರವು ಹಸಿ ಮತ್ತು ಹಳ್ಳಿಗಾಡಿನ ಹಳ್ಳಿ ಹಿನ್ನೆಲೆಯಿಂದ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದು.. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಭರ್ಜರಿಯಾಗಿದೆ..


ಚಿತ್ರಮಂದಿರಗಳಲ್ಲೂ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದು... ಕನ್ನಡ ಚಿತ್ರರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಮೂರು ದಿನಗಳಲ್ಲಿ 75 ಕೋಟಿ ಕ್ಲಬ್ ಸೇರಿದ ಮೊದಲ ನಾನ್ ಪ್ಯಾನ್ ಇಂಡಿಯಾ ಸಿನಿಮಾ ಕಾಟೇರ... ಹೊಸ ದಾಖಲೆ ನಿರ್ಮಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.. 


ಇದನ್ನೂ ಓದಿ-"ಆಸ್ಕರ್ ಪ್ರಶಸ್ತಿಗಿಂತ ಜನರ ರೆಸ್ಪಾನ್ಸ್ ನನಗೆ ಹೆಚ್ಚು": ಕಾಟೇರ ಸೆಲೆಬ್ರೆಷನ್‌ನಲ್ಲಿ ದರ್ಶನ್‌ ಮನದಾಳದ ಮಾತು!


ಇದರಿಂದ ಕನ್ನಡದಲ್ಲಿ ದರ್ಶನ್ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ಅಲ್ಲದೇ ‘ಕಾಟೇರ’ ವೇಗ ಹೆಚ್ಚಾದಂತೆ ಪ್ರಭಾಸ್ ಸಿನಿಮಾ ಕಲೆಕ್ಷನ್ ಕಡಿಮೆಯಾಗುತ್ತಿರುವುದು ಕುತೂಹಲ ಮೂಡಿಸಿದೆ. 


ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದು... ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಅಲ್ಲದೇ ಕನ್ನಡದ ಸ್ಟಾರ್‌ ನಟ ದರ್ಶನ್, ಜಗಪತಿ ಬಾಬು, ಆರಾಧನಾ ರಾಮ್ ಮತ್ತು ಕುಮಾರ್ ಗೋವಿಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.