Kaatera Update: ಚಂದನವನದ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಟಿಸಿರುವ ಕಾಟೇರ  ಚಿತ್ರ ರಾಜ್ಯದೆಲ್ಲೆಡೆ ರಿಲೀಸ್ ಆಗುತ್ತಿದ್ದು, ಬೆಂಗಳೂರಿನ ಮೇನ್ ಥಿಯೇಟರ್‌ ಅಲ್ಲದೇ ಇನ್ನೂ ಹಲವು ಥಿಯೇಟರ್‌ನಲ್ಲೂ ಚಿತ್ರ ಪ್ರದರ್ಶನ ಕಾಣಿಸುತ್ತಿದೆ. ಆ ಎಲ್ಲ ಥಿಯೇಟರ್‌ಗಳಲ್ಲಿ ಟಿಕೆಟ್ ಬುಕ್ ಆಗಿದ್ದು, ಸಿನಿಮಾ ತಂಡವೇ ಈ ಒಂದು ವಿಶೇಷ ಮಾಹಿತಿಯನ್ನ ಹಂಚಿಕೊಂಡಿದೆ.ಕಾಟೇರ ಸಿನಿಮಾ ಚಿತ್ರ ರಾಜ್ಯ 457 ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದೆ. 


COMMERCIAL BREAK
SCROLL TO CONTINUE READING

ಬಿಗ್‌ ಬಜೆಟ್‌ನ ಬಹು ನಿರೀಕ್ಷೆ ಮೂಡಿಸಿರೋ ಈ ಸಿನಿಮಾ ಬಗ್ಗೆ ಒಂದು ಕುತೂಹಲ ಇದ್ದೇ ಇದ್ದು, ಚಿತ್ರದಲ್ಲಿರೋ ಕಂಟೆಂಟ್ ಮತ್ತು ದಾಸ ದರ್ಶನ್ ಈ ಒಂದು ಕ್ಯೂರಿಯೋಸಿಟಿ ಮೂಡಿಸಿದ್ದಾರೆ. ಬೆಂಗಳೂರಿನ ಅನುಪಮ, ಮೋಹನ್, ಪ್ರಸನ್ನ, ವೈಭವ್ ಥಿಯೇಟರ್‌ಗಳಲ್ಲೂ ಕಾಟೇರ ಚಿತ್ರ ಪ್ರದರ್ಶನ ಆಗಲಿದ್ದು, ಈ ಮೂಲಕ ಅಭಿಮಾನಿಗಳಿಗೆ ಹೊಸದೊಂದು ಅನುಭವ ಕೊಡಲು ರೆಡಿ ಆಗಿದೆ. ಕಾಟೇರ ಸಿನಿಮಾದ ಶೋ ಬೆಳಗ್ಗೆ ಐದು ಗಂಟೇನೆ  ಪ್ರಾರಂಭವಾಗಲಿದ್ದು, ಈ ಮೂಲಕ ಫ್ಯಾನ್ಸ್‌ ತಮ್ಮ ನೆಚ್ಚಿನ ನಾಯಕ ಚಿತ್ರವನ್ನ ನಸುಕಿನಲ್ಲಿಯೇ ವೀಕ್ಷಿಸಬಹುದಾಗಿದೆ.


ಇದನ್ನೂ ಓದಿ: ಹಾಸ್ಯಮಯ ʻಬ್ಯಾಚುಲರ್ ಪಾರ್ಟಿʼಗೆ ಮುಹೂರ್ತ ಫಿಕ್ಸ್!


ನಟ ದರ್ಶನ್ ವರ್ಷಕ್ಕೆ ಒಂದೇ ಸಿನಿಮಾ ಮಾಡುತ್ತಿದ್ದು, ಆದರೆ 2023 ರಲ್ಲಿ ಎರಡು ಸಿನಿಮಾ ತೆರೆಕಂಡಿವೆ. ಚಾಲೆಂಜಿಂಗ್‌ ಸ್ಟಾರ್‌ ಲೆಕ್ಕದಂತೆ ಜನವರಿ ಆರಂಭದಲ್ಲಿಯೇ ಕ್ರಾಂತಿ ಸಿನಿಮಾ ರಿಲೀಸ್ ಆಗಿದ್ದು, ತನ್ನದೇ ಒಂದು ವಿಶೇಷ ಸೆಳೆತವನ್ನ ಕ್ರಿಯೇಟ್ ಮಾಡಿತ್ತು. ಕ್ರಾಂತಿ ಸಿನಿಮಾ ಆದ್ಮೇಲೆ ಇದೀಗ ಕಾಟೇರ ಚಿತ್ರ ರಿಲೀಸ್ ಆಗುತ್ತಿದೆ.


ಕಾಟೇರ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇಯಿದ್ದು, ಇದರಲ್ಲಿ ಜಗಪತಿ ಬಾಬು, ವೈಜನಾಥ್ ಬಿರಾದಾರ್, ವಿನೋದ್ ಆಳ್ವಾ, ಶೃತಿ, ಕುಮಾರ್ ಗೋವಿಂದ್ ಸೇರಿದಂತೆ ಇನ್ನೂ ಅನೇಕರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರ ಇದೇ ತಿಂಗಳು 29 ರಂದು ತೆರೆಗೆ ಅಪ್ಪಳಿಸಲಿದ್ದು, ನೆಚ್ಚಿನ ನಟನ ಆಗಮನಕ್ಕೆ ದರ್ಶನ್ ಫ್ಯಾನ್ಸ್ ಇದೀಗ ಕಾತರದಿಂದಲೇ ಕಾಯುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.