ಹಾಸ್ಯಮಯ ʻಬ್ಯಾಚುಲರ್ ಪಾರ್ಟಿʼಗೆ ಮುಹೂರ್ತ ಫಿಕ್ಸ್!

Bachelor Party Movie: ಸ್ಯಾಂಡಲ್‌ವುಡ್‌ ಸ್ಟಾರ್‌ ನಟರಾದ ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಅಭಿನಯದ  ʻಬ್ಯಾಚುಲರ್ ಪಾರ್ಟಿʼ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Dec 25, 2023, 02:31 PM IST
  • ನಟ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಇರುವ ʻಬ್ಯಾಚುಲರ್ ಪಾರ್ಟಿʼ ಹ್ಯಾಂಡ್‌ ಸ್ಕೆಚ್‌ ಮೂಲಕ ಡಿಸೈನ್‌ ಮಾಡಲಾದ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿತ್ತು.
  • ನಿರ್ದೇಶಕರ ಪ್ರಕಾರ, ಸಿನಿಮಾ ನಿಜ ಜೀವನದ ಅನುಭವಗಳೊಂದಿಗೆ ಅನುರಣಿಸುತ್ತಿದ್ದು, ಹಾಸ್ಯದೊಂದಿಗೆ ಕಾರ್ಪೊರೇಟ್ ಆಫೀಸ್ ಡೈನಾಮಿಕ್ಸ್ ಮತ್ತು ಇಂದಿನ ಮದುವೆಗಳ ಕುರಿತು ಹೇಳುತ್ತದೆ.
  • ಬ್ಯಾಚುಲರ್ ಪಾರ್ಟಿಯಲ್ಲಿ ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಆಚಾರ ಕಿರ್ಕ್ ಮತ್ತು ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಹಾಸ್ಯಮಯ ʻಬ್ಯಾಚುಲರ್ ಪಾರ್ಟಿʼಗೆ ಮುಹೂರ್ತ ಫಿಕ್ಸ್! title=

Bachelor Party Release Date: ಇತ್ತೀಚೆಗಷ್ಟೇ ನಟ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಇರುವ ʻಬ್ಯಾಚುಲರ್ ಪಾರ್ಟಿʼ ಹ್ಯಾಂಡ್‌ ಸ್ಕೆಚ್‌ ಮೂಲಕ ಡಿಸೈನ್‌ ಮಾಡಲಾದ ಪೋಸ್ಟರ್‌ ಒಂದನ್ನು ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಡೈರೆಕ್ಟರ್‌ ಅಭಿಜಿತ್ ಮಹೇಶ್  ಆಕ್ಷನ್‌ ಕಟ್‌ನ ಬ್ಯಾಚುಲರ್ ಪಾರ್ಟಿಯು ಕಾಲೇಜು ನಂತರದ ಜೀವನ, ಮದುವೆ ಹಾಗೂ ಉದ್ಯೋಗದ ಕುರಿತು ಇರಲಿದ್ದು, ಕಾಮಿಡಿ ಎಂಟರ್‌ಟೈನರ್ ಎಂದು ಬಿಂಬಿಸಲಾಗಿದೆ. 

ನಿರ್ದೇಶಕರ ಪ್ರಕಾರ, ಸಿನಿಮಾ ನಿಜ ಜೀವನದ ಅನುಭವಗಳೊಂದಿಗೆ ಅನುರಣಿಸುತ್ತಿದ್ದು, ಹಾಸ್ಯದೊಂದಿಗೆ ಕಾರ್ಪೊರೇಟ್ ಆಫೀಸ್ ಡೈನಾಮಿಕ್ಸ್ ಮತ್ತು ಇಂದಿನ ಮದುವೆಗಳ ಕುರಿತು ಹೇಳುತ್ತದೆ.ಥೈಲ್ಯಾಂಡ್‌ನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಕಿರಿಕ್ ಪಾರ್ಟಿಗಿಂತಲೂ ಬ್ಯಾಚುಲರ್ಸ್ ಪಾರ್ಟಿ ರೋಮಾಂಚಕವಾಗಿರುತ್ತಿದ್ದು, ಅತ್ಯಾಧುನಿಕ ಹಾಸ್ಯದ ಭರವಸೆ  ನಿರ್ದೇಶಕರು ನೀಡಿದ್ದಾರೆ. 

ಇದನ್ನೂ ಓದಿ: ಹೊಸ ವ್ಯವಹಾರದಲ್ಲಿ ರಾಮ್ ಚರಣ್...ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಗೆ ಗ್ಲೋಬಲ್ ಸ್ಟಾರ್ ಎಂಟ್ರಿ!

ಸಂತೋಷಕರ ಮತ್ತು ಸಾಹಸಮಯ ಸವಾರಿಯ ʻಬ್ಯಾಚುಲರ್‌ ಪಾರ್ಟಿʼ ಸಿನಿಮಾ, ರಕ್ಷಿತ್ ಶೆಟ್ಟಿಯ ಪರಂವಃ ಸ್ಟುಡಿಯೋಸ್ ಬೆಂಬಲಿತವಾದ ಚಿತ್ರವು 2024 ಜನವರಿ 26 ರಂದು ಬಿಡುಗಡೆಯಾಗಲಿದೆ ಮತ್ತು ಚಿತ್ರತಂಡ  ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.

ಬ್ಯಾಚುಲರ್ ಪಾರ್ಟಿಯಲ್ಲಿ ಸಿರಿ ರವಿಕುಮಾರ್, ಬಾಲಾಜಿ ಮನೋಹರ್, ಆಚಾರ ಕಿರ್ಕ್ ಮತ್ತು ಪ್ರಕಾಶ್ ತುಮಿನಾಡ್ ಪ್ರಮುಖ ಪಾತ್ರಗಳಲ್ಲಿದ್ದು, ಮಾತಾ ಗುರುಪ್ರಸಾದ್ ಮತ್ತು ನಾ ಸೋಮೇಶ್ವರ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ ನೀಡುತ್ತಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News