Jailer Film Release Date : ನೆಲ್ಸನ್‌ ದಿಲೀಪ್‌ ಕುಮಾರ್‌ ನಿರ್ದೇಶನದ ಜೈಲರ್‌ ಸಿನಿಮಾದ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಚಿತ್ರದಲ್ಲಿನ ಕಾವಾಲಾ ಸಾಂಗ್‌ಗೆ ಬಾಲಿವುಡ್‌ ಮಿಲ್ಕಿ ಬ್ಯೂಟಿ ತಮನ್ನಾ ಬಿಂದಾಸ್‌ ಹುಕ್‌ ಸ್ಟೆಪ್‌ ಹಾಕಿ ರಂಗೇರಿಸಿದ್ದಾರೆ. ನಟಿ ಈ ಸಾಂಗ್‌ನಲ್ಲಿ ಸ್ಟೈಲಿಶ್‌ ಲುಕ್‌ನಲ್ಲಿ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ನಟ ರಜನಿಕಾಂತ್‌ ಜೊತೆಗೆ ಸ್ಯಾಂಡಲ್‌ವುಡ್‌ನ ನಟ ಶಿವರಾಜ್‌ಕುಮಾರ್‌, ಮೋಹನ್‌ ಲಾಲ್‌, ರಮ್ಯಾಕೃಷ್ಣ ಸೇರಿದಂತೆ ಹಲವಾರು ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಇನ್ನು ಈ ಸಿನಿಮಾದಲ್ಲಿ ತಮನ್ನಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಂಗ್‌ನಲ್ಲಿ ಬೊಂಬಾಟ್‌ ಸ್ಟೆಪ್‌ ಹಾಕುವ ಮೂಲಕ ಕಮಾಲ್‌ ಮಾಡಿದ್ದಾರೆ.  ಈ ಹಾಡು ಜಾನಿ ಮಾಸ್ಟರ್‌ ಕೊರಿಯೋಗ್ರಫಿಯಲ್ಲಿ  ಸಖತ್‌ ಕಿಕ್‌ ನೀಡುತ್ತಿದೆ. 


ಇದನ್ನೂ ಓದಿ-Roopa Rayappa : ಶರ್ಟ್‌ ಬಟನ್‌ ತೆಗೆದು ಹಾಟ್‌ ಪೋಸ್‌ ಕೊಟ್ಟ ಕೆಜಿಎಫ್‌ ನಟಿ


ಜಾನಿ ಮಾಸ್ಟರ್‌ ಅನೇಕ ಸೂಪರ್‌ ಹಿಟ್‌ ಸಾಂಗ್‌ಗಳಿಗೆ ಕೊರಿಯೋಗ್ರಾಫಿ ಮಾಡಿದ್ದಾರೆ. ಪ್ರತಿ ಸಾಂಗ್‌ನಲ್ಲಿಯೂ ಹುಕ್‌ ಸ್ಟೆಪ್‌ಗಳು ವೈರಲ್‌ ಆಗಿ ಇನ್‌ಸ್ಟಾಗ್ರಾಂ ರೀಲ್ಸ್‌ ವೈರಲ್‌ ಆಗುತ್ತಿದೆ. ಸದ್ಯ ಈ ಜೈಲರ್‌ ಸಿನಿಮಾದ ಕಾವಾಲಾ ಸಾಂಗ್‌ನ ಹುಕ್‌ ಸ್ಟೆಪ್‌ ಸಹ ಸಖತ್‌ ಸದ್ದು ಮಾಡುತ್ತಿದ್ದು, ಪುಟಾಣಿ ಮಕ್ಕಳು ಸಹ ತಮನ್ನಾ ಹಾಕಿರುವ ಹುಕ್‌ ಸ್ಟೆಪ್‌ನ್ನು ಹಾಕಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.


ಇನ್ನು ಈ ವಿಎಇಯೋಗಳನ್ನು ನೋಡಿದ ತಮನ್ನಾ ಸಖತ್‌ ಖುಷ್‌ ಆಗಿದ್ದಾರೆ. ಕಲರ್‌ಫುಲ್‌ ಸೆಟ್‌ನಲ್ಲಿ ಅದ್ಧೂರಿಯಾಗಿ ಮೂಡಿಬಂದ ಸಾಂಗ್‌ನಲ್ಲಿ ತಮನ್ನಾಗೆ ಬ್ಯಾಕ್‌ ಡಾನ್ಸರ್ಸ್‌ ಸಾಥ್‌ ನೀಡಿದ್ದಾರೆ. ಸನ್‌ ಬ್ಯಾನರ್‌ನಡಿಯಲ್ಲಿ ಮೂಡಿಬಂದ ಜೈಲರ್‌ ಸಿನಿಮಾ ಆಗಸ್ಟ್‌ 10ಕ್ಕೆ ತೆರೆ ಕಾಣಲಿದೆ. ಈ ಚಿತ್ರದಲ್ಲಿ ನಟ ಶಿವರಾಜಕುಮಾರ್‌ ನಟಿಸಿರುವುದು ಅಭಿಮಾನಿಗಳಲ್ಲಿ ಇನ್ನಷ್ಟು ಕುತೂಹಲವನ್ನು ಹೆಚ್ಚಿಸಿದೆ. ಹೆಚ್ಚು ಬೋಲ್ಡ್‌ ಆಗಿ ಕಾಣಿಸಿಕೊಂಡು ಟ್ರೋಲ್‌ ಆಗಿದ್ದ ನಟಿ ತಮನ್ನಾ ಸದ್ಯ ಜೈಲರ್‌ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿ ಮತ್ತೆ ಎಲ್ಲರ ಗಮನ ಸೆಳೆಯುತ್ತಿದಾರೆ. 


ಇದನ್ನೂ ಓದಿ-ನಟ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ : ನಿಹಾರಿಕಾ ಕೊನಿಡೇಲಾ ಡಿವೋರ್ಸ್‌..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.