ನಟ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ : ನಿಹಾರಿಕಾ ಕೊನಿಡೇಲಾ ಡಿವೋರ್ಸ್‌..!

ತೆಲುಗು ಸ್ಟಾರ್‌ ನಟ ಚಿರಂಜೀವಿ ತಮ್ಮ ನಟ-ನಿರ್ಮಾಪಕ ನಾಗೇಂದ್ರ ಬಾಬು ಅವರ ಮಗಳು ನಿಹಾರಿಕಾ ಕೊನಿಡೇಲಾ ಅವರು ಚೈತನ್ಯನ್ ಅವರೊಂದಿಗೆ ಡಿಸೆಂಬರ್ 2020 ರಲ್ಲಿ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಇಬ್ಬರು ದೂರವಾಗಿದ್ದಾರೆ.. 

Written by - Krishna N K | Last Updated : Jul 9, 2023, 11:25 PM IST
  • ನಟ ಚಿರಂಜೀವಿ ತಮ್ಮ ನಟ-ನಿರ್ಮಾಪಕ ನಾಗೇಂದ್ರ ಬಾಬು ಅವರ ಮಗಳು ನಿಹಾರಿಕಾ ಕೊನಿಡೇಲಾ.
  • ನಿಹಾರಿಕಾ ಕೊನಿಡೇಲಾ ಅವರು ಚೈತನ್ಯನ್ ಅವರೊಂದಿಗೆ ಡಿಸೆಂಬರ್ 2020 ರಲ್ಲಿ ಮದುವೆಯಾಗಿದ್ದರು.
  • ನಿಹಾರಿಕಾ ಬುಧವಾರ ತಮ್ಮ ಪತಿ ಚೈತನ್ಯ ಜೊನ್ನಲಗಡ್ಡರಿಂದ ಬೇರ್ಪಟ್ಟ ಸುದ್ದಿಯನ್ನು ಪ್ರಕಟಿಸಿದ್ದಾರೆ.
ನಟ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ವಿಚ್ಛೇದನ : ನಿಹಾರಿಕಾ ಕೊನಿಡೇಲಾ ಡಿವೋರ್ಸ್‌..!  title=

Niharika Konidela : ಟಾಲಿವುಡ್‌ ನಟ ಚಿರಂಜೀವಿ ಅವರ ಸೋದರನ ಮಗಳು ನಟಿ ನಿಹಾರಿಕಾ ಕೊನಿಡೇಲಾ ಬುಧವಾರ ತಮ್ಮ ಪತಿ ಚೈತನ್ಯ ಜೊನ್ನಲಗಡ್ಡರಿಂದ ಬೇರ್ಪಟ್ಟ ಸುದ್ದಿಯನ್ನು ಪ್ರಕಟಿಸಿದ್ದಾರೆ. ಈ ಕುರಿತು ತಮ್‌ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಚೈತನ್ಯ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ.  ಆಧಾರ ಸ್ತಂಭವಾಗಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನಾನು ಸ್ವಲ್ಪ ಗೌಪ್ಯತೆಯನ್ನು ಕೋರುತ್ತೇನೆ. ನಾವು ಈ ಹೊಸ ಅಧ್ಯಾಯವನ್ನು ಖಾಸಗಿಯಾಗಿಡಲು ಬಯಸುತ್ತೆವೆ. ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Niharika Konidela (@niharikakonidela)

ಇದನ್ನೂ ಓದಿ: ಶರ್ಟ್‌ ಬಟನ್‌ ತೆಗೆದು ಹಾಟ್‌ ಪೋಸ್‌ ಕೊಟ್ಟ ಕೆಜಿಎಫ್‌ ನಟಿ

ನಟ-ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರಿ ಮತ್ತು ವರುಣ್ ತೇಜ್ ಅವರ ಸಹೋದರಿ ನಿಹಾರಿಕಾ ಕೊನಿಡೇಲಾ ಅವರು ರಾಮ್ ಚರಣ್, ಅಲ್ಲು ಅರ್ಜುನ್, ಪವನ್ ಕಲ್ಯಾಣ್ ಸೇರಿದಂತೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ 2020 ರ ಡಿಸೆಂಬರ್‌ನಲ್ಲಿ ಉದಯಪುರದಲ್ಲಿ ಚೈತನ್ಯನ್ ಅವರನ್ನು ವಿವಾಹವಾದರು. 

ನಾಗ ಶೌರ್ಯ ನಟಿಸಿದ ಓಕ ಮನಸ್ಸು (2016) ಚಿತ್ರದ ಮೂಲಕ ನಿಹಾರಿಕಾ ಸಿನಿ ರಂಗಕ್ಕೆ ಪ್ರವೇಶ ಮಾಡಿದರು. ಒರು ನಲ್ಲ ನಾಲ್ ಪಾತು ಸೋಲ್ರೆನ್, ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ, ಮತ್ತು ಸೈರಾ ನರಸಿಂಹ ರೆಡ್ಡಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಹಾರಿಕಾ ಪತಿ ಚೈತನ್ಯ ಐಟಿ ವೃತ್ತಿಪರ ಮತ್ತು ಗುಂಟೂರು ಪೊಲೀಸ್ ಮಹಾನಿರೀಕ್ಷಕ ಜೆ ಪ್ರಭಾಕರ್ ರಾವ್ ಅವರ ಮಗ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News