ಕೊರಗಜ್ಜ` ಚಿತ್ರಕ್ಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ ಹಾಲಿವುಡ್-ಬಾಲಿವುಡ್ ನಟ `ಕಬೀರ್ ಬೇಡಿ`
`ಕೊರಗಜ್ಜ` ಸಿನಿಮಾದಲ್ಲಿ ಹಿರಿಯ ನಟಿ ಭವ್ಯ ಉದ್ಯಾವರ ಅರಸರನ್ನು ಎದುರುಹಾಕಿಕೊಳ್ಳುವ `ಪಂಜಂದಾಯಿ` ಎನ್ನುವ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಲಾಗಿದೆ.
ಬೆಂಗಳೂರು : ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಹಾಲಿವುಡ್-ಬಾಲಿವುಡ್ ನಟ ಕಬೀರ್ ಬೇಡಿ ಅಭಿನಯಿಸುತ್ತಿರುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ಧಿಯಾಗಿತ್ತು. ಸುಧೀರ್ ಅತ್ತಾವರ್ ನಿರ್ದೇಶನದ "ಕೊರಗಜ್ಜ" ಚಿತ್ರದಲ್ಲಿ ಬರುವ "ಉದ್ಯಾವರ ಅರಸರ" ಪಾತ್ರವನ್ನು ಕಬೀರ್ ಬೇಡಿ ಸಮರ್ಥವಾಗಿ ನಿಭಾಯಿಸಿದ್ದಾರೆ. ಮಾತ್ರವಲ್ಲದೆ ನಿರ್ದೇಶಕರ "ವಿಷುವಲ್ ಇಮೇಜಿನೇಷನ್"ನನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. "ಕೊರಗಜ್ಜ" ಸಿನಿಮಾದಲ್ಲಿ ಹಿರಿಯ ನಟಿ ಭವ್ಯ ಉದ್ಯಾವರ ಅರಸರನ್ನು ಎದುರುಹಾಕಿಕೊಳ್ಳುವ "ಪಂಜಂದಾಯಿ" ಎನ್ನುವ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಲಾಗಿದೆ. ಇದು ಚಿತ್ರದ ಹೈಲೈಟ್ ಗಳಲ್ಲಿ ಒಂದು.
ಶೂಟಿಂಗ್ ವೇಳೆ ಕಬೀರ್ ಬೇಡಿ ತನ್ನ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡುತ್ತೇನೆ ಎಂದಿದ್ದರು. ಆದರೆ ನಿರ್ದೇಶಕ ಸುಧೀರ್ ಅತ್ತಾವರ್ ರವರಿಗೆ ಕಬೀರ್ ಬೇಡಿ ಕನ್ನಡದಲ್ಲಿ ಮಾಡುತ್ತಾರೆ ಎನ್ನುವುದನ್ನು ಅಷ್ಟು ಸುಲಭದಲ್ಲಿ ಸ್ವೀಕರಿಸಲು ಸಾಧ್ಯವಿರಲಿಲ್ಲ. ಕಾರಣ ಇಷ್ಟೇ ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಏಕಾಏಕಿ ದಕ್ಷಿಣ ಭಾರತದ ಅದರಲ್ಲೂ ಕನ್ನಡ-ತುಳು-ಮಲಯಾಳಂ ಭಾಷೆಗಳ ಸೊಗಡನ್ನು ಅರಿತು, ಅದರ ಏರಿಳಿತ ಮತ್ತು ಭಾವನೆಗಳನ್ನು ಪಾತ್ರಕ್ಕೆ ಅಳವಡಿಸಿಕೊಂಡು, ಗ್ರಾಮ್ಯ ಮತ್ತು ಸ್ವಾಭಾವಿಕ ಶೈಲಿಯಲ್ಲಿ ಧ್ವನಿಯನ್ನು ಏರಿಳಿತಗೊಳಿಸುವುದು ಅಷ್ಟು ಸುಲಭದ ವಿಚಾರವಾಗಿರಲಿಲ್ಲ..
ಇದನ್ನೂ ಓದಿ : ಹೊಸ ಪ್ರಯತ್ನಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ; ಏನಿದು ʼಕೆರಾಡಿʼ?
ಆದರೆ ಕಬೀರ್ ಬೇಡಿ ಈ ಸವಾಲನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿ, ತನ್ನ ಪಾತ್ರಕ್ಕೆ ದಿನಕ್ಕೆ ಎರಡು-ಮೂರು ಸಂಭಾಷಣೆಯನ್ನು ಒಪ್ಪಿಸುತ್ತಾ ಡಬ್ಬಿಂಗ್ ನಡೆಸುತ್ತಿದ್ದಾರೆ. ಕಾಂತಾರ" ನಂತರ ದೈವದ ಕಥೆಯಾಧಾರಿತ ಚಿತ್ರದ ಬಗ್ಗೆ ಹೆಚ್ಚು ಕುತೂಹಲಗೊಂಡಿರುವ ಮುಂಬಯಿ ಮಾಧ್ಯಮಗಳು ತ್ರಿವಿಕ್ರಮ ಸಾಪಲ್ಯ ರವರು ನಿರ್ಮಿಸುತ್ತಿರುವ " ಈ "ಕೊರಗಜ್ಜ" ಸಿನಿಮಾಗೆ ಕಬೀರ್ ಬೇಡಿ ಡಬ್ಬಿಂಗ್ ಮಾಡುವ ವಿಚಾರವನ್ನು ದೊಡ್ಡ ಮಟ್ಟದ ಸುದ್ಧಿಯಾಗಿಸಿದೆ.
ಮೂರರಿಂದ ನಾಲ್ಕೈದು ಕ್ಯಾಮರಾಗಳನ್ನು ಬಳಸಿಕೊಂಡು ಚಿತ್ರೀಕರಿಸಿದ್ದ ಈ ಚಿತ್ರದ ಎಡಿಟಿಂಗ್ ಕೂಡಾ ಅತ್ಯಂತ ಸವಾಲಿನ ಕೆಲಸವಾಗಿತ್ತು. ಖ್ಯಾತ ಸಂಕಲನಕಾರ ಸುರೇಶ್ ಅರಸ್ ಜೊತೆ ವಿದ್ಯಾಧರ್ ಶೆಟ್ಟಿ ಕೂಡಾ ಸಂಕಲನಕಾರರಾಗಿ ಚಿತ್ರಕ್ಕೆ ದುಡಿದಿದ್ದಾರೆ. ಚಿತ್ರದ ಸೌಂಡ್ ಡಿಸೈನ್ ಮತ್ತು ಫ಼ಾಲಿ ಕಾರ್ಯಕ್ಕಾಗಿ ದೇಶದ ಪ್ರತಿಭಾನ್ವಿತ ಡಿಸೈನರ್ ಗಳು ಕೈ ಜೋಡಿಸುತ್ತಿದ್ದಾರೆ. ಮುಂಬಾಯಿ ಹಾಗೂ ವಿದೇಶಗಳಲ್ಲಿ ಈ ಕೆಲಸವನ್ನು ಮಾಡಲು ಈಗಾಗಲೇ ಕಾರ್ಯತಂತ್ರ ರೂಪಿಸಿಕೊಳ್ಳಲಾಗುತ್ತಿದೆ. ಜೊತೆಗೆ ಕ್ಲೈಮ್ಯಾಕ್ಸನ್ನು ಮರು ಚಿತ್ರೀಕರಿಸಿದ್ದ ಚಿತ್ರತಂಡವು ಮೈನವಿರೇಳಿಸುವ ಗ್ರಾಫಿಕ್ಸನ್ನು ಕ್ಲೈಮ್ಯಾಕ್ಸ್ ನಲ್ಲಿ ಅಳವಡಿಸಿಕೊಳ್ಳುತ್ತಿದೆ.
ಇದನ್ನೂ ಓದಿ : ಕಿರುತೆರೆಯಲ್ಲಿ ಹೊಸ ಅಧ್ಯಾಯ ಸೃಷ್ಟಿ ಮಾಡಲು ಬರ್ತಾ ಇದೆ ಹೊಸ ಕಥೆ ‘ಅಮೃತಧಾರೆ’…!
ಒಟ್ಟಾರೆ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್ ನ "ಕೊರಗಜ್ಜ" ಸಿನಿಮಾದ ಮೇಕಿಂಗ್ ವಿಚಾರದಲ್ಲಿ ಎಲ್ಲೂ ಕಾಂಪ್ರಮೈಸ್ ಮಾಡಿಕೊಳ್ಳದೆ, ಚಿತ್ರದ ಬಗ್ಗೆ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.