ಕಿರುತೆರೆಯಲ್ಲಿ ಹೊಸ ಅಧ್ಯಾಯ ಸೃಷ್ಟಿ ಮಾಡಲು ಬರ್ತಾ ಇದೆ ಹೊಸ ಕಥೆ ‘ಅಮೃತಧಾರೆ’…!

Zee Kannada New Serial: ತನ್ನ ವೀಕ್ಷಕರಿಗೆ ಸೃಜನಾತ್ಮಕ ಕಥೆಗಳನ್ನು ನೀಡುವುದರಲ್ಲಿ ಜೀ ಕನ್ನಡ ಸದಾ ಮುಂಚೂಣಿಯಲ್ಲಿದೆ. ಫಿಕ್ಷನ್-ನಾನ್ ಫಿಕ್ಷನ್ ಎರಡೂ ವಿಭಾಗಗಳಲ್ಲಿ ಮೈಲಿಗಲ್ಲನ್ನ ಸೃಷ್ಟಿಸಿದೆ. ನಾನ್ ಸ್ಟಾಪ್ ಮನೋರಂಜನೆ ನೀಡುವುದರ ಮೂಲಕ ಮತ್ತೊಂದು ಹೊಸ ಸಾಹಸಕ್ಕೆ ಜೀ ಕನ್ನಡ ಕೈ ಹಾಕಿದೆ. ವಾರಾಂತ್ಯದ ಮನೋರಂಜನೆಯಲ್ಲಿ ವಿಭಿನ್ನ ರೀತಿಯ ಶೋ ಗಳನ್ನು ನೀಡುವುದರ ಮೂಲಕ ನಿಮ್ಮ ಮನ ಗೆದ್ದಿದೆ.

Written by - Bhavishya Shetty | Last Updated : May 25, 2023, 12:36 PM IST
    • ತನ್ನ ವೀಕ್ಷಕರಿಗೆ ಸೃಜನಾತ್ಮಕ ಕಥೆಗಳನ್ನು ನೀಡುವುದರಲ್ಲಿ ಜೀ ಕನ್ನಡ ಸದಾ ಮುಂಚೂಣಿಯಲ್ಲಿದೆ.
    • ಫಿಕ್ಷನ್-ನಾನ್ ಫಿಕ್ಷನ್ ಎರಡೂ ವಿಭಾಗಗಳಲ್ಲಿ ಮೈಲಿಗಲ್ಲನ್ನ ಸೃಷ್ಟಿಸಿದೆ.
    • ನಾನ್ ಸ್ಟಾಪ್ ಮನೋರಂಜನೆ ನೀಡುವುದರ ಮೂಲಕ ಮತ್ತೊಂದು ಹೊಸ ಸಾಹಸಕ್ಕೆ ಜೀ ಕನ್ನಡ ಕೈ ಹಾಕಿದೆ
ಕಿರುತೆರೆಯಲ್ಲಿ ಹೊಸ ಅಧ್ಯಾಯ ಸೃಷ್ಟಿ ಮಾಡಲು ಬರ್ತಾ ಇದೆ ಹೊಸ ಕಥೆ ‘ಅಮೃತಧಾರೆ’…! title=
Amrithadhare

Zee Kannada New Serial: ಅದ್ದೂರಿತನಕ್ಕೆ-ಹೊಸತನಕ್ಕೆ ಇನ್ನೊಂದು ಹೆಸರು ಜೀ ಕನ್ನಡ. ವಿಭಿನ್ನ ಪ್ರಯತ್ನಗಳಿಂದಲೇ ಕನ್ನಡಿಗರ ಮನಗೆದ್ದಿರುವ ಹೆಮ್ಮೆಯ ವಾಹಿನಿ, ಇದೀಗ  ತನ್ನ ವೀಕ್ಷಕರಿಗಾಗಿ ಹೊಸ ಕಥೆಯೊಂದನ್ನು ಹೊತ್ತು ತರುತ್ತಿದೆ. ಅಮೃತಧಾರೆ ಇದೇ ಮೇ 29 ರಿಂದ ಸಂಜೆ 7 ಕ್ಕೆ ಪ್ರಸಾರವಾಗಲಿದೆ.

ತನ್ನ ವೀಕ್ಷಕರಿಗೆ ಸೃಜನಾತ್ಮಕ ಕಥೆಗಳನ್ನು ನೀಡುವುದರಲ್ಲಿ ಜೀ ಕನ್ನಡ ಸದಾ ಮುಂಚೂಣಿಯಲ್ಲಿದೆ. ಫಿಕ್ಷನ್-ನಾನ್ ಫಿಕ್ಷನ್ ಎರಡೂ ವಿಭಾಗಗಳಲ್ಲಿ ಮೈಲಿಗಲ್ಲನ್ನ ಸೃಷ್ಟಿಸಿದೆ. ನಾನ್ ಸ್ಟಾಪ್ ಮನೋರಂಜನೆ ನೀಡುವುದರ ಮೂಲಕ ಮತ್ತೊಂದು ಹೊಸ ಸಾಹಸಕ್ಕೆ ಜೀ ಕನ್ನಡ ಕೈ ಹಾಕಿದೆ. ವಾರಾಂತ್ಯದ ಮನೋರಂಜನೆಯಲ್ಲಿ ವಿಭಿನ್ನ ರೀತಿಯ ಶೋ ಗಳನ್ನು ನೀಡುವುದರ ಮೂಲಕ ನಿಮ್ಮ ಮನ ಗೆದ್ದಿದೆ. ಅಭೂತಪೂರ್ವ 19 ಸರಿಗಮಪ ಸೀಸನ್ ಗಳು, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸೂಪರ್ ಕ್ವೀನ್, ಜೋಡಿ ನಂಬರ್ 1 ಜೊತೆಗೆ ಈಗ 10 ವರ್ಷಗಳ ನಂತರ ಮತ್ತೊಮ್ಮೆ ಛೋಟಾ ಚಾಂಪಿಯನ್ ನ ಹೊಸ ಸೀಸನ್ ವೀಕ್ಷಕರನ್ನು ರಂಜಿಸುತ್ತಿದ್ದು ದೈನಂದಿನ ಧಾರವಾಹಿಗಳಲ್ಲಿ ಹೊಸ ಸೇರ್ಪಡೆಯನ್ನು ಮಾಡುತ್ತಿದೆ.

ಇದನ್ನೂ ಓದಿ: ಸುಮಲತಾ ಅವರ ಅನೈತಿಕ ಬೆಂಬಲದಿಂದಲೇ ʼಬಿಜೆಪಿ ಸೋತಿತುʼ..!

ಈಗಾಗಲೇ ನವನವೀನ ಪ್ರಯತ್ನಗಳೊಂದಿಗೆ ಶುರುವಾದಂತಹ ಕಥೆಗಳಾದ ಹೆಣ್ಣು ಹೆತ್ತವರ ಕನಸು ಗಟ್ಟಿಮೇಳ ಮತ್ತು ಪಾರು ಸಾವಿರ ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿವೆ.

ಹೆಣ್ಣು ಮಕ್ಕಳ ಪ್ರತಿ ಜೀವನದಲ್ಲೂ ಈ ರೀತಿಯ ಆಪ್ತ ಕಥೆಗಳು ಇರುತ್ತವೆ. ಅದರಂತೆ ಮಹಾನಟಿ ಉಮಾಶ್ರೀ ಅವರ ಪುಟ್ಟಕ್ಕನ ಮಕ್ಕಳು ಸಹ ವೀಕ್ಷಕರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ. ಪುಟ್ಟಕ್ಕನ ಮಕ್ಕಳು ಆರಂಭದಲ್ಲಿ ಬ್ಲಾಕ್ ಬಸ್ಟರ್ ರೇಟಿಂಗ್ ಪಡೆಯುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡು ಕರ್ನಾಟಕದ ನಂಬರ್ 1 ಧಾರವಾಹಿ ಆದದ್ದು ಒಂದು ಇತಿಹಾಸ.

ಹೆಣ್ಣು ಮಕ್ಕಳು ಹೀಗೂ ಇರಬಹುದು ಎಂದು ತೋರಿಸಿಕೊಟ್ಟ ಕಥೆಯೇ ಸತ್ಯ, ಇನ್ನು ಭಗವಂತನೇ ಭೂಮಿಗೆ ಬಂದರೆ ಏನಾಗಬಹುದು ಎಂದು ಕುತೂಹಲ ಸೃಷ್ಟಿಸಿ ಮನಗೆದ್ದ  ಕಥೆ ಭೂಮಿಗೆ ಬಂದ ಭಗವಂತ. ಇನ್ನು ಹಿಟ್ಲರ್ ಕಲ್ಯಾಣ, ಶ್ರೀರಸ್ತು ಶುಭಮಸ್ತು ಕಥೆಗಳು ಕನ್ನಡಿಗರನ್ನ ಮನರಂಜಿಸೋಕೆ ಸದಾ ಸನ್ನದ್ಧ ಎಂಬುವಂತೆ ಪ್ರಸಾರವಾಗುತ್ತಿವೆ. ಹೀಗೆ ವಿಭಿನ್ನ ರೀತಿಯ ಪ್ರಯತ್ನಗಳನ್ನ ಮಾಡಿಕೊಂಡು ಬಂದಿರುವ ಜೀ ಕನ್ನಡ ಇದೀಗ ಹೊಸ ಕಥೆಯನ್ನು ತನ್ನ ವೀಕ್ಷಕರ ಮುಂದಿಡುತ್ತಿದೆ. ಅದೇ ಅಮೃತಧಾರೆ.

ಎರಡು ಜೀವಗಳನ್ನ ಬೆಸೆಯೋ ಮದುವೆ ಆಗೋ ವಯಸ್ಸಲ್ಲೇ ಆಗಬೇಕು ಅನ್ನೋದು ಸಮಾಜದ ನಿಲುವು! ಇಲ್ಲಿ ಕಥಾನಾಯಕ ಗೌತಮ್- ಕಥಾನಾಯಕಿ ಭೂಮಿಕಾ ಅವರವರ ಕುಟುಂಬಕ್ಕೋಸ್ಕರ ಶ್ರಮಿಸುತ್ತಲೇ ತಮ್ಮ ಕನಸುಗಳನ್ನೇ ಬದಿಗಿಟ್ಟಿದ್ದಾರೆ. ಮದುವೆಯನ್ನ ಮುಂದೂಡಿ ಈಗ ಎಲ್ಲ ಇದ್ದೂ ಒಂಟಿಯಾಗಿದ್ದಾರೆ. ಒಂಟಿ ಜೀವಗಳೆರೆಡೂ ಒಂದಾಗೋದು ಹೇಗೆ? ಒಂದಾದ್ರೆ ಒಲವಿನ ಅಮೃತಧಾರೆ ಆಗಲೇಬೇಕಲ್ಲವೇ ಅನ್ನುವುದು 'ಅಮೃತಧಾರೆ' ಧಾರವಾಹಿಯ ಕಥಾ ಹಂದರ!

45 ವರ್ಷದ ಉದ್ಯಮಿ ಗೌತಮ್ ದಿವಾನ್ ಮತ್ತು 35 ವರ್ಷದ ಭೂಮಿಕಾ ಮದ್ಯಮ ವರ್ಗದ ವಿದ್ಯಾವಂತ ಮಹಿಳೆ.  ನಮ್ಮ ಕಥಾನಾಯಕ ಮತ್ತು ಕಥಾನಾಯಕಿ ತಮ್ಮ ಕುಟುಂಬಕ್ಕೋಸ್ಕರ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ದರಾಗಿದ್ದಾರೆ. ಈ ಒಂಟಿ ಜೀವಗಳೆರಡು ಒಂದಾದರೆ ಅದೇ ಒಲವಿನ ಅಮೃತಧಾರೆಯಾಗಲಿದೆ.

ಈಗಾಗಲೇ ಪ್ರೊಮೋ ನೋಡಿರುವ ಹಾಗೆ ನಾಯಕ ನಾಯಕಿಯ ಕೋಳಿ ಜಗಳ ವೀಕ್ಷಕರಲ್ಲಿ ಕೌತುಕ ಸೃಷ್ಟಿಸಿದೆ. ಇಬ್ಬರೂ ಹೊಂದಿಕೊಂಡಿದ್ದರೆ ಅದೊಂದು ಬೊಂಬಾಟ್ ಕಥೆ.. ಅದೇ ಇಬ್ರು ಕಿತ್ತಾಡಿಕೊಂಡಿದ್ದರೆ ಅದು ಬೇರೇನೆ ಕಥೆ. ಹೀಗೆ ಸದಾ ಹಾವು ಮುಂಗುಸಿ ಥರ ಕಿತ್ತಾಡ್ತಿರೋ ನಮ್ಮ ನಾಯಕ ನಾಯಕಿ ಒಲವಿನ ಸುಳಿಯಲ್ಲಿ ಸಿಕ್ಕಿ ಬೀಳ್ತಾರಾ? ಇವರಿಬ್ರೂ ಒಂದಾಗುತ್ತಾರಾ! ಒಂದಾದರೆ ಆ ಕಥೆ ಮುಂದೆ ಹೇಗಿರತ್ತೆ ಅನ್ನೋದು ವೀಕ್ಷಕ ಪ್ರಭುವಿನ ಕೌತುಕದ ಪ್ರಶ್ನೆ!

ಅದ್ದೂರಿ ತನಕ್ಕೆ ಇನ್ನೊಂದು ಹೆಸರಾಗಿರುವ ಜೀ ಕನ್ನಡ ಮಾಡಿರುವ ಇಷ್ಟು ಧಾರಾವಾಹಿಗಳು ಕಿರುತೆರೆಯ ಸಿನಿಮಾಗಳೆಂದೇ ಹೆಸರುವಾಸಿ! ಈಗಾಗಲೇ ಸಿನಿಮಾ ನಟ-ನಟಿಯರನ್ನು ಬೆಳ್ಳಿತೆರೆಯೊಟ್ಟಿಗೆ ಕಿರುತೆರೆ ಮೂಲಕ ಮನೆ ಮನೆಯಲ್ಲೂ ನೆನೆಯುವಂತೆ ಮಾಡಿದೆ ಜೀ ಕನ್ನಡ! 

ವಿಶಿಷ್ಟ ಕಥೆಯ ಪಾತ್ರಗಳಿಗೆ ಅದ್ದೂರಿ ತಾರಗಣವೇ ಜೀವ ತುಂಬುತ್ತಿದೆ. ಹೆಸರಾಂತ ನಟ ರಾಜೇಶ್ ನಟರಂಗ ನಾಯಕರಾಗಿ ಮತ್ತು ನಟಿ ಛಾಯಾ ಸಿಂಗ್ ಕನ್ನಡಿಗರನ್ನ ಮನರಂಜಿಸೋಕೆ ಸಜ್ಜಾಗಿದ್ದಾರೆ‌. ಇನ್ನೂ ಬಹು ತಾರಾಂಗಣದ ಈ ಧಾರಾವಾಹಿಯಲ್ಲಿ  ಚಿತ್ರಾ ಶೆಣೈ, ಸಿಹಿ ಕಹಿ ಚಂದ್ರು, ವನಿತಾ ವಾಸು, ಅಮೃತ ನಾಯಕ್, ಶಶಿ ಹೆಗ್ಡೆ ಮತ್ತು ಕಿರುತೆರೆಯಲ್ಲಿ ಮಿಂಚಿದ ಸಾರಾ ಅಣ್ಣಯ್ಯ ಅಭಿನಯಿಸುತ್ತಿದ್ದಾರೆ.

ಇನ್ನು ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಕೀರ್ತಿ ಅಕ್ಷಯ್ ಸಂಸ್ಥೆ ಹೊತ್ತಿದ್ದು, ಬೆಳ್ಳಿತೆರೆಯಲ್ಲಿ ರಾಕಿ ಭಾಯ್ ಗೆ ಆಕ್ಷನ್ ಕಟ್ ಹೇಳಿದ ಮಹೇಶ್ ರಾವ್ ರವರು ಈಗ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಉತ್ತಮ್ ಮಧು ನಿರ್ದೇಶಿಸಲಿದ್ದಾರೆ. ಕಿರುತೆರೆಯ ಹಲವಾರು ಹಿಟ್ ಸಾಂಗ್‌ ಗಳನ್ನ ನೀಡಿರೋ ಸುನಾದ್ ಗೌತಮ್ ಶೀರ್ಷಿಕೆ ಗೀತೆಗೆ ಸಂಗೀತ ನೀಡಿದ್ದು, ಸುಧೀಂದ್ರ ಭಾರದ್ವಾಜ್, ಚೇತನ್ ಸೊಲಗಿ ಸಾಹಿತ್ಯ ರಚಿಸಿದ್ದಾರೆ.

ಇದನ್ನೂ ಓದಿ: ರಾಜಧಾನಿಯಲ್ಲಿ ನಾಳೆ ಪವರ್ ಕಟ್: ನಿಮ್ಮ ಏರಿಯಾ ಬಗ್ಗೆ ಈಗಲೇ ಚೆಕ್ ಮಾಡಿ!

ಇದೇ ಮೇ 29ರ ಸೋಮವಾರದಿಂದ ಸಂಜೆ 7ಕ್ಕೆ ಶುರುವಾಗಲಿರುವ ಈ ಅಮೃತಧಾರೆ ಕಥೆ ನಿಮ್ಮನ್ನು ರಂಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News