ಬೆಂಗಳೂರು: ಅದೇನೋ ಗೊತ್ತಿಲ್ಲ 'ಕಬ್ಜ' ಸಿನಿಮಾ ದಿನದಿಂದದಿನಕ್ಕೆ ಮುಗಿಲೆತ್ತರಕ್ಕೆ ಕೇಳುವ ರೀತಿಯಲ್ಲೇ ಸೌಂಡ್ ಮಾಡುತ್ತಿದೆ. ರಿಲೀಸ್ ಆಗಿದ್ದ ಒಂದೇ ಒಂದು ಟೀಸರ್ ಚಿತ್ರಪ್ರೇಮಿಗಳ ನಿದ್ದೆಯನ್ನೇ ಕದ್ದಿದೆ.ಕಪ್ಪುಬಿಳುಪಿನ ಲೋಕದಲ್ಲಿ ಆಗೋ ರೋಚಕ ಕಥೆಯನ್ನ ಬಿಗ್ ಸ್ಕ್ರೀನ್ ಮೇಲೆ ನೋಡಿ ಆನಂದಿಸಲು ಮಾರ್ಚ್ 17ರವರೆಗೆ ಕಾಯಲೇಬೇಕು.


COMMERCIAL BREAK
SCROLL TO CONTINUE READING

ಆದ್ರೆ ಈಗ ಸಿಕ್ಕಿರೋ ಮತ್ತೊಂದು ಬಿಗ್ ಮ್ಯಾಟರ್ ಏನಪ್ಪಾ ಅಂದ್ರೆ ಆರ್​. ಚಂದ್ರು ನಿರ್ದೇಶನದ  ಕಬ್ಜ ಸಿನಿಮಾ ಈಗಾಗಲೇ ಟೀಸರ್​ ಮೂಲಕ ಸೂಪರ್ ಆಗೇ ಕ್ರೇಜ್ ಕ್ರಿಯೇಟ್ ಮಾಡಿದೆ. ಆದ್ರೆ ಈಗ ಹಾಡುಗಳ ಮೂಲಕ ಧೂಳೆಬ್ಬಿಸಲು ಪ್ಲ್ಯಾನ್​ ರೆಡಿ ಆಗಿದೆ. ಫೆಬ್ರವರಿ ರಂದು ‘ಕಬ್ಜ’ ಸಿನಿಮಾದ ಮೊದಲ ಹಾಡಿನ ಲಿರಿಕಲ್​ ವಿಡಿಯೋ ರಿಲೀಸ್​ ಆಗಲಿದೆ. ಅದಕ್ಕಾಗಿ ಹೈದರಾಬಾದ್​ನಲ್ಲಿ  ಬಹುದೊಡ್ಡ ವೇದಿಕೆ ದೊಡ್ಡಮಟ್ಟದಲ್ಲೇ ಸಜ್ಜಾಗುತ್ತಿದೆ.


ಇದನ್ನೂ ಓದಿ: Political : ಸಿದ್ದರಾಮಯ್ಯ , ಡಿಕೆಶಿ, ಖರ್ಗೆಯವರ ಮಕ್ಕಳು ಬಿಜೆಪಿ ಸೇರಲಿದ್ದಾರೆ..!


ಕೆಜಿಎಫ್​’ ಮತ್ತು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಸೂಪರ್ ಡೂಪರ್ ಹಾಡುಗಳನ್ನ ಕೊಟ್ಟ ರವಿ ಬಸ್ರೂರು  ಅವರೇ ಕಬ್ಜ ಸಿನಿಮಾಗೂ ಮ್ಯೂಸಿಕ್ ಡೈರೆಕ್ಟರ್. ರವಿ ಬಸ್ರೂರು ಸಂಗೀತ ಅಂದ್ರೆ ಕೇಳ್ಬೇಕಾ ಅದು ಯಾವತ್ತಿಗೂ ಹಿತ ಅನಿಸುವಂತೆ ಇದ್ದೇ ಇರುತ್ತೆ ಅನ್ನೋದನ್ನ ನಾವು ಗಮನಿಸಲೇ ಬೇಕು.ರವಿ ಬಸ್ರೂರು ಅವರು ನಮ್ಮ ಸಿನಿಮಾಗೂ ಸಂಗೀತ ಮಾಡಲಿ ಅಂತ ಎಲ್ಲಾ ರಂಗದವರು ಅವರ ಹಿಂದೆ ಬಿದ್ದಿರೋ ಮ್ಯಾಟರ್ ನಿಮ್ಗೆ ಗೊತ್ತೇ ಇದೆ.ಇದೀಗ ಕಬ್ಜ ಸಿನಿಮಾದ  ಹಾಡು ಗಳು ಯಾವ ರೀತಿ ಕಮಲ್ ಮಾಡುತ್ತೆ ಅನ್ನೋದನ್ನ ಕಾದು ನೋಡೋಣ.


ಇದನ್ನೂ ಓದಿ: ಗಾಂಧಿ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಮಾಡಬೇಕು: ಸಿಎಂ ಬೊಮ್ಮಾಯಿ


ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.