ಬೆಂಗಳೂರು : ನಗರದ ಬಿಜೆಪಿ ರಾಜ್ಯ ಮುಖ್ಯ ಕಚೇರಿ ಜಗನ್ನಾಥ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಇವತ್ತು ಕಾಂಗ್ರೆಸ್ ಮಾಜಿ ಶಾಸಕ ವಾಸು ಪುತ್ರ ಕವೀಶ್ ಗೌಡ ಬಿಜೆಪಿ ಸೇರಿದಾರೆ,ಮುಂದಿನದಿನಗಳಲ್ಲಿ ಸಿದ್ದರಾಮಯ್ಯ , ಡಿಕೆಶಿ, ಖರ್ಗೆಯವರ ಮಕ್ಕಳು ಸಹ ಬಿಜೆಪಿ ಸೇರ್ತಾರೆ.ರಾಷ್ಟ್ರಾದ್ಯಂತ ಬಿಜೆಪಿ ಪರ್ವ ಶುರುವಾಗಲಿದೆ, ಎಂದರು.
ಕಾರ್ಯಕ್ರಮದಲ್ಲಿ ಮಾತಾನ್ನಾಡಿದ ಕಟೀಲ್,ಬಿಜೆಪಿ ಮೊದಲು ಕೊರೋನಾ ವಾರಿಯರ್ಸ್ ಗೆ ಲಸಿಕೆ ಕೊಡ್ತು.ಕಾಂಗ್ರೆಸ್ ಇದ್ದಿದ್ರೆ ಮೊದಲು ಸೋನಿಯಾ, ರಾಹುಲ್, ಪ್ರಿಯಾಂಕಾ, ನಂತರ ವಾಧ್ರಾ, ಉಳಿದರೆ ಖರ್ಗೆಯವರಿಗೆ ಲಸಿಕೆ ಕೊಡ್ತಿತ್ತು,ಬಿಜೆಪಿ ಮನೆತನ ದ ಹಿನ್ನೆಲೆ, ಕುಟುಂಬದ ರಾಜಕಾರಣ ನೋಡಲ್ಲ.ಹಾಗಾಗಿ ಇಲ್ಲಿ "ಚಾ" ಮಾರುವಾತ ಪ್ರಧಾನಿ ಆಗ್ತಾನೆ, ಭಿತ್ತಿ ಪತ್ರ ಅಂಟಿಸುವಾತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಆಗ್ತಾನೆ, ಹಳ್ಳಿಯಿಂದ ಬಂದವ ರಾಜ್ಯಾಧ್ಯಕ್ಷ ಆಗ್ತಾನೆ ,ಎಂದು ಬಿಜೆಪಿ ಹೊಗಳಿ , ಕಾಂಗ್ರೇಸ್ ನಾಯಕರ ಲೇವಡಿ ಮಾಡಿದರು.
ಇದನೂ ಓದಿ: ಸಾಹಸ ಸಿಂಹನಿಗೆ ʼಕರ್ನಾಟಕ ರತ್ನʼ ಗೌರವ ನೀಡುವ ಭರವಸೆ ನೀಡಿದ ಸಿಎಂ..!
ಇಂದು ಹಳೇ ಮೈಸೂರಿನ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ.ಪರಿವಾರವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದ ಪಕ್ಷಕ್ಕೆ ಇವರೆಲ್ಲ ಬಂದಿದ್ದಾರೆ.ದೇಶದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.ಐದು ವರ್ಷದ ಹಿಂದೆ ಕಾಂಗ್ರೆಸ್, ಜೆಡಿಎಸ್ ನಿರಾಕರಿಸಿದ್ರು ಜನ , ಅನೈತಿಕ ಸಂಬಂಧದಿಂದ ಸರ್ಕಾರ ರಚಿಸಿದ್ರು ಕಾಂಗ್ರೆಸ್-ಜೆಡಿಎಸ್.ಈ ಅನೈತಿಕ ಸರ್ಕಾರ ಜನರಿಗೆ ಇಷ್ಟ ಆಗಲಿಲ್ಲ,ಮೊದಲ ಬಾರಿಗೆ ಆಡಳಿತ ಪಕ್ಷಗಳ 17 ಜನ ವಿರೋಧ ಪಕ್ಷ ಸೇರಿ ವಿರೋಧ ಪಕ್ಷವನ್ನು ಅಧಿಕಾರಕ್ಕೆ ತಂದ್ರು.ಕಾಂಗ್ರೆಸ್‌ನವರ ಬಸ್ ಹೊರಟಿದೆ, ಹೋಗ್ತಾಹೋಗ್ತಾ ಅದರ ಬ್ರೇಕ್ ಫೇಲ್ ಆಗುತ್ತೆ.
ಜೆಡಿಎಸ್ ನ ಪಂಚರತ್ನ ರತ್ನ ಯಾತ್ರೆ ಪಂಕ್ಚರ್ ಆಗುತ್ತೆ.ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುತ್ತೆ ಎಂದು ಭವಿಷ್ಯ ನುಡಿದರು.
ಇದನೂ ಓದಿ:Siddaramaiah : 'ನಾನು ಉತ್ತರ ಕರ್ನಾಟಕ ಭಾಗದ 112 ಕ್ಷೇತ್ರದಲ್ಲಿ ಯಾತ್ರೆ ಮಾಡುತ್ತೆನೆ'
ಇಂದು ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಕವೀಶ್ ಗೌಡ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು, ಇನ್ನು ಇವರು ಮಾಜಿ ಶಾಸಕ ವಾಸು ಅವರ ಪುತ್ರ. ಇನ್ನು ಇವರ ಜೊತೆ ಹುಣಸೂರು ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಬಿಜೆಪಿ ಸೇರ್ಪಡೆ ಆದರು. ಜೊತೆಗೆ, ಸಕಲೇಶಪುರದ ನಿವೃತ್ತ ಇಂಜಿನಿಯರ್ ವೆಂಕಟೇಶ್ ಬಿಜೆಪಿ ಸೇರ್ಪಡೆ ಆಗುವ ಜೊತೆಗೆ ಅರಕಲಗೂಡಿನ ದಿವಾಕರ್ ಗೌಡ,ಹಾಸನದ ಕಾಂಗ್ರೆಸ್ ಮುಖಂಡ ಸಿ ವಿ ರಾಜಪ್ಪ,ಮಹಾಲಕ್ಷ್ಮಿ ಲೇಔಟ್ ನ ಜೆಡಿಎಸ್ ಮುಖಂಡ ಗಿರೀಶ್ ನಾಶಿ ಸೇರ್ಪಡೆಗೊಂಡರು. ಇವರ ಜೊತೆ ಬೆಂಬಲಿಗರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಸಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.