Kabzaa Pre Release Event  : ಕಬ್ಜ ಫೀವರ್ ಜೋರಾಗಿದೆ.. ಕರುನಾಡು ಮಾತ್ರವಲ್ಲ.. ಇಡೀ ದೇಶವನ್ನೇ ವ್ಯಾಪಿಸಿದೆ.. ಕನ್ನಡಿಗರಷ್ಟೇ ಅಲ್ಲ.. ತಮಿಳರು, ತೆಲುಗರು, ಹಿಂದಿಯವರು ಎಂಬ ಬೇಧವಿಲ್ಲದೆ ಎಲ್ಲಾ ಭಾಷಿಗರು ಒಂಟಿಗಾಲಲ್ಲಿ ನಿಂತು ಕಾಯ್ತಿರೋ ಸಿನಿಮಾ ಕಬ್ಜ.. ಈಗಾಗಲೇ ಮುಂಬೈನತ್ತಲೂ ಇಡೀ ಚಿತ್ರತಂಡ ಹೋಗಿಬಂದಿದೆ.. ಕಬ್ಜ ಅಲೆಯಲ್ಲ ಸುನಾಮಿಯನ್ನೇ ಎಬ್ಬಿಸಿದೆ.. ಹೈದರಬಾದ್‍ಗೂ ಎಂಟ್ರಿಕೊಟ್ಟು ಅಬ್ಬರದ ಪ್ರಚಾರವನ್ನ ಮಾಡಿದೆ.. ಹಾಗೆ ಚೆನೈನಲ್ಲೂ ರಿಯಲ್ ಹವಾ ಏನು ಅಂತ ತೋರಿಸಿಕೊಟ್ಟಿದೆ..


COMMERCIAL BREAK
SCROLL TO CONTINUE READING

ಕಬ್ಜದ ರುವಾರಿ, ಸಾರಥಿ ಆರ್.ಚಂದ್ರು ಇಡೀ ತಂಡವನ್ನ ಜೊತೆಯಲ್ಲಿ ಕರೆದುಕೊಂಡು ಕಾಲಿಗೆ ಚಕ್ರಕಟ್ಟಿಕೊಂಡಂತೆ ಪ್ರಮೋಷನ್‍ನಲ್ಲಿ ಬ್ಯುಸಿಯಾಗಿದ್ದಾರೆ.. ದೇಶದ ಮೂಲೆ ಮೂಲೆಯನ್ನೂ ಕಬ್ಜ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ ಆರ್.ಚಂದ್ರು..


ಇದನ್ನೂ ಓದಿ : ಪ್ಯಾಂಟ್ ಹಾಕದೇ ಫೋಟೋಗೆ ಪೋಸ್ ಕೊಟ್ಟ ನಟಿ, ನೆತ್ತಿಗೇರಿತು ನೆಟ್ಟಿಗರ ಕೋಪ!


ಇದೀಗ ಕನ್ನಡ ನೆಲದಲ್ಲಿ ದೊಡ್ಡ ಸಮಾರಂಭ ಮಾಡಿ ಮತ್ತಷ್ಟು ಕ್ರೇಜ್‍ನ ಹೆಚ್ಚಿಸಲು, ಕಬ್ಜ ಕಿಡಿಯನ್ನ ಜ್ವಾಲೆಯಾಗಿಸಲು ಟೊಂಕ ಕಟ್ಟಿನಿಂತಿದ್ದಾರೆ.. ಅದರಂತೆ ಮಂಗಳವಾರ ಬೆಂಗಳೂರಿನಲ್ಲಿ ಗ್ರ್ಯಾಂಡ್ ಪ್ರಿ-ರಿಲೀಸ್ ಈವೆಂಟ್‍ನ ಹಮ್ಮಿಕೊಳ್ಳಲಾಗಿದೆ..


ಸಂಜೆ 6.30ಕ್ಕೆ ಶುರುವಾಗುವ ಈ ಸಮಾರಂಭದಲ್ಲಿ ಉಪ್ಪಿ-ಸುದೀಪ್-ಶಿವಣ್ಣ ಮೂವರು ಇರ್ತಾರೆ.. ಅಷ್ಟೇ ಅಲ್ಲದೆ ಸ್ಯಾಂಡಲ್‍ವುಡ್ ನ ಮತ್ತಷ್ಟು ಮಗದಷ್ಟು ತಾರೆಯರಿಗೂ ಆಹ್ವಾನ ನೀಡಲಾಗಿದೆ..  ಹಲವು ತಾರೆಯರು ಪಾಲ್ಗೊಂಡು ಕಬ್ಜ ಈವೆಂಟ್‍ನ ಆಕರ್ಷಣೆಯನ್ನ ಮತ್ತಷ್ಟು ಹೆಚ್ಚಿಸಲಿದ್ದಾರೆ ಎನ್ನಲಾಗ್ತಿದೆ..


ಕಬ್ಜ ಸಿನಿಮಾ ಮಾರ್ಚ್ 17ರಂದು ತೆರೆಗೆ ಅಪ್ಪಳಿಸಲಿದೆ.. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಕೂಡ ಸ್ಟಾರ್ಟ್ ಆಗಿದೆ.. ಮೊದಲ ದಿನ, ಸೂರ್ಯ ಹುಟ್ಟೋ ಮುನ್ನವೇ ಕಬ್ಜ ಸಿನಿಮಾ ಕಣ್ತುಂಬಿಕೊಳ್ಳಲು ಚಿತ್ರರಸಿಕರು ಮುಗಿಬಿದ್ದಿದ್ದಾರೆ.. ಟಿಕೆಟ್ಸ್‍ಗಾಗಿ ಆನ್ಲೈನ್‍ನಲ್ಲಿ ನೂಕು ನುಗ್ಗಲು ನಡೆಸ್ತಿದ್ದಾರೆ.. ಹೊಲ ಹಸಿರಾಗಿದ್ರೆ ಭರ್ಜರಿ ಫಸಲು.. ಬುಕ್ ಮೈ ಶೋ ಕೆಂಪಾಗಿದ್ರೆ ನಿರ್ಮಾಪಕರ ಮೊಗದಲ್ಲಿ ಹೊನಲು..


ಇದನ್ನೂ ಓದಿ : Samantha: ನಾಗ ಚೈತನ್ಯ ಒಳ್ಳೆ ಗಂಡನಲ್ಲ, ಟಾರ್ಚರ್‌ ಕೊಟ್ಟ, ಅಬಾರ್ಷನ್ ಆಯ್ತು!


ಯೆಸ್ ಬುಕ್ ಮೈ ಶೋ ತೆರೆದು ನೋಡಿದ್ರೆ ಎಲ್ಲೆಲ್ಲೂ ಕೆಂಪು.. ಇದು ಕಬ್ಜಗಾಗಿ ಚಿತ್ರರಸಿಕರು ಯಾವ ರೀತಿ ಕುತೂಹಲಗೊಂಡಿದ್ದಾರೆ.. ಸಿನಿಮಾವನ್ನ ಥಿಯೇಟರ್‍ನಲ್ಲಿ ನೋಡಲು ಕಾಯ್ತಿದ್ದಾರೆ.. ಬಿಗ್‍ಸ್ಕ್ರೀನ್ ಮೇಲೆ ವಿಷ್ಯೂಯಲ್ ಟ್ರೀಟ್‍ನ ಅನುಭವಿಸಲು ಉತ್ಸಾಹ ತೋರಿಸ್ತಿದ್ದಾರೆ ಎಂಬುದಕ್ಕೆ ಸಾಕ್ಷಿ.


ಕಬ್ಜ ಚಿತ್ರತಂಡವೇ ಹೇಳಿಕೊಂಡಿದೆ ಇಂಡಿಯನ್ ಸಿನಿಮಾದ ನೆಕ್ಸ್ಟ್ ಬಿಗ್ ಥಿಂಗ್ಸ್ ಅಂದ್ರೆ ಅದು ಕಬ್ಜ ಅಂತ.. ನಿಜಕ್ಕೂ ಅದು ಕೇವಲ ಮಾತಲ್ಲ.. ಕೃತಿಯಲ್ಲೂ ಕಾಣಿಸ್ತಿದೆ.. ಬೆಂಗಳೂರು ಟು ಮುಂಬೈ ಕಬ್ಜ ಫೀವರ್ ಎಲ್ಲಾ ಕಡೆ ಆವರಿಸಿಕೊಂಡಿದೆ.. ಬಾಕ್ಸಾಫೀಸ್‍ನ ಚಳಿ ಬಿಡಿಸ್ತಿದೆ.. ಪಠಾಣ್ ನಂತರ ಡಲ್ ಆಗಿದ್ದ ಕಲೆಕ್ಷನ್‍ಗೆ ಕಿಕ್ ಕೊಡ್ತಿದೆ.. 500 ಕೋಟಿ ಮಿನಿಮಮ್ಮು ಎಂಬ ಮಾತು ಕೇಳಿ ಬರ್ತಾ ಇದೆ.. ಈಗಿನ ಕ್ರೇಜು, ಸುನಾಮಿ ನೋಡ್ತಿದ್ರೆ ಸಾವಿರ ದಾಟಿದ್ರೂ ಅಚ್ಚರಿಯಿಲ್ಲ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.