Kabzaa: ‘ಕಬ್ಜ’ ಸಿನಿಮಾದ ಸೃಷ್ಟಿಕರ್ತ ಆರ್.ಚಂದ್ರು ಹೀಯಾಳಿಸಿದವರು ಇಂದು ಸಲಾಂ ಹೊಡೆಯಲು ಕ್ಯೂ ನಿಂತಿದ್ದಾರೆ!
ಕಲೆ ಅನ್ನೋದು ಯಾರ ಸ್ವತ್ತು ಕೂಡ ಅಲ್ಲ.. ಯಾಕೆ ಈ ಮಾತು ಅಂದ್ರೆ ನಿಮ್ಗೆ ಗೊತ್ತೇ ಇದೆ. ಡೈರೆಕ್ಟರ್ ಆರ್.ಚಂದ್ರು ಎಂಥಹ ದೊಡ್ಡ ಸಾಹಸಕ್ಕೆ ಇಳಿದಿದ್ದಾರೆ ಅನ್ನೋದು. ‘ಕಬ್ಜ’ ಅನ್ನೋ ದೊಡ್ಡ ಬಜೆಟ್ ಸಿನಿಮಾದ ಕಂಪ್ಲೀಟ್ ಜವಾಬ್ದಾರಿ ಡೈರೆಕ್ಟರ್ ಆರ್.ಚಂದ್ರು ಹೊತ್ತಿದ್ದಾರೆ ಅಂದಾಗ ಇವರಿಗೆ ಯಾಕಪ್ಪ ಬೇಕು ಇವೆಲ್ಲಾ? ಗ್ಯಾರಂಟಿ ಕೈಸುಟ್ಟು ಕೊಳ್ಳುತ್ತಾರೆ ಅಂತಾ ಅನೇಕರು ಅವರನ್ನು ಹೀಯಾಳಿಸಿದ್ದೆ ಹೆಚ್ಚು ಅನ್ನೋ ಮಾತು ಈಗ ಅವರ ಆಪ್ತ ಬಳಗ ಹೇಳಿಕೊಳ್ಳುತ್ತಿದೆ.
ಬೆಂಗಳೂರು: ಕಲೆ ಅನ್ನೋದು ಯಾರ ಸ್ವತ್ತು ಕೂಡ ಅಲ್ಲ.. ಯಾಕೆ ಈ ಮಾತು ಅಂದ್ರೆ ನಿಮ್ಗೆ ಗೊತ್ತೇ ಇದೆ. ಡೈರೆಕ್ಟರ್ ಆರ್.ಚಂದ್ರು ಎಂಥಹ ದೊಡ್ಡ ಸಾಹಸಕ್ಕೆ ಇಳಿದಿದ್ದಾರೆ ಅನ್ನೋದು. ‘ಕಬ್ಜ’ ಅನ್ನೋ ದೊಡ್ಡ ಬಜೆಟ್ ಸಿನಿಮಾದ ಕಂಪ್ಲೀಟ್ ಜವಾಬ್ದಾರಿ ಡೈರೆಕ್ಟರ್ ಆರ್.ಚಂದ್ರು ಹೊತ್ತಿದ್ದಾರೆ ಅಂದಾಗ ಇವರಿಗೆ ಯಾಕಪ್ಪ ಬೇಕು ಇವೆಲ್ಲಾ? ಗ್ಯಾರಂಟಿ ಕೈಸುಟ್ಟು ಕೊಳ್ಳುತ್ತಾರೆ ಅಂತಾ ಅನೇಕರು ಅವರನ್ನು ಹೀಯಾಳಿಸಿದ್ದೆ ಹೆಚ್ಚು ಅನ್ನೋ ಮಾತು ಈಗ ಅವರ ಆಪ್ತ ಬಳಗ ಹೇಳಿಕೊಳ್ಳುತ್ತಿದೆ.
ಆದರೆ ಈಗ ಟೈಮ್ ಚೇಂಜ್ ಆಗಿದೆ. ಈಗ ಆರ್.ಚಂದ್ರು ಅವರ ಆಟ ಶುರುವಾಗಿದೆ. ‘ಕಬ್ಜ’ ಸಿನಿಮಾ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುವುದರ ಜೊತೆಗೆ ವ್ಯವಹಾರ ಕೂಡ ದೊಡ್ಡದಾಗೇ ಆಗುತ್ತಿದೆ. ಇದೀಗ ಅವರು ಸ್ಟಾರ್ ಡೈರೆಕ್ಟರ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಇಲ್ಲಿ ನಾವು ಆರ್.ಚಂದ್ರು ಅವರನ್ನು ಮೆಚ್ಚಲೇಬೇಕು. ಯಾಕಂದ್ರೆ ನೂರು ಜನರು ಸಾವಿರ ಮಾತನಾಡಿದ್ರೂ ನಾನಾಯಿತು, ನನ್ನ ಕೆಲಸ ಆಯಿತು. ನನ್ನ ಕೆಲಸ ಮಾತನಾಡಲಿ ಅಂತಾ ಟಾರ್ಗೆಟ್ ರೀಚ್ ಆಗೋ ಕಡೆ ಮಾತ್ರ ಗಮನಹರಿಸಿದ್ದಾರೆ. ಈಗ ನೋಡಿ ‘ಕಬ್ಜ’ ಸಿನಿಮಾ ರಿಲೀಸ್‍ಗೂ ಮೊದಲೇ 100 ಕೋಟಿ ರೂ. ಬಿಸಿನೆಸ್ ಮಾಡಿದೆ ಅನ್ನೋ ಮಾಹಿತಿ ಸಿಗುತ್ತಿದೆ.
Shivarajkumar : ಮತ್ತೆ 'ಭೈರತಿ ರಣಗಲ್' ಅವತಾರದಲ್ಲಿ ಅಬ್ಬರಿಸಲಿದ್ದಾರೆ ಹ್ಯಾಟ್ರಿಕ್ ಹೀರೋ ಶಿವಣ್ಣ!
ಇನ್ನೂ ಆರ್.ಚಂದ್ರು ಅವರ ಬಗ್ಗೆ ಹೇಳೋದಾದ್ರೆ ಇವರು ಮೊದಲಿಗೆ ಖ್ಯಾತ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಅವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಇವರು ‘ತಾಜ್ ಮಹಲ್’ ಚಿತ್ರಕ್ಕೆ ಅಕ್ಷನ್ ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡರು. ‘ತಾಜ್ ಮಹಲ್’ ಯಶಸ್ವಿಯ ಅಲೆಯಲ್ಲಿ ‘ಮೈಲಾರಿ’, ‘ಪ್ರೇಮ್ ಕಹಾನಿ’ ಹೀಗೆ ಅನೇಕ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ‘ಕಬ್ಜ’ ಅನ್ನೋ ಅದ್ಭುತ ಸಿನಿಮಾನ ವರ್ಲ್ಡ್ ವೈಡ್ ರಿಲೀಸ್ ಮಾಡೋ ಮೂಲಕ ಬಿಗ್ ಮ್ಯಾಜಿಕ್ ಮಾಡಲು ಹೊರಟಿದ್ದಾರೆ. ಈ ಸಿನಿಮಾ ಕರುನಾಡಿನ ದೇವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಮಾರ್ಚ್ 17ರಂದು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಮತ್ತು 2 ಹಾಡುಗಳು ಆಹಾ.. ಓಹೋ.. ಅನ್ನುವಂತಿದೆ. ಸೋ ಯಾರು ಏನೇ ನೆಗೆಟಿವ್ ಮಾತನಾಡಿದ್ರೂ ಗುರಿಯತ್ತ ಗಮನಹರಿಸಿ ಇವತ್ತು ಯಶಸ್ಸಿನ ಮೆಟ್ಟಿಲು ಹತ್ತುತ್ತಿರೋ ಡೈರೆಕ್ಟರ್ ಆರ್.ಚಂದ್ರು ಅವರಿಗೆ ‘ಜೀ ಕನ್ನಡ ನ್ಯೂಸ್’ ಕಡೆಯಿಂದ ಬಿಗ್ ಸಲ್ಯೂಟ್ ಮತ್ತು ಅಲ್ ದಿ ಬೆಸ್ಟ್.
ಇದನ್ನೂ ಓದಿ: Kabzaa: ಮಹಾಶಿವರಾತ್ರಿ ಹಬ್ಬಕ್ಕೆ ಮಹಾಶಿವನಿಗೆ ‘ಕಬ್ಜ’ ಚಿತ್ರದಿಂದ ಗೀತನಮನ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.