Video : ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವರ್ಕೌಟ್‌ ನೋಡಿ, ಅಪ್ಪು ಬಾಸ್‌ ನೆನಪಿಸಿಕೊಂಡ ಫ್ಯಾನ್ಸ್‌.!

Ashwini Puneeth Rajkumar Workout Video : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್‌ಗೆ ಮತ್ತೊಂದು ಹೆಸರಂತಿದ್ದರು. ಎಷ್ಟೇ ಬ್ಯುಸಿ ಆಗಿದ್ದರೂ ಅವರು ವರ್ಕೌಟ್‌ ಮಾತ್ರ ಮಿಸ್‌ ಮಾಡುತ್ತಿರಲಿಲ್ಲ. ಇದೀಗ ಅವರ​ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವರ್ಕೌಟ್ ಮಾಡುವ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ. 

Written by - Chetana Devarmani | Last Updated : Feb 18, 2023, 08:45 AM IST
  • ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವರ್ಕೌಟ್‌
  • ಅಶ್ವಿನಿ ವರ್ಕೌಟ್‌ ವಿಡಿಯೋ ಸಖತ್‌ ವೈರಲ್‌
  • ಅಪ್ಪು ಬಾಸ್‌ ನೆನಪಿಸಿಕೊಂಡ ಫ್ಯಾನ್ಸ್‌.!
Video : ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ವರ್ಕೌಟ್‌ ನೋಡಿ, ಅಪ್ಪು ಬಾಸ್‌ ನೆನಪಿಸಿಕೊಂಡ ಫ್ಯಾನ್ಸ್‌.!  title=
Ashwini Puneeth Rajkumar Workout Video

Ashwini Puneeth Rajkumar Workout Video : ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್‌ಗೆ ಮತ್ತೊಂದು ಹೆಸರಂತಿದ್ದರು. ಎಷ್ಟೇ ಬ್ಯುಸಿ ಆಗಿದ್ದರೂ ಅವರು ವರ್ಕೌಟ್‌ ಮಾತ್ರ ಮಿಸ್‌ ಮಾಡುತ್ತಿರಲಿಲ್ಲ. ಪುನೀತ್‌ ಅವರ ಅನೇಕ ಸಾಹಸ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದನ್ನು ನಾವೆಲ್ಲ ನೋಡಿದ್ದೇವೆ. ಅಪ್ಪು ಅವರಿಂದ ಸ್ಫೂರ್ತಿ ಪಡೆದು ಅದೆಷ್ಟೋ ಜನ ಫಿಟ್‌ನೆಸ್‌ ಕಾಯ್ದುಕೊಂಡಿದ್ದೂ ಇದೆ. ಇದೀಗ ಅವರ​ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ವರ್ಕೌಟ್ ಮಾಡುವ ವಿಡಿಯೋವೊಂದು ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ : Kiccha Sudeep : ಕಿಚ್ಚನ ʼಮೈ ಆಟೋಗ್ರಾಫ್‌ʼ ಸವಿನೆನಪಿಗೆ 17 ವರ್ಷ

ಪುನೀತ್​ ರಾಜ್‌ಮಾರ್ ಹಾದಿಯಲ್ಲೇ ಸಾಗುತ್ತಿರುವ ಅಶ್ವಿನಿ, ಪತಿಯ ಸ್ಟೈಲಿನಲ್ಲಿಯೇ ಜಿಮ್‌ನಲ್ಲಿ ವರ್ಕೌಟ್ ಮಾಡುವ ವಿಡಿಯೋ ಇದಾಗಿದೆ. ಪುನೀತ್ ಅಗಲಿಕೆಯ ನಂತರ  ಅಶ್ವಿನಿ ಪಿಆರ್‌ಕೆ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಹೊತ್ತರು. ಅಶ್ವಿನಿಯವರು ಇದೀಗ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತ, ಸ್ಯಾಂಡಲ್‌ವುಡ್‌ನಲ್ಲಿ ಸಕ್ರೀಯರಾಗಿದ್ದಾರೆ. ಇತ್ತೀಚೆಗೆ ಪ್ರಧಾನಿ ಮೋದಿ ಅವರ ಔತಣ ಕೂಟದಲ್ಲೂ ಭಾಗಿಯಾಗಿದ್ದು ವಿಶೇಷ. 

 

 

ಅಶ್ವಿನಿ ಪುನೀತ್​ ರಾಜ್‌ಕುಮಾರ್​ ಜಿಮ್​ನಲ್ಲಿ ವರ್ಕೌಟ್ ಮಾಡುವ ಶೈಲಿ ಕಂಡು ಪುನೀತ್​ ಫ್ಯಾನ್ಸ್‌ ತಮ್ಮ ಅಪ್ಪು ಅವರನ್ನು ನೆನೆಸಿಕೊಂಡಿದ್ದಾರೆ. ಅಲ್ಲದೇ ನೆಟ್ಟಿಗರು ಅಶ್ವಿನಿ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ. ಮತ್ತೆ ಕೆಲವರು ತಮ್ಮ ನೆಚ್ಚಿನ ನಟ ಪುನೀತ್‌ ಅವರನ್ನು ನೆನೆದು ಭಾವುಕರಾಗಿದ್ದಾರೆ. 

ಇದನ್ನೂ ಓದಿ : Alia Baby Photo Fact Check : ಆಲಿಯಾ ಪೋಸ್ಟ್‌ ಮಾಡಿದ್ದು ಅವರದೇ ಮಗುವಿನ ಫೋಟೋನಾ!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News