ಕೋಲ್ಕತ್ತಾ: 'ಕಚ್ಚಾ ಬದಾಮ್' ಗಾಯಕ ಭುವನ್ ಬಡ್ಯಾಕರ್ ಅವರು ಸೋಮವಾರ ಕಾರು (Car Accident) ಅಪಘಾತಕ್ಕೀಡಾಗಿದ್ದಾರೆ. 


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ವೈರಲ್ ಬೆಂಗಾಲಿ ಹಾಡನ್ನು (Bengali Song) ಹಾಡಿದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರ ಭುವನ್ ಬಡ್ಯಾಕರ್ (Bhuban Badyakar) ಹೊಸದಾಗಿ ಖರೀದಿಸಿದ ಕಾರನ್ನು ಓಡಿಸಲು ಕಲಿಯುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಅವರ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಭುವನ್ ಗಾಯಗೊಂಡಿದ್ದು, ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. 


ಇದನ್ನೂ ಓದಿ:  James Song Release: ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ಇಂದು ಬಿಡುಗಡೆ


ಭುವನ್ ಬಡ್ಯಾಕರ್ ಅವರ 'ಕಚ್ಚಾ ಬದಾಮ್' (Kacha Badam) ಹಾಡು ವೈರಲ್ ಆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದರು ಭುವನ್ ಬಡ್ಯಾಕರ್. ಅವರು ಬೀರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಕಡಲೆಕಾಯಿ ಮಾರಾಟ ಮಾಡುವಾಗ ಖರೀದಿದಾರರನ್ನು ಆಕರ್ಷಿಸಲು ಹಾಡನ್ನು ರಚಿಸಿದರು. ಅವರ ಹಾಡನ್ನು ನಂತರ ರೀಮಿಕ್ಸ್ ಮಾಡಲಾಯಿತು ಮತ್ತು ಯೂಟ್ಯೂಬ್‌ನಲ್ಲಿ (Youtube) ಅಪ್‌ಲೋಡ್ ಮಾಡಲಾಯಿತು ಅದು 50 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.  


ತೀರಾ ಇತ್ತೀಚೆಗೆ, ಕಳೆದ ವಾರ ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಸಮ್‌ಪ್ಲೇಸ್ ಎಲ್ಸ್ ಪಬ್‌ನಲ್ಲಿ ಭುವನ್ ಲೈವ್ ಪ್ರದರ್ಶನ ನೀಡಿದ್ದರು. ಹೊಳೆಯುವ ಜಾಕೆಟ್ ಮತ್ತು ಹೊಸ ರಾಕ್‌ಸ್ಟಾರ್ ಅವತಾರವನ್ನು ಧರಿಸಿ, ಬಡ್ಯಾಕರ್ ತಮ್ಮ ಸಾಮಾನ್ಯ ಸ್ವಭಾವಕ್ಕಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ:  Big B Tweet ಗೆ ಕನ್ಫ್ಯೂಸ್ ಆದ ಅಭಿಮಾನಿಗಳು Amitabh Bachchan ಗೆ ಹೇಳಿದ್ದೇನು ಗೊತ್ತಾ?


ನಟ ನೀಲ್ ಭಟ್ಟಾಚಾರ್ಯ ಅಪ್‌ಲೋಡ್ ಮಾಡಿದ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ (Instagram Reels) ಅವರು ತಮ್ಮದೇ ಆದ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಭುವನ್ ಬಡ್ಯಾಕರ್ ಅವರು ಪ್ರಸಿದ್ಧ ಹುಕ್ ಸ್ಟೆಪ್‌ಗಳನ್ನು ಮಾಡುತ್ತಿರುವ ಗುಂಪಿನೊಂದಿಗೆ ಹಾಡಿಗೆ ನೃತ್ಯ ಮಾಡಿದ್ದನ್ನು ಕಾಣಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.