James Song Release: ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ಇಂದು ಬಿಡುಗಡೆ

James Song Release: ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಜೇಮ್ಸ್' (James) ಸಿನಿಮಾದ ಟೀಸರ್ ಎಲ್ಲೆಲ್ಲೂ ಹವಾ ಎಬ್ಬಿಸಿತ್ತು. ಅಲ್ಲದೆ ಹಲವು ದಾಖಲೆಗಳನ್ನೂ 'ಜೇಮ್ಸ್' ಸಿನಿಮಾದ ಟೀಸರ್ ಪುಡಿ ಪುಡಿ ಮಾಡಿದೆ. ಇದೀಗ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.

Written by - Malathesha M | Edited by - Yashaswini V | Last Updated : Mar 1, 2022, 06:24 AM IST
  • ಬೆಟ್ಟದಷ್ಟು ನಿರೀಕ್ಷೆ ಹೊತ್ತು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಲು ‘ಜೇಮ್ಸ್‌’ ಸಜ್ಜಾಗಿದೆ
  • ಇಂದು ಜೇಮ್ಸ್ ಸಿನಿಮಾದ ಮೊದಲ ಹಾಡನ್ನ ಕನ್ನಡಿಗರು ಕೇಳಬಹುದಾಗಿದೆ.
  • ಅಪ್ಪು ಮೇಲಿನ ಅಭಿಮಾನ ಸಾಗರದಂತೆ ಭೋರ್ಗರೆಯುತ್ತಿದೆ.
James Song Release: ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ಇಂದು ಬಿಡುಗಡೆ title=
Appu's last film James Trade Mark song will release today

James Song Release: ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' (James) ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ಇಂದು ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ಬಿಡುಗಡೆ ಆಗಲಿದೆ. ಹೀಗಾಗಿ ಅದ್ಧೂರಿ ಸಮಾರಂಭ ಏರ್ಪಡಿಸಲಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ (Powerstar Puneeth Rajkumar) ಅವರ ಹಾಡು ಕಣ್ತುಂಬಿಕೊಳ್ಳಲು ದೇಶಾದ್ಯಂತ ಅಭಿಮಾನಿ ಬಳಗ ತುದಿಗಾಲಲ್ಲಿ ನಿಂತಿದೆ‌.

ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಜೇಮ್ಸ್' (James) ಸಿನಿಮಾದ ಟೀಸರ್ ಎಲ್ಲೆಲ್ಲೂ ಹವಾ ಎಬ್ಬಿಸಿತ್ತು. ಅಲ್ಲದೆ ಹಲವು ದಾಖಲೆಗಳನ್ನೂ 'ಜೇಮ್ಸ್' ಸಿನಿಮಾದ ಟೀಸರ್ ಪುಡಿ ಪುಡಿ ಮಾಡಿದೆ. ಇದೀಗ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.

ಇದನ್ನೂ ಓದಿ- James: ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' ನೋಡಲು ಚಿರಂಜೀವಿ, ಜೂ.ಎನ್‌ಟಿಆರ್‌ ಬರ್ತಾರಾ..?

ಎಲ್ಲೆಲ್ಲೂ ಸಂಭ್ರಮ:
ಅಪ್ಪು ಹುಟ್ಟುಹಬ್ಬಕ್ಕೆ 'ಜೇಮ್ಸ್' ರಿಲೀಸ್ (James Release) ಆಗಿ, ದೇಶಾದ್ಯಂತ ಹವಾ ಎಬ್ಬಿಸೋದು ಪಕ್ಕಾ ಆಗಿದೆ. ಬಿಡುಗಡೆಗೆ ಕೆಲ ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ವೇಗವಾಗಿ ಕೆಲಸಗಳು ಸಾಗುತ್ತಿವೆ. ಇದರ ನಡುವೆ ಚಿತ್ರದ ಪ್ರತಿಯೊಂದು ಅಪ್ ಡೇಟ್ ಕೂಡ ಕರುನಾಡಿನಲ್ಲಿ ಸಂಚಲನವನ್ನೇ ಸೃಷ್ಟಿಸುತ್ತಿದೆ. ಇಂದು ಜೇಮ್ಸ್ ಸಿನಿಮಾದ ಮೊದಲ ಹಾಡನ್ನ ಕನ್ನಡಿಗರು ಕೇಳಬಹುದಾಗಿದೆ.

ಇದನ್ನೂ ಓದಿ- 'ಜೇಮ್ಸ್‌' ಬಂದ್ರು ಜೇಮ್ಸ್..! ಪರಭಾಷೆಗಳಲ್ಲೂ ಹವಾ ಎಬ್ಬಿಸಿದ ಪುನೀತ್ ಸಿನಿಮಾ ಟೀಸರ್‌

ಒಟ್ನಲ್ಲಿ ಬೆಟ್ಟದಷ್ಟು ನಿರೀಕ್ಷೆ ಹೊತ್ತು ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಲು ‘ಜೇಮ್ಸ್‌’ ಸಜ್ಜಾಗಿದೆ. ಅಪ್ಪು ಮೇಲಿನ ಅಭಿಮಾನ ಸಾಗರದಂತೆ ಭೋರ್ಗರೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಮೂವಿ ಕೂಡ ತೆರೆಗೆ ಬರಲಿದ್ದು, ಕನ್ನಡ ಸಿನಿರಂಗಕ್ಕೆ ಅದು ಮರೆಯಲಾಗದ ದಿನ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News