Kajol liplock in The Trial : ಬಿಟೌನ್‌ನಲ್ಲಿ ಸದ್ಯ ಓಟಿಟಿ ಸಿನಿಮಾಗಳು ಸಖತ್‌ ಸೌಂಡ್‌ ಮಾಡುತ್ತಿವೆ. ಇಷ್ಟು ದಿನ ತಮನ್ನಾ ಲಸ್ಟ್‌ ಸ್ಟೋರಿ 2 ಮೂಲಕ ಸುದ್ದಿಯಲ್ಲಿದ್ದರು. ಅಲ್ಲದೆ, ಇಷ್ಟು ವರ್ಷದ ಸಿನಿ ಜರ್ನಿಯಲ್ಲಿ ಕಿಸ್‌ ಮತ್ತು ಹಸಿ ಬಿಸಿ ಪಾತ್ರದಲ್ಲಿ ಕಾಣಿಸಿಕೊಂಡಿರದ ನಟಿ ಇದೀಗ ಹಾಟ್‌ ಸೀನ್‌ಗಳಲ್ಲಿ ನಟಿಸುವ ಮೂಲಕ ತಮ್ಮ ರೂಲ್ಸ್‌ನ್ನು ತಾವೇ ಬ್ರೇಕ್‌ ಮಾಡಿದ್ದರು. ಇದೀಗ ಇವರ ಸಾಲಿಗೆ ನಟಿ ಕಾಜೋಲ್‌ ಸಹ ಸೇರಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ದಶಕಗಳಿಂದ ಚಿತ್ರರಂಗದ ಎಲ್ಲೆ ಮೀರದವರೂ ಕೂಡ ಒಟಿಟಿ ಸಿನಿಮಾಗಳು ಮತ್ತು ವೆಬ್ ಸೀರಿಸ್‌ಗಳಲ್ಲಿ ಕಿಸ್ ಸೀನ್‌ಗಳಲ್ಲಿ ಮತ್ತು ರೊಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮನ್ನಾ ಇತ್ತೀಚೆಗೆ ತನ್ನ ನೋ ಕಿಸ್ಸಿಂಗ್‌ ರೂಲ್ಸ್‌ನ್ನು ಬ್ರೇಕ್‌ ಮಾಡಿದ್ದರು. ವಿಜಯ್ ವರ್ಮಾ ಅವರೊಂದಿಗೆ ಚುಂಬನದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಬಾಲಿವುಡ್‌ನ ಹಿರಿಯ ನಟಿ ಕಾಜೋಲ್ ಕೂಡ ತಮನ್ನಾ ಅವರ ಹಾದಿಯಲ್ಲಿ ನಡೆಯುತ್ತಿದ್ದಾರೆ.


ಇದನ್ನೂ ಓದಿ: ಯಶ್‌ ʼಮೊದಲಾಸಲʼ ನಟಿ ಭಾಮಾ ಫೋಟೋಸ್‌ ವೈರಲ್‌..! ನೋಡಿ


ಬಾಲಿವುಡ್‌ ಬ್ಯೂಟಿ ಕಾಜೋಲ್ ಇತ್ತೀಚೆಗೆ 'ದಿ ಟ್ರಯಲ್' ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಈ ಸರಣಿಯು ಪ್ರಸ್ತುತ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ. ಅವರು ವಕೀಲ ನೊಯೊನಿಕಾ ಸೆಂಗುಪ್ತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಜೋಲ್ ತನ್ನ 48 ನೇ ವಯಸ್ಸಿನಲ್ಲಿ ನೋ ಕಿಸ್ಸಿಂಗ್ ನೀತಿಯನ್ನು ವೆಟ್‌ ಸರಣಿಗಾಗಿ ಮುರಿದಿದ್ದಾರೆ.


ಯಸ್‌.. ಒಂದಲ್ಲ ಎರಡಲ್ಲ ಸಾಲು ಸಾಲು ಕಿಸ್ಸಿಂಗ್ ದೃಶ್ಯಗಳನ್ನು ಮಾಡಿ ಕಾಜೋಲ್‌ ಅಚ್ಚರಿ ಮೂಡಿಸಿದ್ದಾರೆ. ಈ ಸರಣಿಯ ಎರಡು ಸಂಚಿಕೆಗಳಲ್ಲಿ, ಅವರು ಒಮ್ಮೆ ಅಲಿ ಖಾನ್ ಅವರೊಂದಿಗೆ ಮತ್ತು ಒಮ್ಮೆ ಜಿಶ್ಶು ಸೇನ್ ಗುಪ್ತಾ ಅವರೊಂದಿಗೆ ಲಿಪ್ ಲಾಕ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಸದ್ಯ ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


ಇದನ್ನೂ ಓದಿ: ಜಾಹೀರಾತಿಗೆ ಪಡೆದಿದ್ದ ಹಣವನ್ನೆಲ್ಲ ದಾನ ಮಾಡಿದ ಮಹೇಶ್‌ ಬಾಬು ಪುತ್ರಿ..!


ಕಾಜೋಲ್ ಚಿತ್ರರಂಗಕ್ಕೆ ಬಂದು ಸುಮಾರು 3 ದಶಕಗಳು ಕಳೆದಿವೆ. ಎಂದಿಗೂ ಚುಂಬನದ ದೃಶ್ಯವನ್ನು ಮಾಡಿಲ್ಲ. ಆದ್ರೆ ಇತ್ತೀಚಿಗೆ ಅವರು ಮಾಡಿರುವ ಈ ಬೋಲ್ಡ್ ದೃಶ್ಯಗಳು ಆಕೆಯ ಅಭಿಮಾನಿಗಳು ಹಾಗೂ ಸಿನಿಪ್ರೇಮಿಗಳನ್ನು ಅಚ್ಚರಿಗೊಳಿಸಿವೆ. ಈ ದೃಶ್ಯಗಳನ್ನು ಮಾಡಿದ್ದಕ್ಕಾಗಿ ಕೆಲವರು ಆಕೆಯನ್ನು ಶ್ಲಾಘಿಸುತ್ತಿದ್ದರೆ, ಇನ್ನು ಕೆಲವರು ಟೀಕಿಸುತ್ತಿದ್ದಾರೆ. 


ಈ ವಯಸ್ಸಿನಲ್ಲಿ ಆ ದೃಶ್ಯಗಳು ಬೇಕಾ..? ಎಂದು ನೆಟ್ಟಿಗರು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. 'ದಿ ಟ್ರಯಲ್' ಎಂಬುದು ಅಮೆರಿಕಾದ ವೆಬ್ ಸರಣಿ 'ದಿ ಗುಡ್ ವೈಫ್' ನ ಭಾರತೀಯ ಆವೃತ್ತಿಯಾಗಿದೆ. ಪತಿಯಿಂದ ವಂಚನೆಗೊಳಗಾದ ವಕೀಲೆಯ ಸುತ್ತ ಈ ಸರಣಿಯು ಸುತ್ತುತ್ತದೆ. ಈ ಸರಣಿಯಲ್ಲಿ ಕಾಜೋಲ್ ಅಭಿನಯವನ್ನು ವಿಮರ್ಶಕರು ಕೂಡ ಹೊಗಳಿದ್ದಾರೆ.  


ಇದನ್ನೂ ಓದಿ: Modi Surname Case: ಸುಪ್ರೀಂಕೋರ್ಟ್ ಗೆ ಮೊರೆಹೋದ ರಾಹುಲ್ ಗಾಂಧಿ


ಈ ಚುಂಬನದ ದೃಶ್ಯದ ಬಗ್ಗೆ ಅಲಿ ಖಾನ್ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಈ ಚುಂಬನದ ದೃಶ್ಯಗಳನ್ನು ಹೋಟೆಲ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ದೃಶ್ಯವನ್ನು ಚಿತ್ರೀಕರಿಸಲು ಕ್ಲೋಸ್‌ ಸೆಟ್ ಅನ್ನು ಜೋಡಿಸಲಾಗಿದೆ ಎಂದು ನಿರ್ದೇಶಕರು ಹೇಳಿದರು. ಅಂದರೆ, ಸೆಟ್‌ನಲ್ಲಿ ಪ್ರಮುಖರು ಮಾತ್ರ ಇರುವಂತೆ ನೋಡಿಕೊಂಡರು. ಇದಲ್ಲದೆ, ಟೇಕ್‌ಗೆ ಹೋಗುವ ಮೊದಲು ದೃಶ್ಯವನ್ನು ಎರಡು ಬಾರಿ ಅಭ್ಯಾಸ ಮಾಡಲಾಯಿತು. ಮೇಲಾಗಿ ಮಾನಿಟರ್ ನಲ್ಲಿ ರಿಹರ್ಸಲ್ ನೋಡಿ ಪರವಾಗಿಲ್ಲ ಎಂದಾಗ ಸೀನ್‌ ಓಕೆ ಮಾಡಿದ್ದಾರಂತೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.