Kajol Viral Video: ಬಾಲಿವುಡ್ ನಟಿ ಕಾಜೋಲ್ ಹೆಚ್ಚಿನ ಸಮಯ ಕ್ಯಾಮರಾ ಮುಂದೆ ನಗುತ್ತಾ ಇರುತ್ತಾರೆ, ಆದರೆ ಈ ಬಾರಿ ಅವರ ವರ್ತನೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ. ನಟಿ ಸಾಮಾನ್ಯಾವಗಿ ಒರಟಾಗಿ ಮಾತನಾಡುವುದಿಲ್ಲ ಆದರೆ ಈ ಭಾರಿ ನಟಿಯ ನಡುವಳಿಕೆ ಕಂಡು ಅಭಿಮಾನಿಗಳು ಶಾಕ್‌ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ಕಾಜೋಲ್ ಅವರ ನಿರ್ದಾಕ್ಷಿಣ್ಯ ಮತ್ತು ರುಂಬಾ ದೊಡ್ಡ ಗುಣ ಹೊಂದಿರುವ ಕಾರಣಕ್ಕೆ ಜನರು ನಟಿಯನ್ನು ಇಷ್ಟ ಪಡುತ್ತಾರೆ. ಆದರೆ, ನಟಿ ಇಧಿಗ ಮಾಡಿರುವ ಕೆಲಸ ಕಂಡು ನೆಟ್ಟಿಗರು ನಟಿಯನ್ನು ಜಯಾ ಬಚ್ಚನ್‌ ಅವರೊಂದಿಗೆ ಹೋಲಿಸುತ್ತಿದ್ದಾರೆ. ನಟಿಯ ನಡುವಳಿಕೆ ನೋಡಿದ ಅಭಿಮಾನಿಗಳಂತೂ ಫುಲ್‌ ಶಾಕ್‌ನಲ್ಲಿದ್ದಾರೆ. 


ಕಾಜೋಲ್ ಇತ್ತೀಚೆಗೆ ತನ್ನ ಮಗ ಯುಗ್ ಜೊತೆ ವೈದ್ಯರ ಬಳಿಗೆ ಹೋಗಿದ್ದರು. ಅಲ್ಲಿಂದ ಹೊರಡುವಾಗ ಮಗ ಯುಗ್ ಕೈ ಹಿಡಿದಿದ್ದು, ಸೆಕ್ಯೂರಿಯನ್ನು ಹಿಡಿದು ನಟಿ ಜೋರಾಗಿ ದೂರ ತಳ್ಳಿದ್ದಾರೆ. ನಟಿಯ ಈ ನಡೆ ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾಜೋಲ್ ಅವರ ಇಂತಹ ವರ್ತನೆ ಕಂಡು ಬಳಕೆದಾರರು ಆಕ್ರೋಶಗೊಂಡಿದ್ದಾರೆ. ಈ ವಿಡಿಯೋ ನೋಡಿದ ಜನರು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ.


ಕಾಜೋಲ್ ಅವರ ಈ ವೀಡಿಯೊವನ್ನು ಪ್ರತಿಕ್ರಿಯಿಸಿದ ಬಳಕೆದಾರರು ʻಕಾಜೋಲ್ ಏಕೆ ದಿನದಿಂದ ದಿನಕ್ಕೆ ಜಯಾ ಬಚ್ಚನ್ ರೀತಿ ಆಡುತ್ತಿದ್ದಾರೆ.ʼ ಎಂದು ಬರೆದಿದ್ದರೆ, ಇನ್ನೊಬ್ಬ ಬಳಕೆದಾರರು, ʻಕಾಜೋಲ್‌ಗೆ ಏನು ಸಮಸ್ಯೆ? ನಿಮ್ಮ ಸ್ವಂತ ಭದ್ರತೆಗೆ ನೀವು ರಾಜಿ ಮಾಡಿಕೊಂಡಿದ್ದೀರಾ?ʼ ಎಂದು ಬರೆದಿದ್ದಾರೆ. ಇನ್ನೂ ಒಬ್ಬ ಬಳಕೆದಾರರು, ʻನಟಿಗೆ ತುಂಬಾ ಸೊಕ್ಕಿದೆ ತನ್ನ ಸ್ವಂತ ಸಿಬ್ಬಂದಿಯನ್ನೆ ದೂರ ತಳ್ಳಿ ದುರಹಂಕಾರ ಮೆರೆಯುತ್ತಿದ್ದಾಳೆʼ ಎಂದು ಕಿಡಿಕಾರಿದ್ದಾರೆ.


ಆದರೆ ಕಾಜೋಲ್ ಅವರ ಅಭಿಮಾನಿಗಳು ನಟಿಯನ್ನು ಸಮರ್ಥಿಸಿಕೊಳ್ಳುತ್ತಿದ್ದು, ಮಗನು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ನಟಿ ಚಿಂತಿತಳಾಗಿದ್ದಾಳೆ ಅದರಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ನಟಿಯ ನಡೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.


 

 

 

 



 

 

 

 

 

 

 

 

 

 

 

A post shared by Snehkumar Zala (@snehzala)


 


 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.