YouTubeನಲ್ಲಿ `ಕಳಂಕ್` ಸಿನಿಮಾ ಟೀಸರ್ ಸೂಪರ್ ಹಿಟ್! 24 ಗಂಟೆಗಳಲ್ಲಿ 2.6 ಕೋಟಿಗೂ ಅಧಿಕ ವೀಕ್ಷಣೆ
1940ರ ಐತಿಹಾಸಿಕ ಕಥೆ ಆಧರಿಸಿ `ಕಳಂಕ್` ಚಿತ್ರ ನಿರ್ಮಿಸಲಾಗಿದ್ದು, ಚಿತ್ರದಲ್ಲಿನ ಸನ್ನಿವೇಶಗಳು ಅದ್ಭುತವಾಗಿವೆ.
ನವದೆಹಲಿ: ಬಾಲಿವುಡ್ನ ಬಹುನಿರೀಕ್ಷಿತ ಕಳಂಕ್ ಚಿತ್ರದ ಟೀಸರ್ ಬುಧವಾರವಷ್ಟೇ ಬಿಡುಗಡೆಯಾಗಿದ್ದರೂ ಕೇವಲ 24 ಗಂಟೆಗಳಲ್ಲಿ 2.6 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.
ರಿಲೀಸ್ ಆಗಿರುವ ಟೀಸರ್'ನಲ್ಲಿ ಮಾಧುರಿ ದೀಕ್ಷಿತ್, ಆಲಿಯಾ ಭಟ್, ಸಂಜಯ್ ದತ್, ಆದಿತ್ಯ ರಾಯ್ ಕಪೂರ್, ವರುಣ್ ಧವನ್ ಮತ್ತು ಸೋನಾಕ್ಷಿ ಸಿನ್ಹಾ ನಟಿಸಿರುವ ಸನ್ನಿವೇಶವನ್ನು ತೋರಿಸಲಾಗಿದೆ. ಸದ್ಯ ಈ ಟೀಸರ್ ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ ಫೇಜ್ಗಳಲ್ಲಿ ಕೇವಲ 24 ಗಂಟೆಗಳಲ್ಲಿ 26 ದಶಲಕ್ಷ ವೀಕ್ಷಣೆಗಳನ್ನು ಪಡೆದು ಸೂಪರ್ ಹಿಟ್ ಆಗಿದೆ.
1940ರ ಐತಿಹಾಸಿಕ ಕಥೆ ಆಧರಿಸಿ 'ಕಳಂಕ್' ಚಿತ್ರ ನಿರ್ಮಿಸಲಾಗಿದ್ದು, ಚಿತ್ರದಲ್ಲಿನ ಸನ್ನಿವೇಶಗಳು ಅದ್ಭುತವಾಗಿವೆ. ಸುಂದರವಾದ ಕಲಾಕೃತಿಗಳ ಜೊತೆಗೆ ಮಹಲುಗಳು, ಹಿನ್ನೆಲೆ ಸಂಗೀತ ಆಕರ್ಷಕವಾಗಿ ಮೂಡಿಬಂದಿದೆ. ಕರಣ್ ಜೋಹರ್ ನಿರ್ಮಾಣದ ಈ ಐತಿಹಾಸಿಕ ಸಿನಿಮಾವನ್ನು ಅಭಿಷೇಕ್ ವರ್ಮನ್ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕಾಗಿ 17 ಕೋಟಿ ರೂ. ವೆಚ್ಚದಲ್ಲಿ ಹಳೆ ದಿಲ್ಲಿ ಸೆಟ್ ನಿರ್ಮಿಸಿ ಚಿತ್ರಿಕರಿಸಲಾಗಿದೆ.
ಕಳಂಕ್ ಟೀಸರ್ನಲ್ಲಿ ಪ್ರತಿಯೊಂದು ಸನ್ನಿವೇಶವೂ ಕುತೂಹಲಭರಿತವಾಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿದ್ದು, ಇದೇ ಏಪ್ರಿಲ್ 17ರಂದು 'ಕಳಂಕ್' ಚಿತ್ರ ದೇಶಾದ್ಯಂತ ತೆರೆ ಕಾಣಲಿದೆ.