Kalki 2898 AD Release Date: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ ನಟನೆಯ ಬಹುನಿರೀಕ್ಷಿತ ʻಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದೆ. ಸದ್ಯ ಡಾರ್ಲಿಂಗ್ ಅಭಿಮಾನಿಗಳು ಸಲಾರ್‌ ಸಕ್ಸಸ್‌ ಜೊತೆಗೆ ಕಲ್ಕಿ ರಿಲೀಸ್‌ ಡೇಟ್‌ ಅನೌನ್ಸ್‌ ಆಗಿರುವುದರಿಂದ ಡಬಲ್ ಖುಷಿಯಲ್ಲಿದ್ದಾರೆ. ಈ ಚಿತ್ರ ತೆಲುಗು ಚಿತ್ರರಂಗದ ಬಿಗ್ ಬಜೆಟ್ ಸಿನಿಮಾವಾಗಿದ್ದು, ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. 


COMMERCIAL BREAK
SCROLL TO CONTINUE READING

ʻಕಲ್ಕಿ 2898 ಎಡಿʼ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರಲು ಸಜ್ಜಾಗಿದ್ದು,  ಈ ಚಿತ್ರ ಮೆಗಾ ರಿಲೀಸ್‌ಗೆ ಪ್ಲಾನ್ ಮಾಡಿಕೊಳ್ಳುತ್ತಿದೆ. ಈ ಸಿನಿಮಾ ಇದೇ ಜೂನ್ 27ಕ್ಕೆ ವಿಶ್ವದಾದ್ಯಂತ ಅದ್ದೂರಿಯಾಗಿ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈ ಹಿಂದೆ 'ಕಲ್ಕಿ'ಯನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದ ಫ್ಯಾನ್ಸ್‌ಗೆ ನಿರಾಸೆಯಾಗಿತ್ತು. ಲೋಕಸಭೆ ಹಾಗೂ ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯ ಹಿನ್ನೆಲೆ ಈ ಚಿತ್ರ ಬಿಡುಗಡೆಗೆ ವಿಳಂಬವಾಗಿತ್ತು ಎನ್ನಲಾಗಿದೆ.


ಇದನ್ನೂ ಓದಿ: ಸ್ಟಾರ್ ಹೀರೋ ಕೆನ್ನೆಗೆ ಬಾರಿಸಿದ ಮೃಣಾಲ್ ಠಾಕೂರ್..!


ತೆಲುಗು ಚಿತ್ರರಂಗದ ವೈಜಯಂತಿ ಮೂವೀಸ್ ಬ್ಯಾನರ್‌ನ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಈ ಚಿತ್ರಕ್ಕೆ ಡೈರೆಕ್ಟರ್‌ ನಾಗ ಅಶ್ವಿನ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನಂತಹ ದಿಗ್ಗಜರ ತಾರಾಬಳಗವೇ ಇದೆ. ಈ ಸಿನಿಮಾ ಕಳೆದ ಕೆಲವು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇತ್ತು. ಈಗಾಗಲೇ ಪ್ರಭಾಸ್‌ ಕಲ್ಕಿ ಲುಕ್‌ ರಿವೀಲ್‌ ಆಗಿದ್ದು. ಇದೀಗ ಅಮಿತಾಭ್ ಬಚ್ಚನ್ ನಟಿಸಿರುವ ಅಶ್ವತ್ಥಾಮ ಪಾತ್ರದ ಲುಕ್ ಅನ್ನು ರಿಲೀಸ್ ಮಾಡುವ ಮೂಲಕ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡಿದೆ.


ಇದುವರೆಗೂ ಯಾವುದೇ ತೆಲುಗು ಸಿನಿಮಾವಾದರೂ  ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಅಮೆರಿಕಾದಲ್ಲಿ ಪ್ರೀಮಿಯರ್ ನಡೆಯುತ್ತೆ. ಈ ಬಾರಿಯು 'ಕಲ್ಕಿ 2828 AD' ಬಿಗ್‌ ಬಜೆಟ್‌ನ ಚಿತ್ರವಾಗಿರುವುದರಿಂದ ಒಂದು ದಿನ ಮುಂಚೆನೆ ಅಂದರೆ, ಜೂನ್ 26ರಂದು ಅಮೆರಿಕಾದಲ್ಲಿ ತೆರೆಕಾಣಲಿದೆ ಎಂಬ ಮಾಹಿತಿ ಹೊರಬಂದಿದೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ಈಗಾಗಲೇ ಒಟಿಟಿ ಹಾಗೂ ಸ್ಯಾಟಲೈಟ್ ಬ್ಯುಸಿನೆಸ್ ಮಾಡಿದ್ದು, ಥಿಯೇಟ್ರಿಕಲ್ ರಿಲೀಸ್ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.