ಸ್ಟಾರ್ ಹೀರೋ ಕೆನ್ನೆಗೆ ಬಾರಿಸಿದ ಮೃಣಾಲ್ ಠಾಕೂರ್..!

Mrunal Thakur slapped Shahid Kapoor : ಬಾಲಿವುಡ್ ತಾರೆ ಮೃಣಾಲ್ ಠಾಕೂರ್ ಸೀತಾರಾಮಂ ಮತ್ತು ಹಾಯ್ ನಾನಾ ಮೂಲಕ ತೆಲುಗು ಪ್ರೇಕ್ಷಕರ ಮನಸೆಳೆದಿದ್ದಾರೆ. 

Written by - Chetana Devarmani | Last Updated : Apr 27, 2024, 07:02 AM IST
  • ಬಾಲಿವುಡ್ ತಾರೆ ಮೃಣಾಲ್ ಠಾಕೂರ್
  • ಶಾಹಿದ್ ಕಪೂರ್ ಕೆನ್ನೆಗೆ ಬಾರಿಸಿದ ನಟಿ
  • ಸೀತಾರಾಮಂ ಸುಂದರಿ ಮೃಣಾಲ್ ಠಾಕೂರ್
ಸ್ಟಾರ್ ಹೀರೋ ಕೆನ್ನೆಗೆ ಬಾರಿಸಿದ ಮೃಣಾಲ್ ಠಾಕೂರ್..! title=

Mrunal Thakur : ಪ್ರತಿಯೊಬ್ಬರಿಗೂ ಅವರದೇ ಆದ ನೆಚ್ಚಿನ ಕಲಾವಿದರು ಇರುತ್ತಾರೆ. ನಟನಾಗಿ ಸ್ಟಾರ್ ಸ್ಥಾನಮಾನ ಪಡೆದರೂ.. ತಮ್ಮ ನೆಚ್ಚಿನ ಸ್ಟಾರ್‌ಗಳ ಮೇಲಿನ ಅಭಿಮಾನ ಹಾಗೆಯೇ ಇರುತ್ತದೆ. ಅದರಲ್ಲೂ ಯಾರಿಗಾದರೂ ತಮ್ಮ ನೆಚ್ಚಿನ ನಟನೊಂದಿಗೆ ಕೆಲಸ ಮಾಡುವ ಅದೃಷ್ಟ ಬಂದರೆ ಆ ಸಂತೋಷವಂತೂ ಹೇಳತೀರದು. 

ಬಾಲಿವುಡ್ ತಾರೆ ಮೃಣಾಲ್ ಠಾಕೂರ್ ಸೀತಾರಾಮಂ ಮತ್ತು ಹಾಯ್ ನಾನಾ ಮೂಲಕ ತೆಲುಗು ಪ್ರೇಕ್ಷಕರ ಮನಸೆಳೆದಿದ್ದಾರೆ. ಮೃಣಾಲ್ ಠಾಕೂರ್ ಕೆಲವು ದಿನಗಳ ಹಿಂದೆ ಜೆರ್ಸಿ ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರವೊಂದನ್ನು ಮೃಣಾಲ್ ಠಾಕೂರ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಸಿನಿಮಾಗಾಗಿ ಒಂದು ಸಿಗರೇಟ್‌ ಸೇದುವುದನ್ನ ಕಲಿತ ಈ ನಟಿಗೆ ಅದೇ ಚಟವಾಗಿ ಕಾಡಿತ್ತು..!

ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ತೆಲುಗು ಚಿತ್ರ ಜೆರ್ಸಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಗೊತ್ತೇ ಇದೆ. ಸಿನಿಮಾದ ದೃಶ್ಯವೊಂದರಲ್ಲಿ ನಾಯಕಿ ನಾಯಕನ ಕೆನ್ನೆಗೆ ಹೊಡೆಯುವ ಸೀನ್‌ ಇದೆ. ಈ ಸಿನಿಮಾ ನೋಡಿದ ಎಲ್ಲರಿಗೂ ಆ ದೃಶ್ಯ ನೆನಪಾಗುತ್ತೆ. ಅದೇ ದೃಶ್ಯ ಹಿಂದಿಯಲ್ಲೂ ಇದೆ. ಆದರೆ ಚಿತ್ರದ ಶೂಟಿಂಗ್ ಸಮಯದಲ್ಲಿ ತನ್ನ ನೆಚ್ಚಿನ ನಟ ಶಾಹಿದ್ ಕಪೂರ್ ಅವರ ಕೆನ್ನೆಗೆ ಬಾರಿಸುವುದು ತುಂಬಾ ಕಷ್ಟಕರವಾಗಿತ್ತು ಎಂದು ಮೃಣಾಲ್ ಹೇಳುತ್ತಾರೆ.

ನಾನು ಶಾಹಿದ್ ಕಪೂರ್ ಅವರ ದೊಡ್ಡ ಅಭಿಮಾನಿ, ನನಗೆ ಅವರೊಂದಿಗೆ ನಟಿಸಲು ಆಫರ್ ಬಂದಾಗ, ನಾನು ತಕ್ಷಣ ಒಪಗಪಿಕೊಂಡೆ. ನಾನು ಶೂಟಿಂಗ್‌ನ ಮೊದಲ ದಿನಕ್ಕಾಗಿ ಎದುರು ನೋಡುತ್ತಿದ್ದೆ. ಅವರ ನಗು ಎಷ್ಟು ಚೆನ್ನಾಗಿದೆ. ಒಂದು ವಾರದೊಳಗೆ ನಾವು ಉತ್ತಮ ಸ್ನೇಹಿತರಾಗಿದ್ದೇವೆ. ಆದರೆ ಆ ದೃಶ್ಯವನ್ನು ಪೂರ್ಣಗೊಳಿಸಲು ನಾನು ಮೂರು ಗಂಟೆಗಳನ್ನು ತೆಗೆದುಕೊಂಡೆ ಎಂದು ಮೃಣಾಲ್ ಹೇಳಿದರು.  

ಇದನ್ನೂ ಓದಿ: ನಾನು ಹೆಣ್ಣಲ್ಲ..! ಸಂಚಲನ ಮೂಡಿಸುತ್ತಿದೆ ಬಿಜೆಪಿ ಮಹಿಳಾ ಅಭ್ಯರ್ಥಿ ಹೇಳಿಕೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News