ನಿರ್ಮಾಪಕನನ್ನು ಕೊಲ್ಲಲು ಸುಪಾರಿ ಕೊಟ್ಟ ʼನಟ ಅಕ್ಷಯ್ ಕುಮಾರ್ʼ..! ಆಘಾತಕಾರಿ ಸುದ್ದಿ ಬಹಿರಂಗ
ನಟ ಅಕ್ಷಯ್ ಕುಮಾರ್ ಜೈಲಿನಲ್ಲಿ ನನ್ನನ್ನು ಕೊಲ್ಲಲು ಸುಪಾರಿ ನೀಡುತ್ತಿದ್ದಾನೆ. ನನಗೇನಾದರೂ ಆದರೆ ಅದಕ್ಕೆ ಸಂಪೂರ್ಣ ಹೊಣೆ ಅಕ್ಷಯ್ ಕುಮಾರ್. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಹಾಗೂ ಕರಣ್ ಜೋಹರ್‌ಗೂ ನನ್ನ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ನಟ, ನಿರ್ಮಾಪಕ ಕಮಾಲ್ ಆರ್ ಖಾನ್ ಆರೋಪಿಸಿದ್ದಾರೆ.
Kamal Khan on Akshay kumar : ತಮ್ಮ ಅತಿರೇಕದ ಅಭಿಪ್ರಾಯಗಳು ಮತ್ತು ಆರೋಪಗಳ ಟ್ವೀಟ್ ಮೂಲಕ ಹೆಸರುವಾಸಿಯಾಗಿರುವ ಕಮಾಲ್ ಆರ್ ಖಾನ್ ಅವರು ಇದೀಗ ಮತ್ತೊಂದು ಆಘಾತಕಾರಿ ಟ್ವೀಟ್ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು, ಅಕ್ಷಯ್ ಕುಮಾರ್ ಅವರು ತಮ್ಮನ್ನು ಕೊಲ್ಲಲು ಸುಫಾರಿ ನೀಡಿದ್ದಾರೆ ಎಂದು ದೂರಿದ್ದಾರೆ. ಅಲ್ಲದೆ, ಒಂದು ವೇಳೆ ತನಗೆ ಏನಾದರೂ ತೊಂದರೆಯಾದರೆ ಅದಕ್ಕೆ ಸಂಪೂರ್ಣ ಹೊಣೆ ಅಕ್ಷಯ್ ಕುಮಾರ್ ಅವರೇ ಆಗುತ್ತಾರೆ ಎಂದು ಹೇಳಿದ್ದಾರೆ.
ಹೌದು... ಈ ಕುರಿತು ಗುರುವಾರ ರಾತ್ರಿ ಟ್ವೀಟ್ ಮಾಡಿರುವ ಅವರು, ಅಕ್ಷಯ್‌ಕುಮಾರ್ ಅವರನ್ನು ಹೊರತುಪಡಿಸಿ ಬಾಲಿವುಡ್‌ನ ಎಲ್ಲರೊಂದಿಗೆ ನನಗೆ ಉತ್ತಮ ಸಂಬಂಧವಿದೆ! ನನ್ನನ್ನು ಜೈಲಿನಲ್ಲಿ ಕೊಲ್ಲಲು ಸುಪಾರಿ ಕೊಟ್ಟು ನನ್ನನ್ನು ಬಂಧಿಸಿದವನು ಅವನೇ. ನಾನು ಜೈಲಿನಿಂದ ಹೊರಬರಲು ಅದೃಷ್ಟಶಾಲಿಯಾಗಿದ್ದೆ ಎಂದು ಹೇಳಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆ ಅಥವಾ ಜೈಲಿನಲ್ಲಿ ನನ್ನನ್ನು ಕೊಲ್ಲಲು ಮತ್ತೆ ಸುಪಾರಿ ನೀಡುತ್ತಿದ್ದಾನೆ. ನನಗೇನಾದರೂ ಆಗಿದ್ದರೆ ಅದಕ್ಕೆ ಸಂಪೂರ್ಣ ಹೊಣೆ ಅಕ್ಷಯ್ ಕುಮಾರ್. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಹಾಗೂ ಕರಣ್ ಜೋಹರ್‌ಗೂ ನನ್ನ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
Adipurush: ಇಲ್ಲಿದೆ ನೋಡಿ ಆದಿಪುರುಷ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್.. ಚಿತ್ರದ ಒಟ್ಟು ಅವಧಿ ಎಷ್ಟು ಗೊತ್ತಾ?
ಇನ್ನು ಅಕ್ಷಯ್ ಕುಮಾರ್ ಅವರು ತಮ್ಮನ್ನು ಕೆನಡಾ ಕುಮಾರ್ ಅಂತ ಕರೆಯಲು ಇಷ್ಟ ಪಡುವುದಿಲ್ಲ. ಅವರ ಪ್ರಕಾರ ನಾನು ಅವರನ್ನು ಕೆನಡಿಯನ್ ಕುಮಾರ್ ಎಂದು ಕರೆಯಬಾರದು ಅಂತೆ. ಅವನು ಕೆನಡಿಯನ್ ಪ್ರಜೆಯಾಗಿರುವಾಗ ನಾನೇಕೆ ಅವನನ್ನು ಕೆನಡಿಯನ್ ಎಂದು ಕರೆಯಬಾರದು. ಕೆನಡಾದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವಾಗ? ನಾನು ಖಂಡಿತವಾಗಿಯೂ ಅವರನ್ನು ಕೆನಡಿಯನ್ ಕುಮಾರ್ ಎಂದು ಕರೆಯುತ್ತೇನೆ. ಅವನು ತನ್ನ ಶಕ್ತಿಯನ್ನು ಬಳಸಿ ನನ್ನನ್ನು ಕೊಲ್ಲಲು ಹೋದ್ರೂ ಸರಿ ಎಂದು ಸವಾಲು ಹಾಕಿದ್ದಾರೆ. ಈ ಹಿಂದೆ ಕಮಾಲ್ ಆರ್ ಖಾನ್ ಕೂಡ ಸಲ್ಮಾನ್ ಖಾನ್ ವಿರುದ್ಧ ಆರೋಪ ಮಾಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.