Ramya : ಕಿತ್ತಳೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಮೋಹಕ ತಾರೆ ರಮ್ಯಾ

Ramya in Orange Saree : ಸೋಶಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಗಿರುವ ನಟಿ ರಮ್ಯಾ, ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಟ್ರೆಡಿಷನಲ್‌ ಲುಕ್‌ನಲ್ಲಿ ರಮ್ಯಾ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಪೋಸ್ಟ್ ನೋಡಿದ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. 

Written by - Chetana Devarmani | Last Updated : Jun 9, 2023, 02:56 PM IST
  • ನಟಿ ರಮ್ಯಾ ಹೊಸ ಫೋಟೋಗಳು ವೈರಲ್‌
  • ನಟಿ ರಮ್ಯಾ ಟ್ರೆಡಿಷನಲ್‌ ಲುಕ್‌
  • ಕಿತ್ತಳೆ ಬಣ್ಣದ ಆರ್ಗನ್ಜಾ ಸೀರೆಯಲ್ಲಿ ದಿವ್ಯಸ್ಪಂದನಾ
Ramya : ಕಿತ್ತಳೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಮೋಹಕ ತಾರೆ ರಮ್ಯಾ  title=
Ramya

Ramya in Orange Saree : ಸ್ಯಾಂಡಲ್‌ವುಡ್‌ ಮೋಹಕತಾರೆ ರಮ್ಯಾ ಸಾಮಾಜಿಕ ಮಾಧ್ಯಮದಲ್ಲಿ ಸದಾ ಆಕ್ಟಿವ್‌ ಆಗಿರುತ್ತಾರೆ. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡುತ್ತಿರುತ್ತಾರೆ. ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ರಮ್ಯಾ ಹಂಚಿಕೊಂಡಿದ್ದಾರೆ. ಅವರ ಈ ಫೋಟೋಗಳು ಅಭಿಮಾನಿಗಳ ಮನಗೆದ್ದಿವೆ. ಫೋಟೋಗಳಲ್ಲಿ ನಟಿ ರಮ್ಯಾ ಟ್ರೆಡಿಷನಲ್‌ ಲುಕ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. 

ಗೋಲ್ಡನ್ ಡಿಟೇಲಿಂಗ್ ಬಾರ್ಡರ್‌ ಇರುವ ಕಿತ್ತಳೆ ಬಣ್ಣದ ಆರ್ಗನ್ಜಾ ಸೀರೆಯನ್ನು ರಮ್ಯಾ ಉಟ್ಟಿದ್ದಾರೆ. ವಿ-ನೆಕ್‌ಲೈನ್‌ ಇರುವ ಕಸೂತಿ ಬ್ಲೌಸ್‌ ಅನ್ನು ಸೀರೆ ಜೊತೆ ಮ್ಯಾಚ್‌ ಮಾಡಿದ್ದಾರೆ. ನಟಿ ಲೈಟ್‌ ಆಗಿ ಮೇಕ್ಅಪ್ ಮಾಡಿಕೊಂಡಿದ್ದಾರೆ. ಬ್ಯೂಟಿಫುಲ್‌ ಬಿಂದಿ ಮತ್ತು ಸುಂದರವಾದ ಚೋಕರ್ನೊಂದಿಗೆ ಲುಕ್‌ನ್ನು ಪೂರ್ತಿಗೊಳಿಸಿದ್ದಾರೆ. ಈ ಲುಕ್‌ನಲ್ಲಿ ತೆಗೆದ ಫೋಟೋಗಳನ್ನು ರಮ್ಯಾ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಪೋಸ್ಟ್ ನೋಡಿದ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವಿಧ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

 

 

ಇದನ್ನೂ ಓದಿ: ಅವಳಿ ಮಕ್ಕಳ ಜೊತೆ ನಯನತಾರಾ ಕ್ಯೂಟ್‌ ಫೋಟೋಶೂಟ್‌

ರಮ್ಯಾ 2003 ರಲ್ಲಿ ಕನ್ನಡ ಚಲನಚಿತ್ರ ಅಭಿ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ನಟ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ ರೋಮ್ಯಾಂಟಿಕ್ ಸಿನಿಮಾ ಅಭಿ ಚಿತ್ರವನ್ನು ದಿನೇಶ್ ಬಾಬು ಬರೆದು ನಿರ್ದೇಶಿಸಿದ್ದಾರೆ. 150 ದಿನ ಓಡಿದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರಿ ಹಿಟ್ ಆಗಿತ್ತು. ನಂತರ, ಚಿತ್ರವು ತೆಲುಗಿನಲ್ಲಿ ಕಲ್ಯಾಣ್ ರಾಮ್ ನಟಿಸಿದ ಅಭಿಮನ್ಯು ಎಂಬ ಹೆಸರಿನಲ್ಲಿ ರೀಮೇಕ್ ಆಯಿತು.

ತನ್ನ ಮೊದಲ ಪ್ರಾಜೆಕ್ಟ್‌ನಲ್ಲೇ ರಮ್ಯಾ ಸಿನಿ ಪ್ರಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದರು. ಅಲ್ಲಿಂದ ರಮ್ಯಾ ಹಿಂತಿರುಗಿ ನೋಡಲಿಲ್ಲ. ರಂಗ SSLC, ಸೇವಂತಿ ಸೇವಂತಿ, ಮೀರಾ ಮಾಧವ ರಾಘವ, ಅಂತು ಇಂತು ಪ್ರೀತಿ ಬಂತು, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಮುಸ್ಸಂಜೆಮಾತು ಮತ್ತು ಕಟಾರಿ ವೀರ ಸುರಸುಂದರಾಂಗಿ ಮುಂತಾದ ಅನೇಕ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಗಸ್ಟ್ 2013 ರಲ್ಲಿ, ರಮ್ಯಾ ರಾಜಕೀಯ ವೃತ್ತಿಜೀವನವನ್ನು ಮುಂದುವರಿಸಲು ನಟನೆಯಿಂದ ವಿರಾಮ ತೆಗೆದುಕೊಂಡರು. 2016 ರಲ್ಲಿ ನಾಗರಹಾವು ಚಿತ್ರದ ಮತ್ತೆ ಮೂಲಕ ನಟನೆಗೆ ಮರಳಿದರು. ಈಗ ರಮ್ಯಾ ಸಿನಿಮಾ ನಿರ್ಮಾಣವನ್ನೂ ಆರಂಭಿಸಿದ್ದಾರೆ. 

ಇದನ್ನೂ ಓದಿ: MeToo case: ಶ್ರುತಿ ಹರಿಹರನ್‌ಗೆ ಕೋರ್ಟ್‌ ನೋಟಿಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News