Why Kangana Fights For PM Modi? - ಬಾಲಿವುಡ್‌ನ ಪ್ರಸಿದ್ಧ ನಟಿ ಕಂಗನಾ ರಣಾವತ್ (Kangana Ranaut) ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರೀಯಳಾಗಿರುತ್ತಾಳೆ, ಆಕೆ ತನ್ನ ಅಭಿಮಾನಿಗಳ ನಡುವೆ ಚರ್ಚೆಯಲ್ಲಿ Why Kangana Fights For PM Modi? - ಬಾಲಿವುಡ್‌ನ ಪ್ರಸಿದ್ಧ ನಟಿ ಕಂಗನಾ ರಣಾವತ್ (Kangana Ranaut) ಸಾಮಾಜಿಕ ಮಾಧ್ಯಮದಲ್ಲಿ (Social Media) ತುಂಬಾ ಸಕ್ರೀಯಳಾಗಿರುತ್ತಾಳೆ, ಆಕೆ ತನ್ನ ಅಭಿಮಾನಿಗಳ ನಡುವೆ ಚರ್ಚೆಯಲ್ಲಿ ಉಳಿಯಲು ನಿತ್ಯ ಯಾವುದಾದರೊಂದು ಆಸಕ್ತಿದಾಯಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾಳೆ. ಇದೇ ವೇಳೆ ಇತ್ತೀಚೆಗೆ ಅವಳು ಹಲವು ಕಾರಣಗಳಿಗಾಗಿ ಹೆಡ್ಲೈನ್ ಕೂಡ ಸೃಷ್ಟಿಸಿದ್ದಾಳೆ. ಚುನಾವಣಾ ಫಲಿತಾಂಶದ ದಿನವಾದ ಇಂದು ಅವಳು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಬೆಂಬಲಿಸುವ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾಳೆ. ಆದರೆ, ಕಂಗನಾ ಹಂಚಿಕೊಂಡಿರುವ ಈ ಪೋಸ್ಟ್ ಚುನಾವಣೆಯ ಬಗ್ಗೆ ಅಲ್ಲ. ಈ ಪೋಸ್ಟ್ ಉಕ್ರೇನ್-ರಷ್ಯಾ ಯುದ್ಧಕ್ಕೆ (Ukraine Russia Tension) ಸಂಬಂಧಿಸಿದ್ದಾಗಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನಿ ಯುವತಿ (Pakistani Girl) ಕಾಣಿಸಿಕೊಂಡಿದ್ದಾಳೆ.

COMMERCIAL BREAK
SCROLL TO CONTINUE READING

ಇದನ್ನೂ  ಓದಿ-Samantha-Nagachaitanya: ನಟಿ ಸಮಂತಾ & ನಾಗಚೈತನ್ಯ ನಡುವೆ ಮತ್ತೊಂದು ಮಹಾ ಬಿರುಕು..?


ವಾಸ್ತವದಲ್ಲಿ, ಕಂಗನಾ ರಣಾವತ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Kangana Instagram Story) ಪಾಕಿಸ್ತಾನ ಹುಡುಗಿಯ ವೀಡಿಯೊವನ್ನು ಹಂಚಿಕೊಂಡಿದ್ದಾಳೆ, ಹುಡುಗಿ  ಹೆಸರು ಅಸ್ಮಾ ಶಫೀಕ್ (Aasma Shafeeq Viral Video), ಅವರನ್ನು ಭಾರತ ತಂಡವು ಉಕ್ರೇನ್‌ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ವೀಡಿಯೊದಲ್ಲಿ, ಮಾತನಾಡುತ್ತಿರುವ ಅಸ್ಮಾ, 'ಕೀವ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯವರು ನನಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ನನ್ನು ಅಲ್ಲಿ ಸಾಕಷ್ಟು ಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದೆ, ಆದರೆ ಅವರ ಕಾರಣದಿಂದಾಗಿ ನಾನು ಅಲ್ಲಿಂದ ಹೊರಬರಲು ಸಾಧ್ಯವಾಯಿತು, ಸಹಾಯ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ನಾನು ಭಾರತದ ಪ್ರಧಾನ ಮಂತ್ರಿಯವರಿಗೆ ಕೃತಜ್ಞತೆಗಳನ್ನು ಹೇಳ ಬಯಸುತ್ತೇನೆ. ಭಾರತೀಯ ರಾಯಭಾರ ಕಚೇರಿಯವರಿಗೂ ಕೂಡ ಧನ್ಯವಾದಗಳು, ನಾವು ಸುರಕ್ಷಿತವಾಗಿ ಮನೆಗೆ ಹೋಗುತ್ತಿದ್ದೇವೆ, ಧನ್ಯವಾದಗಳು'  ಎಂದಿದ್ದಾಳೆ. ವಿಡಿಯೋ ವಿಕ್ಷೀಸಿ...


ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’


ಪ್ರಧಾನಿ ಪರ ಹೋರಾಡುತ್ತೇನೆ
ಅಸ್ಮಾಳ ಈ ವಿಡಿಯೋ ಹಂಚಿಕೊಂಡು ಬರೆದುಕೊಂಡಿರುವ ಕಂಗನಾ 'ಇದೇ ಕಾರಣಕ್ಕಾಗಿ ನಾನು ಪ್ರಧಾನಿ ಮೋದಿ ಪರವಾಗಿ ಹೋರಾಡುತ್ತೇನೆ. ಪಾಕಿಸ್ತಾನದ ಅಸ್ಮಾ ಶಫೀಕ್ ಅವರು ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ್ದಾರೆ'. ಕಂಗನಾ ಹಂಚಿಕೊಂಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪ್ರಸ್ತುತ ಕಂಗನಾ ಆಲ್ಟ್ ಬಾಲಾಜಿ ಅವರ 'ಲಾಕಪ್' ಶೋ (LockUP Show) ನಲ್ಲಿ ನಿರೂಪಕಿಯಾಗಿ ಆಗಿ ಕಾಣಿಸಿಕೊಂಡಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-ಶೀಘ್ರದಲ್ಲೇ ಬಾಲಿವುಡ್ ನಟ ಹೃತಿಕ್ ರೋಶನ್ ಗೆ ಕಂಕಣ ಭಾಗ್ಯ...!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.