ಶೀಘ್ರದಲ್ಲೇ ಬಾಲಿವುಡ್ ನಟ ಹೃತಿಕ್ ರೋಶನ್ ಗೆ ಕಂಕಣ ಭಾಗ್ಯ...!

ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಜೋಡಿ ಈಗ ಏಕಾಏಕಿ ಸುದ್ದಿಯಲ್ಲಿದೆ, ವಿಷಯ ಏನಪ್ಪಾ ಅಂದ್ರೆ ಈಗ ಮುಂಬೈ ಹೋಟೆಲ್ ವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

Written by - Zee Kannada News Desk | Last Updated : Mar 9, 2022, 06:11 PM IST
  • ವಿಷಯ ಏನಪ್ಪಾ ಅಂದ್ರೆ ಈಗ ಮುಂಬೈ ಹೋಟೆಲ್ ವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಶೀಘ್ರದಲ್ಲೇ ಬಾಲಿವುಡ್ ನಟ ಹೃತಿಕ್ ರೋಶನ್ ಗೆ ಕಂಕಣ ಭಾಗ್ಯ...! title=

ಮುಂಬೈ: ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಜೋಡಿ ಈಗ ಏಕಾಏಕಿ ಸುದ್ದಿಯಲ್ಲಿದೆ, ವಿಷಯ ಏನಪ್ಪಾ ಅಂದ್ರೆ ಈಗ ಮುಂಬೈ ಹೋಟೆಲ್ ವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಜೋಡಿ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ನಾವು ಈಗಾಗಲೇ ಸಬಾ  ಹೃತಿಕ್ ಅವರ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ನಾವು ನೋಡಿದ್ದೇವೆ, ಅಷ್ಟೇ ಅಲ್ಲದೆ ಹೃತಿಕ್ (Hrithik Roshan) ಮನೆಯಿಂದಲೇ ಘರ್ ಕಾ ಖಾನಾ ರವಾನೆಯಾಗುವುದರ ಬಗ್ಗೆಯೂ ಕೇಳಿದ್ದೇವೆ, ಅಷ್ಟೇ ಅಲ್ಲದೆ ಹೃತಿಕ್ ಮಾಜಿ ಪತ್ನಿ ಸುಸ್ಸಾನೆ ಖಾನ್ ಜೊತೆ ಅತ್ಯುತ್ತಮ ಸಂಬಂಧವನ್ನು ಹೊಂದಿರುವುದನ್ನು ನಾವು ನೋಡಿದ್ದೇವೆ.ಇದರ ಜೊತೆಗೆ ಆಗಾಗ ಎರಡು ಕಡೆಯ ಕುಟುಂಬಗಳು ಪರಸ್ಪರ ಭೇಟಿಯಾಗುತ್ತಿರುವುದನ್ನು ನೋಡಿದರೆ, ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆಯೇ ಎನ್ನುವ ಅನುಮಾನ ಎಲ್ಲರಿಗೂ ಉಂಟಾಗಿದೆ.

ಇದನ್ನೂ ಓದಿ: Hrithik Roshan: ಮತ್ತೊಮ್ಮೆ ಸಬಾ ಜೊತೆ ಕಾಣಿಸಿಕೊಂಡ ಹೃತಿಕ್ ರೋಷನ್..!

ಅಷ್ಟಕ್ಕೂ ಹೃತಿಕ್ ರೋಶನ್ ಮತ್ತು ಸಬಾ ಆಜಾದ್ (Saba Azad)  ಅವರು ಮದುವೆಯಾಗುತ್ತಾರೆಯೇ?ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟಾಗ ಇದು ಸ್ಪಷ್ಟವಾಗಿ ತಿಳಿಯುತ್ತಿಲ್ಲ, ಇನ್ನೂ ಇಬ್ಬರು ಕೂಡ ಅಧಿಕೃತವಾಗಿ ಡೇಟಿಂಗ್ ಮಾಡುತ್ತಿರುವುದನ್ನು ನಿರಾಕರಿಸಿಯೂ ಇಲ್ಲ ಮತ್ತು ಅದನ್ನು ಅವರು ಒಪ್ಪಿಯೂಕೊಂಡಿಲ್ಲ, ಹೀಗಾಗಿ ಈ ಪ್ರಶ್ನೆಗೆ ಉತ್ತರ ಹುಡುಕುವುದು ಈಗ ಒಂದು ರೀತಿ ಸವಾಲಿನ ಸಂಗತಿಯಾಗಿದೆ.

ಇದನ್ನೂ ಓದಿ: Hrithik Roshan:ಯುವ ನಟಿಯೊಂದಿಗೆ ಹೃತಿಕ್​ ರೋಷನ್​ ಡೇಟಿಂಗ್? ಕೈ-ಕೈ ಹಿಡಿದು ಓಡಾಡುವ ದೃಶ್ಯ ವೈರಲ್

ಆದರೆ ನಾವು ಈಗ ಅವರ ಸಾಮಾಜಿಕ ಮಾಧ್ಯಮಗಳಲ್ಲಿನ ಪರಸ್ಪರ ಪ್ರತಿಕ್ರಿಯೆಗಳನ್ನು ನೋಡಿದಾಗ ಇಬ್ಬರೂ ಪರಸ್ಪರ ಇಷ್ಟಪಡುತ್ತಿದ್ದಾರೆ ಎನ್ನುವ ಸುಳಿವನ್ನು ನೀಡುತ್ತದೆ.ಇತ್ತೀಚಿಗೆ ಸಬಾ ಅಜಾದ್ ಅವರು ಶೇರ್ ಮಾಡಿಕೊಂಡಿದ್ದ ಫೋಟೋಗೆ ಪ್ರತಿಕ್ರಿಯಿಸುತ್ತಾ ಅವರ ಸೌಂದರ್ಯವನ್ನು ಹೊಗಳಿದ್ದರು, ಇದು ಈಗ ಬಾಲಿವುಡ್ ಅಂಗಳದಲ್ಲಿ ಈ ಇಬ್ಬರೂ ಜೋಡಿಗಳು ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುಳಿವನ್ನು ನೀಡುತ್ತಿದೆ.

ಸುಸ್ಸೇನಾಖಾನ್ ಅವರಿಗೆ ವಿಚ್ಚೇದನ ನೀಡಿದ ನಂತರ ಈಗ ಹೃತಿಕ್ ರೋಶನ್ ಅವರು ಏಕಾಂಗಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News