Kangana Ranaut Challenge: ನನ್ನ ಈ ಪ್ರಶ್ನೆಗೆ ಉತ್ತರ ಕೊಡಿ, `ಪದ್ಮಶ್ರೀ` ಪ್ರಶಸ್ತಿಯನ್ನು ಹಿಂದಿರುಗಿಸುವೆ
Kangana Ranaut Open Challenge - ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು `ಭಿಕ್ಷೆ` (Kangana Ranaut On Freedom) ಎಂದು ಕರೆದು ಕೆಂಗಣ್ಣಿಗೆ ಗುರಿಯಾಗಿರುವ ನಟಿ ಕಂಗನಾ ರನೌತ್ (Kangana Ranaut), 1947 ರಲ್ಲಿ ನಡೆದ ಯುದ್ಧ ಯಾವುದು? ಎಂದು ಶನಿವಾರ ತಮ್ಮ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಯಾರಾದರೂ ತಮ್ಮ ಪ್ರಶ್ನೆಗೆ ಉತ್ತರಿಸಿದರೆ, ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ನವದೆಹಲಿ: Kangana Ranaut Open Challenge - ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯವನ್ನು 'ಭಿಕ್ಷೆ' (Kangana Ranaut On Freedom) ಎಂದು ಕರೆದು ಕೆಂಗಣ್ಣಿಗೆ ಗುರಿಯಾಗಿರುವ ನಟಿ ಕಂಗನಾ ರನೌತ್ (Kangana Ranaut), 1947 ರಲ್ಲಿ ನಡೆದ ಯುದ್ಧ ಯಾವುದು? ಎಂದು ಶನಿವಾರ ತಮ್ಮ ಟೀಕಾಕಾರರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಯಾರಾದರೂ ತಮ್ಮ ಪ್ರಶ್ನೆಗೆ ಉತ್ತರಿಸಿದರೆ, ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ ಎಂದು ಬಹಿರಂಗ ಹೇಳಿಕೆ ನೀಡಿದ್ದಾರೆ.
ಸ್ವಾತಂತ್ರ್ಯವನ್ನು ಪ್ರಶ್ನಿಸಿದ್ದ ಕಂಗನಾ ರಣಾವತ್ (Kangana Ranaut On India Freedom)
ತನ್ನ ಪ್ರಚೋದನಾಕಾರಿ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುವ ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ Instagram ನಲ್ಲಿ ಅನೇಕ ಪ್ರಶ್ನೆಗಳನ್ನು ಉದ್ಭವಿಸಿದ್ದಾಳೆ ಮತ್ತು ವಿಭಜನೆ ಮತ್ತು ಮಹಾತ್ಮ ಗಾಂಧಿಯವರನ್ನೂ ಉಲ್ಲೇಖಿಸಿ, ಭಗತ್ ಸಿಂಗ್ ನನ್ನು ಸಾಯಲು ಬಿಟ್ಟರು ಮತ್ತು ಸುಭಾಷ್ ಚಂದ್ರ ಬೋಸ್ ಅವರನ್ನು ಬೆಂಬಲಿಸಲಿಲ್ಲ ಎಂದು ಆರೋಪಿಸಿದ್ದರು. ಬಾಲಗಂಗಾಧರ ತಿಲಕ್, ಅರಬಿಂದೋ ಘೋಷ್ ಮತ್ತು ಬಿಪಿನ್ ಚಂದ್ರ ಪಾಲ್ ಸೇರಿದಂತೆ ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ಉಲ್ಲೇಖಿಸುವ ಪುಸ್ತಕದ ಆಯ್ದ ಭಾಗಗಳನ್ನು ಅವಳು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾಳೆ ಮತ್ತು 1857 ರ 'ಸ್ವಾತಂತ್ರ್ಯಕ್ಕಾಗಿ ಸಾಮೂಹಿಕ ಹೋರಾಟ'ದ ಬಗ್ಗೆ ನನಗೆ ತಿಳಿದಿದೆ ಆದರೆ 1947 ರ ಯುದ್ಧದ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ಕಂಗನಾ ಹೇಳಿದ್ದರು.
ಪದ್ಮಶ್ರೀ ಹಿಂದಿರುಗಿಸುವೆ ಎಂದ ಕಂಗನಾ ರಣಾವತ್ (Kangana Ranaut Padmshri)
34ರ ಹರೆಯದ ಕಂಗನಾ ರನೌತ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಕಥೆಗಳಲ್ಲಿ ಇಂಗ್ಲಿಷ್‌ನಲ್ಲಿ ಸುದೀರ್ಘ ಪೋಸ್ಟ್‌ನಲ್ಲಿ ಬರೆದಿದ್ದಾಳೆ. 'ಸರಿಯಾದ ವಿವರಣೆಯನ್ನು ನೀಡಲು... 1857 ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಸಾಮೂಹಿಕ ಹೋರಾಟವಾಗಿತ್ತು ಮತ್ತು ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ್ ಸಾವರ್ಕರ್ ಜಿ ರಂತಹ ಮಹಾನ್ ಜನರು ತಮ್ಮ ಕೊಡುಗೆ ನೀಡಿದ್ದಾರೆ'. '1857ರ ಹೋರಾಟ ನನಗೆ ತಿಳಿದಿದೆ. ಆದರೆ, 1947ರಲ್ಲಿ ಯಾವ ಯುದ್ಧ ನಡೆದಿತ್ತು ನನಗೆ ಗೊತ್ತಿಲ್ಲ. ಯಾರಾದರು ಈ ಕುರಿತು ನನಗೆ ನನಪಿಸಿಕೊಟ್ಟರೆ ನಾನು ನನ್ನ ಪದ್ಮಶ್ರಿಯನ್ನು ಹಿಂದಿರುಗಿಸುವೆ ಹಾಗೂ ಕ್ಷಮೆ ಕೂಡ ಯಾಚಿಸುವೆ, ದಯವಿಟ್ಟು ಈ ವಿಷಯದಲ್ಲಿ ನನಗೆ ಸಹಾಯ ಮಾಡಿ' ಎಂದು ಕಂಗನಾ ಬರೆದಿದ್ದಾಳೆ.
ಭಾರಿ ಕೋಲಾಹಲ ಸೃಷ್ಟಿಯಾಗಿತ್ತು
'1947ರಲ್ಲಿ ಭಾರತಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಅದು ಭಿಕ್ಷೆ ಮತ್ತು 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಮಗೆ ಸಿಕ್ಕಿದ್ದು ಸ್ವಾತಂತ್ರ್ಯ ಎಂದು ಬುಧವಾರ ಸಂಜೆ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಕಂಗನಾ ವಿವಾದ ಹುಟ್ಟುಹಾಕಿದ್ದಾಳೆ. ಕಂಗನಾ ರಣಾವತ್ ಅವರ ಈ ಹೇಳಿಕೆಗೆ ಸಾಕಷ್ಟು ಕೋಲಾಹಲ ಸೃಷ್ಟಿಯಾಗಿದ್ದು, ಆಕೆಯ ನಿವಾಸದ ಮುಂದೆ ಹಲವರು ಪ್ರತಿಭಟನೆ ಕೂಡ ನಡೆಸಿದ್ದಾರೆ.
ಜನರಿಂದ ಭಾರಿ ಪ್ರತಿಭಟನೆ
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಎರಡು ದಿನಗಳ ನಂತರ ಕಂಗನಾ ರಣಾವತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದಕ್ಕೆ ಎಲ್ಲಾ ಪಕ್ಷಗಳ ನಾಯಕರು, ಇತಿಹಾಸಕಾರರು, ಶಿಕ್ಷಣ ತಜ್ಞರು, ಸಹ ಕಲಾವಿದರು ಸೇರಿದಂತೆ ವಿವಿಧ ರಂಗಗಳ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಕಂಗನಾಗೆ ನೀಡಿದ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ-Box Office ಅಷ್ಟೇ ಅಲ್ಲ OTT Platform ಮೇಲೂ ಧೂಳೆಬ್ಬಿಸಿದ Sooryavanshi, ಈ ದಿನ ಸ್ಟ್ರೀಮಿಂಗ್ ಆಗಲಿದೆ
ತಮ್ಮ ಚಲನಚಿತ್ರದ ಉದಾಹರಣೆ ನೀಡಿದ ಕಂಗನಾ (Kangana Ranaut National Award)
2019 ರಲ್ಲಿ ತೆರೆಕಂಡ ತಮ್ಮ ಚಲನಚಿತ್ರ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ಅನ್ನು ಉಲ್ಲೇಖಿಸಿ ಮಾತನಾಡಿದ್ದ ಕಂಗನಾ, 1857 ರ ಹೋರಾಟದ ಬಗ್ಗೆ ವ್ಯಾಪಕ ಸಂಶೋಧನೆ ಮಾಡಿರುವುದಾಗಿ ಹೇಳಿದ್ದಾಳೆ. ಚಿತ್ರದಲ್ಲಿ ಕಂಗನಾ ರಣಾವತ್ ರಾಣಿ ಲಕ್ಷ್ಮೀಬಾಯಿ ಪಾತ್ರವನ್ನು ನಿರ್ವಹಿಸಿದ್ದಾಳೆ. ಆಗ 'ರಾಷ್ಟ್ರೀಯತೆ ಉಗಮವಾಯಿತು ಅದರ ಜೊತೆಗೆ ಬಲಪಂಥೀಯತೆ ಹುಟ್ಟಿಕೊಂಡಿತು, ಆದರೆ ಅದು ಏಕೆ ಅಕಾಲಿಕವಾಗಿ ಸತ್ತಿತು? ಮತ್ತು ಗಾಂಧಿ ಏಕೆ ಭಗತ್ ಸಿಂಗ್ ಸಾಯಲು ಬಿಟ್ಟರು? ನೇತಾಜಿ ಬೋಸ್ ಏಕೆ ಕೊಲ್ಲಲ್ಪಟ್ಟರು ಮತ್ತು ಗಾಂಧಿಯವರ ಬೆಂಬಲ ಅವರಿಗೆ ಏಕೆ ಸಿಗಲಿಲ್ಲ? ವಿಭಜನಾ ರೇಖೆಯು ಓರ್ವ ಶ್ವೇತ ವ್ಯಕ್ತಿಯಿಂದ ಏಕೆ ಎಳೆಯಲ್ಪಟ್ಟಿತು? ಸ್ವಾತಂತ್ರ್ಯವನ್ನು ಆಚರಿಸುವ ಬದಲು ಭಾರತೀಯರು ಒಬ್ಬರನ್ನೊಬ್ಬರು ಏಕೆ ಹತ್ಯೆ ಮಾಡಿದರು. ಇವು ನಾನು ಹುಡುಕುತ್ತಿರುವ ಕೆಲವು ಉತ್ತರಗಳು ದಯವಿಟ್ಟು ಈ ಉತ್ತರಗಳನ್ನು ಕಂಡುಹಿಡಿಯಲು ನನಗೆ ಸಹಾಯ ಮಾಡಿ.
ಇದನ್ನೂ ಓದಿ-Janhvi Kapoor : 'ಲುಂಗಿ ಡ್ಯಾನ್ಸ್'ಗೆ ರೋಮ್ಯಾಂಟಿಕ್ ಟ್ವಿಸ್ಟ್ ನೀಡಿದ ಜಾನ್ವಿ ಕಪೂರ್
2014 ರಲ್ಲಿ ನಿಜವಾದ ಸ್ವಾತಂತ್ರ್ಯ ಬಂದಿತು
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕಂಗನಾ, ತನಗೆ ಬಿದ್ದಿರುವ ಪ್ರಶ್ನೆಗಳ ಉತ್ತರ ಕಂಡುಹಿಡಿಯಲು ಯಾರಾದರು ತಮಗೆ ಸಹಾಯ ಮಾಡಿ, ತಾನು ಹುತಾತ್ಮರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದೇನೆ ಎಂದು ಸಾಬೀತುಪಡಿಸಿದರೆ, ತಮ್ಮ ಪದ್ಮಶ್ರೀಯನ್ನು ಹಿಂದಿರುಗಿಸುವುದಾಗಿ ಹೇಳಿದ್ದಾಳೆ. 2014ರ ಸ್ವಾತಂತ್ರ್ಯದ ವಿಚಾರದಲ್ಲಿ, ನಾವು ಭೌತಿಕ ಸ್ವಾತಂತ್ರ್ಯವನ್ನು ಹೊಂದಿರಬಹುದು ಎಂದು ನಾನು ನಿರ್ದಿಷ್ಟವಾಗಿ ಹೇಳಿದ್ದೆ, ಆದರೆ 2014 ರಲ್ಲಿ ಭಾರತದ ಪ್ರಜ್ಞೆ ಮತ್ತು ಆತ್ಮಸಾಕ್ಷಿಗೆ ಮುಕ್ತಿ ಸಿಕ್ಕಿತು. ಸತ್ತ ನಾಗರಿಕತೆಯು ಜೀವಂತವಾಗಿ ತನ್ನ ರೆಕ್ಕೆಗಳನ್ನು ಬೀಸಿತು ಮತ್ತು ಅದು ಇದೀಗ ಸ್ವಚ್ಛಂದವಾಗಿ ಹಾರುತ್ತಿದೆ ಎಂದು ಕಂಗನಾ ಹೇಳಿದ್ದಾಳೆ.
ಇದನ್ನೂ ಓದಿ-ರಾಜಸ್ಥಾನದಲ್ಲಿ ನಡೆಯಲಿದೆ Vicky Kaushal ಮತ್ತು Katrina Kaif ಅದ್ದೂರಿ ವಿವಾಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ