ರಾಜಸ್ಥಾನದಲ್ಲಿ ನಡೆಯಲಿದೆ Vicky Kaushal ಮತ್ತು Katrina Kaif ಅದ್ದೂರಿ ವಿವಾಹ

ಈ ಮದುವೆಯ ಅಧಿಕೃತವಾಗಿ  ಕತ್ರಿನಾ ಕೈಫ್ ಆಗಲಿ ವಿಕ್ಕಿ ಕೌಶಲ್ ಆಗಲಿ ಎಲ್ಲಿಯೂ ಹೇಳಿಲ್ಲ. ಆದರೆ ಈ ವಿವಾಹ ಸಮಾರಂಭಕ್ಕಾಗಿ  ಅನೇಕ ಈವೆಂಟ್ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ.  

Written by - Ranjitha R K | Last Updated : Nov 12, 2021, 03:50 PM IST
  • ನಡೆಯುತ್ತಿದೆ ಕತ್ರಿನಾ, ವಿಕ್ಕಿ ಮದುವೆ ತಯಾರಿ
  • ರಾಜಸ್ಥಾನದಲ್ಲಿ ನಡೆಯುತ್ತಿದೆ ತಯಾರಿ
  • ಆದರೆ ಮದುವೆ ಬಗ್ಗೆ ಇಬ್ಬರೂ ತುಟಿ ಬಿಚ್ಚಿಲ್ಲ
ರಾಜಸ್ಥಾನದಲ್ಲಿ ನಡೆಯಲಿದೆ Vicky Kaushal ಮತ್ತು  Katrina Kaif ಅದ್ದೂರಿ ವಿವಾಹ  title=
ನಡೆಯುತ್ತಿದೆ ಕತ್ರಿನಾ, ವಿಕ್ಕಿ ಮದುವೆ ತಯಾರಿ (file photo)

ನವದೆಹಲಿ : ಬಾಲಿವುಡ್ ತಾರೆಯರಾದ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ಹೋಟೆಲ್‌ನಲ್ಲಿ ದಾಂಪತ್ಯ (Vicky Kaushal And Katrina Kaif marriage) ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದಾರೆ. ಡಿಸೆಂಬರ್ 7 ರಿಂದ 12 ರವರೆಗೆ ವಿವಾಹ ಮಹೋತ್ಸವ ನಡೆಯಲಿದ್ದು, ಮದುವೆಗೆ ಈಗಾಗಲೇ ಹೋಟೆಲ್ ಬುಕ್ಕಿಂಗ್ ಮಾಡಲಾಗಿದೆ.

ಈ ಮದುವೆಯ ಅಧಿಕೃತವಾಗಿ  ಕತ್ರಿನಾ ಕೈಫ್ (Katrina Kaif) ಆಗಲಿ ವಿಕ್ಕಿ ಕೌಶಲ್ ಆಗಲಿ ಎಲ್ಲಿಯೂ ಹೇಳಿಲ್ಲ. ಆದರೆ ಈ ವಿವಾಹ ಸಮಾರಂಭಕ್ಕಾಗಿ  ಅನೇಕ ಈವೆಂಟ್ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಮದುವೆಗೆ ಸಮಬಂಧಿಸಿದ ವಿವಿಧ  ಕಾರ್ಯಕ್ರಮಗಳಿಗೆ ಬೇರೆ ಬೇರೆ ಕಂಪನಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. 

ಇದನ್ನೂ ಓದಿ : Nawab Malik On Kangana Ranaut: 'ಹೆವಿ ಡೋಸ್ ತೆಗೆದುಕೊಂಡು ಕುಳಿತಿರುವ ಹಾಗೆ ಅನುಸುತ್ತೆ', Kangana Ranaut 'ಭಿಕ್ಷೆಯಲ್ಲಿ ಸ್ವಾತಂತ್ರ್ಯ' ಹೇಳಿಕೆಗೆ Nawab Malik ಪಂಚ್

ಕೆಲಸ ಆರಂಭಿಸಿರುವ ಇವೆಂಟ್ ಕಂಪನಿಗಳು :  
ಈ ಇವೆಂಟ್ ಕಂಪನಿಗಳೂ ಭರದಿಂದಲೇ ಕೆಲಸ ಆರಂಭಿಸಿವೆ. ಕತ್ರಿನಾ ಮತ್ತು ವಿಕ್ಕಿ ಕೌಶಲ್ (Vicky kaushal) ಟೀಂ ಕೂಡಾ ಮದುವೆಯ ತಯಾರಿ ನಡೆಸುತ್ತಿದೆ. ಮಂಗಳವಾರ, 10 ಸದಸ್ಯರ ತಂಡವು ಸಿಕ್ಸ್ ಸೆನ್ಸ್ ಬರ್ವಾರಾ ಕೋಟೆಗೆ ಆಗಮಿಸಿ ಮದುವೆಯ ತಯಾರಿಯನ್ನು ಅವಲೋಕಿಸಿದೆ. ಹೋಟೆಲ್ ಮ್ಯಾನೇಜ್ ಮೆಂಟ್ ನಿಂದ ಬಂದಿರುವ ಮಾಹಿತಿ ಪ್ರಕಾರ, ಮದುವೆಗೆ ಸಂಬಂಧಿಸಿದ ಎಲ್ಲಾ ವ್ಯವಸ್ಥೆಗಳ ಮೇಲೆ ತಂಡ ಕಣ್ಣಿಟ್ಟಿದೆ. ದಿಬ್ಬಣದಿಂದ ಹಿಡಿದು ಮೆಹಂದಿ, ಅರಶಿನ ಶಾಸ್ತ್ರ (Haldi), ಅಲಂಕಾರದ ವ್ಯವಸ್ಥೆಗಳನ್ನು ತಂಡ ನೋಡಿಕೊಳ್ಳುತ್ತಿದೆ. ಆದರೆ, ಮದುವೆ ಕಾರ್ಯಕ್ರಮಗಳ ಪಟ್ಟಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. 

ಇದನ್ನೂ ಓದಿ : TRP ರೇಸ್ ನಲ್ಲಿ ಭಾರೀ ಹಿನ್ನೆಡೆ, BIGG BOSS 15 ನಿಲ್ಲಿಸಲು ಮೇಕರ್ಸ್ ನಿರ್ಧಾರ..!

ದೀರ್ಘ ಕಾಲದಿಂದ ಡೇಟ್ ಮಾಡುತ್ತಿರುವ ಜೋಡಿ : 
ಕಳೆದ ಎರಡು ವರ್ಷಗಳಿಂದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಸುದ್ದಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಯಾವಾಗ ಕೇಳಿದರೂ ಇದು ಕೇವಲ ವದಂತಿ ಎಂದೇ ಇಬ್ಬರೂ ಹೇಳುತ್ತಿದ್ದರು. ಕೆಲ ತಿಂಗಳ ಹಿಂದೆ ಇವರಿಬ್ಬರ ನಿಶ್ಚಿತಾರ್ಥದ (Katrina-Vicky engagement) ಸುದ್ದಿಯೂ ಕೇಳಿಬಂದಿದ್ದು, ಅದನ್ನು ಕೂಡಾ ಇಬ್ಬರೂ ತಿರಸ್ಕರಿಸಿದ್ದರು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News