lackdown ಹಿನ್ನೆಲೆ ಭಾರಿ ಹೇಳಿಕೆಯೊಂದನ್ನು ನೀಡಿದ ಕಂಗನಾ ರಣಾವತ್
ಈ ವಿಡಿಯೋದಲ್ಲಿ ಕಂಗನಾ ರಣಾವತ್ ತನ್ನ ಜೀವನದ ಹೋರಾಟದ ಕುರಿತು ಮಾತನ್ನಾದಿದ್ದಾಳೆ.
ನವದೆಹಲಿ: ಬಾಲಿವುಡ್ ನಲ್ಲಿ ಹಿಂಜರಿಯದೆ ಯಾವುದೇ ಒಂದು ವಿಷಯದ ಮೇಲೆ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ತಾರೆಯರಲ್ಲಿ ಕಂಗನಾ ರಣಾವತ್ ಕೂಡ ಒಬ್ಬರು. ಹಲವು ಸಾಮಾಜಿಕ ವಿಷಯಗಳ ಮೇಲೆ ಕಂಗನಾ ತಮ್ಮ ಅಭಿಮತವನ್ನು ಜನರ ಮುಂದೆ ಮಂಡಿಸುತ್ತಾರೆ. ಅಷ್ಟೇ ಅಲ್ಲ ತನ್ನ ಜೀವನದ ಕುರಿತು ಕೂಡ ಕಂಗನಾ ಮನಸು ಬಿಚ್ಚಿ ಮಾತನಾಡುತ್ತಾರೆ. ಇತ್ತೇಚೆಗೆ ಘೋಷಿಸಲಾಗಿರುವ ಲಾಕ್ ಡೌನ್ ನಡುವೆಯೇ ಕಂಗನಾ ಹಂಚಿಕೊಂಡಿರುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ ಈ ವಿಡಿಯೋದಲ್ಲಿ ಕಂಗನಾ ತಮ್ಮ ಜೀವನದಲ್ಲಿನ ಕೆಟ್ಟ ಕಾಲದ ಕುರಿತು ಮಾತನಾಡಿದ್ದಾರೆ.
ತನ್ನ ವಿಚಾರಗಳನ್ನು ಬಹಿರಂಗವಾಗಿ ಮಂಡಿಸುವ ಕಂಗನಾ ರಣಾವತ್, ಈ ವಿಡಿಯೋದಲ್ಲಿ "ನವರಾತ್ರಿಯ ಐದನೇ ದಿನವಾಗಿರುವ ಇಂದು ಶುಭಾಷಯಗಳಿಂದ ಬೋರ್ ಆಗಿರಬಹುದು . ಇಂದಿನ ಪರಿಸ್ಥಿತಿಯಲ್ಲಿ ಹಲವರು ಕಣ್ಣೀರಿಡುತ್ತಿರಬಹುದು. ಆದರೆ ಸಮಯ ಯಾವಾಗಲು ಕೆಟ್ಟದಾಗಿರುವುದಿಲ್ಲ, ಕೆಟ್ಟ ಸಮಯವನ್ನು ಎಂದಿಗೂ ಕೆಟ್ಟದಾಗಿ ಭಾವಿಸಬೇಡಿ. ನಿಜ ಹೇಳುವುದಾದರೆ ಕೆಟ್ಟ ಸಮಯವೇ ಒಳ್ಳೆಯ ಸಮಯವಾಗಿರುತ್ತದೆ. ನಮ್ಮ ಉದ್ಯಮದ ಹಲವು ಕಲಾವಿದರು ತಾವು ತಮ್ಮ ಸಾಧನೆಯಿಂದ ಸಂತುಷ್ಟರಾಗಿದ್ದೇವೆ ಎಂದು ಹೇಳುವುದಿಲ್ಲ ಆದರೆ, ಇದು ನನ್ನ ಪಾಲಿಗೆ ತುಂಬಾ ದೊಡ್ಡ ಸಾಧನೆ ಎಂದು ನಾನು ಮಾತ್ರ ಹೇಳಬಲ್ಲೆ. ಕಂಗನಾ ಅವಳ ಈ ವಿಡಿಯೋ ಅನ್ನು ಅವಳ ಸಹೋದರಿ ರಂಗೋಲಿ ಚಂದೆಲ್ ಹಂಚಿಕೊಂಡಿದ್ದಾಳೆ.
ಚಿತ್ರರಂಗದಲ್ಲಿನ ತನ್ನ ಪಯಣದ ಕುರಿತು ಮಾತನಾಡುವ ಕಂಗನಾ, "15-16ನೇ ವಯಸ್ಸಿನಲ್ಲಿ ನನ್ನ ಮನೆಯಿಂದ ಓಡಿಬಂದಿದ್ದೆ. ಕೈಗಳನ್ನು ಮೇಲೆತ್ತಿ ನಾನು ನಕ್ಷತ್ರಗಳನ್ನು ಬಾಚಿಕೊಲ್ಲಬಹುದು ಎಂದು ನನಗನಿಸುತ್ತಿತ್ತು. ಮನೆಯಿಂದ ಓಡಿಹೋದ 2-3 ವರ್ಷದಲ್ಲಿಯೇ ನಾನು ಸ್ಟಾರ್ ಆಗಿದ್ದೆ. ಜೊತೆಗೆ ನಾನು ಡ್ರಗ್ಸ್ ಅಡಿಕ್ಟ್ ಕೂಡ ಆಗಿದ್ದೆ. ನನ್ನ ಜೀವನದಲ್ಲಿ ಹಲವು ಕಾಂಡಗಳು ನಡೆಯುತ್ತಿದ್ದವು. ಕೇವಲ ಸಾವೇ ನನ್ನನ್ನು ಅಂತಹ ಜನರಿಂದ ಅಥವಾ ಆ ಪರಿಸ್ಥಿತಿಯಿಂದ ಹೊರತರಲು ಸಾಧ್ಯ ಎಂದು ನನಗೆ ಅನಿಸಲಾರಂಭಿಸಿತ್ತು. ಆಗ ನನ್ನ ಜೀವನದಲ್ಲಿ ಓರ್ವ ಉತ್ತಮ ಸ್ನೇಹಿತರ ಎಂಟ್ರಿ ಆಗಿತ್ತು. ಆದ್ರೆ, ಅವರು ತುಂಬಾ ಸ್ಟ್ರಗಲ್ ಮಾಡುತ್ತಿದ್ದರು ಹಾಗೂ ವೃತ್ತಿಯಲ್ಲಿ ಅವರು ಫೈಟ್ ಮಾಸ್ಟರ್ ಆಗಿದ್ದರು. ಅವರು ನನಗೆ ಯೋಗ ಕಲಿಸಲು ಆರಂಭಿಸಿದರು. ಒಂದು ದಿನ ಅವರು ನನಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿದರು. ನಾನು ಕಣ್ಣುಗಳನ್ನು ಮುಚ್ಚುತ್ತಲೇ ನನಗೆ ಅಳು ಬಂತು. ಇದನ್ನು ಕಂಡು ಅವರೂ ಕೂಡ ಗಲಿಬಿಲಿಗೊಂಡರು.
ಆಗ ಅವರು ಕಣ್ಣು ಮುಚ್ಚದೇ ಹೋದರೆ ಮೆಡಿಟೇಶನ್ ಹೇಗೆ ಮಾಡುವಿ ಎಂದು ಪ್ರಶ್ನಿಸಿದರು. ಬಳಿಕ ಅವರು ನನಗೆ ಪುಸ್ತಕವೊಂದನ್ನು ನೀಡಿದರು. ಅಂದಿನಿಂದ ವಿವೆಕಾನಂದ್ ಅವರನ್ನು ನಾನು ನನ್ನ ಗುರು ಎಂದು ಭಾವಿಸಲಾರಂಭಿಸಿದೆ ಹಾಗೂ ಅವರ ಮಾರ್ಗದರ್ಶನದಲ್ಲಿ ನನ್ನ ಜೀವನವನ್ನು ಸುಧಾರಿಸಿದೆ" ಎಂದು ಹೇಳಿದ್ದಾಳೆ ಇತ್ತೀಚೆಗಷ್ಟೇ ಕಂಗನಾ ರಣಾವತ್ ಕೊರೊನಾ ವೈರಸ್ ಸಂಕಟದ ಕುರಿತು ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಳು. ಈ ಕುರಿತು ಹೇಳಿಕೆ ನೀಡಿದ್ದ ಕಂಗನಾ, ಕೊರೊನಾ ವೈರಸ್ ಒಂದು 'ಸಂಭಾವಿತ ಜೈವಿಕ ಯುದ್ಧ'ವಾಗಿದೆ ಎಂದಿದ್ದಳು. ಅಷ್ಟೇ ಅಲ್ಲ, ಒಂದು ದೇಶ ಇನ್ನೊಂದು ದೇಶದ ಅರ್ಥವ್ಯವಸ್ಥೆಯನ್ನು ಕೀಳಮಟ್ಟಕ್ಕೆ ತೋರಿಸುವ ಪ್ರಯತ್ನಗಳು ನಡೆದಿದ್ದು, 'Covid-19 ಮಹಾಮಾರಿ ಒಂದು 'ಸಂಭಾವಿತ ಜೈವಿಕ ಯುದ್ಧವಾಗಿದೆ" ಎಂದಿದ್ದಳು.