ನವದೆಹಲಿ: ಸುಶಾಂತ್ ಸಿಂಗ್ ರಜಪೂತ್‌ಗೆ ನ್ಯಾಯ ದೊರಕಿಸಿಕೊಡುವ ಅಭಿಯಾನದಲ್ಲಿ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಕಂಗನಾ ರನೌತ್ (Kangana Ranaut) ಅವರ ಕುಟುಂಬದ ಸುರಕ್ಷತೆಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಗಿದೆ. ಕಂಗನಾ ರನೌತ್ ಅವರ ತಾಯಿ ಮಗಳ ಸುರಕ್ಷತೆಗಾಗಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಪೂಜೆಯ ವಿಡಿಯೋವನ್ನು ಟೀಮ್ ಕಂಗ್ನಾ ಪೋಸ್ಟ್ ಮಾಡಿದ್ದು ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪೋಸ್ಟ್ನಲ್ಲಿ, 'ನನ್ನ ಸುರಕ್ಷತೆಯ ಬಗ್ಗೆ ತಾಯಿ ಚಿಂತಿತರಾಗಿದ್ದಾರೆ. ಪೂಜೆ ಮುಗಿದ ನಂತರ ನನಗೆ ಸಂತೋಷವಾಗಿದೆ ಮತ್ತು ನನ್ನ ಕುಟುಂಬಕ್ಕೆ ಧನ್ಯವಾದಗಳು ಎಂದು ಬರೆದಿರುವ ಕಂಗನಾ ಪೋಸ್ಟ್‌ನ ಕೊನೆಯಲ್ಲಿ 'ಹರ್ ಹರ್ ಮಹಾದೇವ್' ಮತ್ತು 'ಕಾಶಿ ವಿಶ್ವನಾಥ್ ಕಿ ಜೈ' ಎಂದು ಬರೆಯುವ ಮೂಲಕ ಬೋಲೆನಾಥನನ್ನು ಸ್ಮರಿಸಿದ್ದಾರೆ. ಕಂಗನಾ ರನೌತ್ ಈ ದಿನಗಳಲ್ಲಿ ತನ್ನ ಹೋಂ ಟೌನ್ ಮಂಡಿಯಲ್ಲಿದ್ದಾರೆ.



ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಕೂಡ ತಮ್ಮ ಸಹೋದರರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ, ಇದನ್ನು '24 ಅವರ್ ಗ್ಲೋಬಲ್ ಪ್ರಾರ್ಥನೆ ಫಾರ್ ಸುಶಾಂತ್ 'ಎಂದು ಹೆಸರಿಸಲಾಗಿದೆ. ಈ ಪ್ರಾರ್ಥನೆಯು ಇಡೀ ದಿನ ನಡೆಯಿತು. ಈ ಸಂದರ್ಭದಲ್ಲಿ ವಿಶ್ವದಾದ್ಯಂತ ಹಾಜರಿದ್ದ ಸುಶಾಂತ್ ಸಿಂಗ್ ರಜಪೂತ್ ಬೆಂಬಲಿಗರು ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಪ್ರಾರ್ಥಿಸಿದರು. ಶ್ವೇತಾ ಅವರ ಈ ಅಭಿಯಾನದಲ್ಲಿ ಅಂಕಿತಾ ಲೋಖಂಡೆ ಮತ್ತು ಕೃತಿ ಸನೋನ್ ಕೂಡ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕುಟುಂಬವು ಸುಶಾಂತ್ ಗಾಗಿ ಪ್ರಾರ್ಥಿಸುವ ವಿಡಿಯೋವನ್ನೂ ಶ್ವೇತಾ ಹಂಚಿಕೊಂಡಿದ್ದಾರೆ.


ಅಭಿಯಾನವನ್ನು ಪ್ರಾರಂಭಿಸಿದ ಕಂಗನಾ : 
ಕಂಗನಾ ರನೌತ್ ಬಾಲಿವುಡ್‌ನ ಎಲ್ಲಾ ದುಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ್ದು ಸುಶಾಂತ್‌ಗೆ ನ್ಯಾಯ ಒದಗಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ವರುಣ್ ಧವನ್, ಪರಿಣಿತಿ ಚೋಪ್ರಾ, ಸೂರಜ್ ಪಾಂಚೋಲಿ, ಕೃತಿ ಸನೋನ್ ಸೇರಿದಂತೆ ಸುಶಾಂತ್ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕಂಗನಾ ಒತ್ತಾಯಿಸಿದ ನಂತರ ಆಕೆಗೆ ಇನ್ನೂ ಅನೇಕ ಬಾಲಿವುಡ್ ತಾರೆಯರು ಬೆಂಬಲ ನೀಡಿದರು.