ಮುಂಬೈ:ಖ್ಯಾತ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಂದೆಲ್ ಯಾವಾಗಲು ತಮ್ಮ ದಿಟ್ಟ ಹಾಗೂ ನೇರ ನುಡಿಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ದೀಪಿಕಾ ಪಡುಕೋಣೆ ಅವರ JNU ಭೇಟಿಯ ಕುರಿತು ಕೂಡ ನೇರವಾಗಿ ಮಾತನಾಡಿದ್ದ ರಂಗೋಲಿ ಇದೊಂದು PR ಸ್ಟಂಟ್ ಎಂದು ಹೇಳಿದ್ದರು. ಇನ್ನೊಂದೆಡೆ ಕಂಗನಾ ರಣಾವತ್ ದೀಪಿಕಾ ಅವರ 'ಛಪಾಕ್' ಚಿತ್ರದ ಕುರಿತು ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.  ರಂಗೋಲಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓರ್ವ ಟ್ವಿಟ್ಟರ್ ಬಳಕೆದಾರರು ನಿಮ್ಮ ಮೇಲೂ ಕೂಡ ಆಸಿಡ್ ದಾಳಿ ನಡೆದಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತು ಆದರೆ ಯಾರು ಆ ದಾಳಿ ನಡೆಸಿದ್ದರು ಅವರ ಹೆಸರು ನಮಗೆ ಇದುವರೆಗೆ ತಿಳಿದಿಲ್ಲ ಎಂದಿದು ಪರೋಕ್ಷವಾಗಿ ಪ್ರಶ್ನಿಸಿದ್ದಾನೆ.



COMMERCIAL BREAK
SCROLL TO CONTINUE READING

ಇದಕ್ಕೆ ಉತ್ತರಿಸಿರುವ ರಂಗೋಲಿ " ಹಾಯ್ ಅರ್ಜಿತಾ, ನನ್ನ ಮೇಲೆ ಆಸಿಡ್ ದಾಳಿ ನಡೆಸಿದವನ ಹೆಸರು ಅವಿನಾಶ್ ಶರ್ಮಾ. ಅವನು ನಮ್ಮ ಕಾಲೇಜಿನಲ್ಲಿ ಓದುತ್ತಿದ್ದ. ನಾವಿಬ್ಬರೂ ಒಂದೇ ಫ್ರೆಂಡ್ ಸರ್ಕಲ್ ಗೆ ಸೇರಿದವರಾಗಿದ್ದೆವು. ಅವನು ನನಗೆ ಪ್ರಪೋಸ್ ಮಾಡಿದ ಬಳಿಕ ನಾನು ಅವನಿಂದ ಅಂತರ ಕಾಯ್ದುಕೊಂಡೆ. ನಾನು ಈ ಸಂಗತಿಯನ್ನು ಯಾರ ಜೊತೆ ಕೂಡ ಹಂಚಿಕೊಳ್ಳಲಿಲ್ಲ. ಆದರೆ, ಅವನು ಮಾತ್ರ ಒಂದು ದಿನ ನನ್ನ ಜೊತೆ ವಿವಾಹವಾಗುತ್ತೇನೆ ಎಂದು ಎಲ್ಲರಿಗೂ ಹೇಳುತ್ತಲೇ ಇದ್ದ.



ನನ್ನ ಮದುವೆ ಓರ್ವ ಏರ್ಫೋರ್ಸ್ ಅಧಿಕಾರಿ ಜೊತೆ ಮಾಡಲು ನನ್ನ ಪೋಷಕರು ನಿರ್ಧರಿಸಿದಾಗ ಆತ ಸ್ವಲ್ಪ ಚಿಂತೆಗೊಳಗಾದ. ಬಳಿಕ ಆತ ನನ್ನನ್ನು ಪೀಡಿಸಲು ಆರಂಭಿಸಿದ. ನಾನು ಅದನ್ನು ವಿರೋಧಿಸಿದ ಬಳಿಕ ಆತ ನನ್ನ ಮೇಲೆ ಆಸಿಡ್ ಎರಚುವುದಾಗಿ ಬೆದರಿಕೆ ಹಾಕಿದ. ನಾನು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ಅದಾದ ಮೇಲೂ ಸಹ ನಾನು ಮೌನವಹಿಸಿದ್ದೆ. ನನ್ನ ಮೇಲೆ ಆಸಿಡ್ ದಾಳಿ ನಡೆದಾಗ ನಾನು ನಾಲ್ವರು ಯುವತಿಯರ ಜೊತೆ ಸೇರಿ ಒಂದು PG ಯಲ್ಲಿ ವಾಸಿಸುತ್ತಿದ್ದೆ. ನಮ್ಮ PGಗೆ ಬಂದ ಆ ಯುವಕ ಜಗ್ ನಲ್ಲಿ ತಂಡ ಆಸಿಡನ್ನು ನನ್ನ ಮುಖಕ್ಕೆ ಎರಚಿದ ಎಂದು ಹೇಳಿಕೊಂಡಿದ್ದಾರೆ.



ಇದಕ್ಕೂ ಮೊದಲ ದೀಪಿಕಾ ಪಡುಕೋಣೆ ಹೆಸರನ್ನು ಉಲ್ಲೇಖಿಸದೆ ಅವರನ್ನು ಪ್ರಶ್ನಿಸಿದ್ದ ಕಂಗನಾ ಸಹೋದರಿ ರಂಗೋಲಿ ಚಂದೆಲ್, ಉರಿ ಉಗ್ರ ದಾಳಿ, ಆರ್ಟಿಕಲ್ 370, CAA ಅಥವಾ ದೇಶದ ಇತರೆ ಯಾವುದೇ ವಿಷಯಗಳ ಬಗ್ಗೆ ನೀವು ಯಾವುದಾದರೂ ಒಂದು ಐಡಿಯಾಲಾಜಿಗೆ ಸಾಥ್ ನೀಡಿದ್ದೀರಾ? ಎಂದು ಪ್ರಶ್ನಿಸಿದ್ದಳು. ಅಷ್ಟೇ ಅಲ್ಲ ನಾನು ಈಗಲೂ ಸಹ ಹೇಳುತ್ತೇನೆ ಅವರಿಗೆ JNU ವಿದ್ಯಾರ್ಥಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ, ಅವರಿಗೆ ಹಣದಲ್ಲಿ ಮಾತ್ರ ಆಸಕ್ತಿ ಇದೆ ಎಂದಿದ್ದಳು. ಆದರೆ, ಇದೇ ವೇಳೆ ದೀಪಿಕಾ ಬಹಿರಂಗವಾಗಿ ಮಾಡಿರುವ ಈ ಕೆಲಸ ತಮಗೆ ಮುಚ್ಚುಗೆಯಾಗಿದ್ದು, ಬಿಲದಲ್ಲಿ ಇನ್ನೂ ಹಲವಾರು ಇಲಿಗಳು ಅಡಗಿ ಕುಳಿತಿವೆ. ಎಲ್ಲ ಇಲಿಗಳು ಮೆಲ್ಲಗೆ ಹೊರಬೀಳಲಿವೆ. JNUಗೆ ಭೇಟಿ ನೀಡಿ ಬಹಿರಂಗವಾಗಿ PR ಸ್ಟಂಟ್ ಮಾಡಿರುವ ದೀಪಿಕಾ ಅವರನ್ನು ನಾವು ಗೌರವಿಸಬೇಕು ಎಂದಿದ್ದಳು.