ಮುಂಬೈ: ರಾಜಕೀಯ ಹಿನ್ನೆಲೆಯುಳ್ಳ ಚಿತ್ರದಲ್ಲಿ  ಕಂಗನಾ ರನೌತ್ (KanganaRanaut ) ಕಾಣಿಸಿಕೊಳ್ಳಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಪಾತ್ರದಲ್ಲಿ ಕಂಗನಾ ಮಿಂಚಲಿದ್ದಾರೆ. ಆದರೆ ಇದು ಇಂದಿರಾ ಗಾಂಧಿ ಬಯೋಪಿಕ್ ಅಲ್ಲ ದು ಕಂಗನಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಚಿತ್ರದಲ್ಲಿ ಅನೇಕ ತಾರೆಯರು ಕಾಣಿಸಿಕೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

ಈ ಸಿನೆಮಾದಲ್ಲಿ (Cinema) ಕೆಲಸ ಮಾಡುವ ಬಗ್ಗೆ ಕಂಗನಾ ರನೌತ್ (Kangana Ranaut) ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಚಿತ್ರದ ಚಿತ್ರಕಥೆ ಅಂತಿಮ ಹಂತದಲ್ಲಿರುವುದಾಗಿ ಕಂಗನಾ ಹೇಳಿದ್ದಾರೆ. ಇದು ಇಂದಿರಾ ಗಾಂಧಿಯವರ (Indira Gandhi) ಜೀವನಚರಿತ್ರೆಯಲ್ಲ ಎನ್ನುವುದನ್ನು ಕೂಡಾ ಅವರು ಸ್ಪಷ್ಟಪಡಿಸಿದ್ದಾರೆ. ಇದೊಂದು ರಾಜಕೀಯ ಹಿನ್ನೆಲೆಯುಳ್ಳ  ಭವ್ಯ ಚಿತ್ರ ಎಂದು ಕಂಗನಾ ಹೇಳಿದ್ದಾರೆ. ಈ ಚಿತ್ರವು ಭಾರತದ ಸಾಮಾಜಿಕ-ರಾಜಕೀಯ ಸನ್ನಿವೇಶವನ್ನು ನಮ್ಮ ಮುಂದಿನ ಪೀಳಿಗೆಗೆ ಅರ್ಥಮಾಡಿಸಲು ಸಹಾಯ ಮಾಡುತ್ತದೆ ಎಂದು ಕಂಗನಾ ಹೇಳಿದ್ದಾರೆ. 


ಇದನ್ನೂ ಓದಿಕೊನೆಗೂ ರಿಲೀಸ್ ಆಯ್ತು 'Bigg Boss ಸೀಸನ್-8' ರ ಪ್ರೋಮೋ! ಇಲ್ಲಿದೆ Video


"ಅನೇಕ ಪ್ರಸಿದ್ಧ ಕಲಾವಿದರು ಈ ಚಿತ್ರದ ನಟಿಸಲಿದ್ದಾರೆ. ಮತ್ತು ಭಾರತ ರಾಜಕಾರಣದ  ಅತ್ಯಂತ ಶ್ರೇಷ್ಠ ನಾಯಕಿಯ ಪಾತ್ರವನ್ನು ನಿರ್ವಹಿಸಲು ಉತ್ಸುಕಳಾಗಿರುವುದಾಗಿ ಅವರು ಹೇಳಿದ್ದಾರೆ.


Katreena Kaif ಶೇರ್ ಮಾಡಿದ ಪೋಟೋ ಯಾರದ್ದು? ಅಭಿಮಾನಿಗಳ ಮಧ್ಯೆ ನಡೆಯುತ್ತಿದೆ ಭಾರೀ ಚರ್ಚೆ


ಕಂಗನಾ ರನೌತ್ ಅವರ ಮುಂಬರುವ ಚಿತ್ರಗಳ ಬಗ್ಗೆ ಹೇಳುವುದಾದರೆ, 'ತಲೈವಿ'(Thalaivi) ಬಿಡುಗಡೆಗೆ ಸಿದ್ಧವಾಗಿದೆ. ಇದರೊಂದಿಗೆ ಕಂಗನಾ 'ತೇಜಸ್'(Thejas) ಮತ್ತು ‘ಧಾಕಡ್’ (Dhakad) ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಅವರು 'ಮಣಿಕರ್ನಿಕಾ ರಿಟರ್ನ್ಸ್' ಬಗ್ಗೆಯೂ ಪ್ರಕಟಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.