Katreena Kaif ಶೇರ್ ಮಾಡಿದ ಪೋಟೋ ಯಾರದ್ದು? ಅಭಿಮಾನಿಗಳ ಮಧ್ಯೆ ನಡೆಯುತ್ತಿದೆ ಭಾರೀ ಚರ್ಚೆ

ಕತ್ರಿನಾ ಕೈಫ್ ಪೋಟೋವೊಂದನ್ನು ಶೇರ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಟೋಗಳದ್ದೇ ಮಾತು.  ಆದರೆ ಇಲ್ಲಿವರೆ ಕತ್ರಿನಾ ಆಗಲಿ ವಿಕ್ಕಿ ಕೌಶಲ್ ಆಗಲಿ ಅವರಿಬ್ಬರ ಸಂಬಂಧದ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

Written by - Ranjitha R K | Last Updated : Jan 28, 2021, 07:18 PM IST
  • ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್ ಮಾಡಿದ ಕತ್ರಿನಾ
  • ಇದೀಗ ಎಲ್ಲೆಡೆ ಈ ಫೋಟೋ ಬಗ್ಗೆಯೇ ಚರ್ಚೆ
  • ಹೊಸ ವರ್ಷಾಚರಣೆ ವೇಳೆಯೂ ಜೊತೆಗಿದ್ದ ಕತ್ರಿನಾ, ವಿಕ್ಕಿ ಕೌಶಲ್
Katreena Kaif ಶೇರ್ ಮಾಡಿದ ಪೋಟೋ ಯಾರದ್ದು? ಅಭಿಮಾನಿಗಳ ಮಧ್ಯೆ ನಡೆಯುತ್ತಿದೆ ಭಾರೀ ಚರ್ಚೆ title=
ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಶೇರ್ ಮಾಡಿದ ಕತ್ರಿನಾ (file photo)

ನವದೆಹಲಿ: ಬಾಲಿವುಡ್ ನಲ್ಲಿ ಈಗ ಕತ್ರಿನಾ ಕೈಫ್ (Katreena Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ಅವರದ್ದೇ ಮಾತು. ಎಲ್ಲೆಡೆ ಇವರಿಬ್ಬರ ಮಾತೇ ಕೇಳಿ ಬರುತ್ತಿದೆ. ಬಹಳಷ್ಟು ಕಡೆಗಳಲ್ಲಿ ಇವರಿಬ್ಬರು ಜೊತೆಗಿರುವುದನ್ನು ಕೂಡಾ ಗುರುತಿಸಲಾಗಿದೆ. ಇದೀಗ ಕರ್ತಿನಾ ಕೈಫ್ ಪೋಟೋವೊಂದನ್ನು ಶೇರ್ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಟೋಗಳದ್ದೇ ಮಾತು.  ಆದರೆ ಇಲ್ಲಿವರೆ ಕತ್ರಿನಾ ಆಗಲಿ ವಿಕ್ಕಿ ಕೌಶಲ್ ಆಗಲಿ ಅವರಿಬ್ಬರ ಸಂಬಂಧದ ಬಗ್ಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. 

ಕತ್ರಿನಾ ಪೋಸ್ಟ್ ಮಾಡಿರುವ ಫೋಟೋ : 
ಕತ್ರಿನಾ ಕೈಫ್ ಇನ್ಸ್ಟಾ ಗ್ರಾಂನಲ್ಲಿ (Instagram) ಫೊಟೋವೊಂದನ್ನು ಶೇರ್ ಮಾಡಿದ್ದಾರೆ. ಈ ಪೋಟೋದಲ್ಲಿ ಕತ್ರಿನಾ ಯಾರನ್ನೋ ತಬ್ಬಿಕೊಂಡಿರುವುದು ಕಂಡುಬರುತ್ತದೆ. ಆದರೆ ಅದು ಯಾರೆಂದು ಗೊತ್ತಾಗುವುದಿಲ್ಲ. ಯಾಕೆಂದರೆ ಆ ವ್ಯಕ್ತಿಯ ಮುಖ ಫೋಟೋದಲ್ಲಿ ಕಾಣುವುದಿಲ್ಲ. ಇದೀಗ  ಈ ಫೋಟೋವನ್ನು ಕತ್ರಿನಾ (Katreena Kaif)ಮತ್ತು ವಿಕ್ಕಿ ಕೌಶಲ್ ಅಭಿಮಾನಿಗಳು ಕೂಡಾ ಶೇರ್ ಮಾಡುತ್ತಿದ್ದಾರೆ.

 

ಇದನ್ನೂ ಓದಿ Salaar ನಲ್ಲಿ ಪ್ರಭಾಸ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ಈ ನಟಿ...!

ಇಷ್ಟಕ್ಕೂ ಆ ಟೀ ಶರ್ಟ್ ಯಾವುದು ?
ಕತ್ರಿನಾ ಕೈಫ್ ಜೊತೆ ಫೋಟೋದಲ್ಲಿರುವ ವ್ಯಕ್ತಿ ಹಳದಿ ಬಣ್ಣದ ಟೀ ಶರ್ಟ್ (T Shirt) ಧರಿಸಿದ್ದಾರೆ. ಇನ್ನೊಂದು ಫೊಟೋದಲ್ಲಿ ವಿಕ್ಕಿ ಕೌಶಲ್ ಕೂಡಾ ಅದೇ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಇದೀಗ  ಎರಡೂ ಪೋಟೋಗಳನ್ನು ಜೊತೆಯಾಗಿ ಪೋಸ್ಟ್ ಮಾಡುತ್ತಿರುವ ಅಭಿಮಾನಿಗಳು ಕತ್ರಿನಾ ಜೊತೆಗಿದ್ದ ವ್ಯಕ್ತಿ ವಿಕ್ಕಿ ಕೌಶಲ್ (Vicky Kaushal) ಎಂದೇ ಹೇಳುತ್ತಿದ್ದಾರೆ.

 

ಇದಕ್ಕೂ ಮೊದಲು ವೈರಲ್ ಆಗಿತ್ತು ಪೋಟೋ :
ಇದಕ್ಕೂಮೊದಲು ಕೂಡಾ ಕತ್ರಿನ ತನ್ನ ಇನ್ಸ್ಟಾದಲ್ಲಿ ವಿಕ್ಕಿ ಕೌಶಲ್ ಫೋಟೋವನ್ನು ಹಂಚಿಕೊಂಡಿದ್ದರು. ಅಲ್ಲದೆ ಇಬ್ಬರೂ ಆಲಿಬಾಗ್ ನಲ್ಲಿ ಹೊಸ ವರ್ಷವನ್ನು (New year) ಆಚರಿಸಿದ್ದರು. ಇದಾದ ಮೇಲೆ ಅಭಿಮಾನಿಗಳು ಇವರಿಬ್ಬರ ಹೆಸರನ್ನು ಥಳಕು ಹಾಕಲು ಆರಂಭಿಸಿದ್ದರು. ಆದರೆ ಇದುವರೆಗೂ ಕತ್ರಿನಾ ಅಥವಾ ವಿಕ್ಕಿ ಕೌಶಲ್ ಯಾರೂ ಈ ಬಗ್ಗೆ ಯಾವ ಸ್ಪಷ್ಟನೆಯನ್ನೂ ನೀಡಿಲ್ಲ

ಇದನ್ನೂ ಓದಿ : Viral Video: ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು Tiger Shroff ಮಾಡಿರುವ ಈ ಸ್ಟಂಟ್ ತಪ್ಪದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News