Actor Nagabhushana case : ಸ್ಯಾಂಡಲ್‌ವುಡ್‌ ನಟ ನಾಗಭೂಷಣ್ ಮೇಲೆ ಹಿಟ್‌ ಆಂಡ್‌ ರನ್‌ ಆರೋಪ ಕೇಳಿ ಬಂದಿದೆ. ಸಧ್ಯ ನಟ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಇದೀಗ ಘಟನೆ ಕುರಿತು ನಾಗಭೂಷಣ್ ನೀಡಿರುವ ಹೇಳಿಕೆಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ನಾನು ಈ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದುಕೊಂಡು ಸಿನಿಮಾ ಇಂಡಸ್ಟ್ರೀಯಲ್ಲಿ ನಟನಾಗಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ದಿನಾಂಕ:30-09-2023 ರಂದು ನಾನು ನನ್ನ ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ ಸ್ನೇಹಿತರನ್ನು ಭೇಟಿ ಮಾಡಿಕೊಂಡು ವಾಪಸ್ಸು ಜೆ.ಪಿ ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕೀಯ ಸೆಲ್ವೇಸ್ ಕಾರ್ ನಂಬರ್ ಕೆಎ-09-ಎಂಜಿ-5335ರ ವಾಹನವನ್ನು ಚಲನೆ ಮಾಡಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೊರಟಿದ್ದೆ.


ಇದನ್ನೂ ಓದಿ: ಸಿಕ್ರೇಟ್ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದಾರಾ ರಣಬೀರ್ ಕಪೂರ್?


ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬೀಜ್ ಅಪಾರ್ಟಮೆಂಟ್ ಹತ್ತಿರ ರಾತ್ರಿ ಸುಮಾರು 09-45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಅಪಾರ್ಟಮೆಂಟ್ ಹತ್ತಿರ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಇಬ್ಬರೂ ಪುಟ್ ಪಾತ್ ಮೇಲಿಂದ ರಸ್ತೆಗೆ ಕೆಳಗೆ ಇಳಿದು ರಸ್ತೆಗೆ ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದೆ. 


ಕೂಡಲೇ ಅಕ್ಕಪಕ್ಕದಲ್ಲಿದ್ದ ಜನರು ಮತ್ತು ಅಪಾರ್ಟಮೆಂಟ್ ವಾಸಿಗಳು ಓಡಿ ಬಂದು ರಸ್ತೆಯ ಮೇಲೆ ಬಿದ್ದಿದ್ದ ಪಾದಚಾರಿಗಳನ್ನು ಮೇಲಕ್ಕೆ ಎತ್ತಿ ರಸ್ತೆ ಬದಿಗೆ ತಂದು ಕೂರಿಸಿದರು. ನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಪಾದಚಾರಿಗಳನ್ನು ಕೂರಿಸಿದ್ದ ಸ್ಥಳಕ್ಕೆ ಹೋಗಿ ನೋಡಲಾಗಿ ಪಾದಚಾರಿಣಿ ಹೆಂಗಸಿಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿ ಮಾತಾನಾಡದ ಸ್ಥಿತಿಯಲ್ಲಿದ್ದರು ಮತ್ತೊಬ್ಬ ಪಾದಚಾರಿ ಗಂಡಸಿಗೆ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ರಕ್ತಗಾಯವಾಗಿ ಮಾತಾನಾಡುತ್ತಿದ್ದರು.


ಇದನ್ನೂ ಓದಿ: ದಂಪತಿಗೆ ನಟ ನಾಗಭೂಷಣ ಕಾರು ಡಿಕ್ಕಿ.. ಮಹಿಳೆ ಸಾವು!


ನಂತರ ನಾನು ಗಾಯಾಳುಗಳನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದಾಗ ನನ್ನ ಕಾರು ಸ್ಟಾಟ್ ಆಗಲಿಲ್ಲನಂತರ ನಾನು ಕಾರಿನಿಂದ ಕೆಳಕ್ಕೆ ಇಳಿದು ಒಂದು ಆಟೋರಿಕ್ಷಾದಲ್ಲಿ ನಾನು ಮತ್ತು ಅಲ್ಲಿದ್ದ ಜನರು ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿರುವ ಅಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದಾಗ ಅಸ್ಟಾ ಆಸ್ಪತ್ರೆಯ ವೈದ್ಯರು ಗಾಯಾಳು ಹೆಂಗಸನ್ನು ಪರೀಕ್ಷಿಸಿ ಗಾಯಾಳುವಿಗೆ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿದ್ದು ಚಿಕಿತ್ಸೆಗೆ ಬರುವ ದಾರಿಯ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದರು.


ಅಷ್ಟರಲ್ಲಿ ವಿಷಯ ತಿಳಿದು ಗಾಯಾಳುಗಳ ಮಗ ಆಸ್ಪತ್ರೆಗೆ ಬಂದು ಮತ್ತೊಬ್ಬ ಗಾಯಾಳುವಿಗೆ ಅಸ್ಟಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೂಡಿಸಿ ಹೆಚ್ಚಿನ ಚಿಕಿತ್ಸೆಗೆ ಬನ್ನೇರಘಟ್ಟ ರಸ್ತೆಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಮೃತ ಪಾದಚಾರಿಣಿ ಹೆಸರು ಶ್ರೀಮತಿ, ಪ್ರೇಮ ಎಸ್ 48ವರ್ಷ ಹಾಗೂ ಗಾಯಾಳು ಪಾದಚಾರಿಯ ಹೆಸರು ಶ್ರೀ.ಕೃಷ್ಣ ಬಿ 58ವರ್ಷ ಇಬ್ಬರೂ ಸುಪ್ರಭಾತ ಶ್ರೀಂ ಬೀಜ್ ಅಪಾರ್ಟಮೆಂಟ್ ನಲ್ಲಿ ವಾಸಿಗಳೆಂದು ನನಗೆ ತಿಳಿಯಿತು. 


ಇದನ್ನೂ ಓದಿ: ಶಾರೂಕ್‌, ದೀಪಿಕಾ, ಆಲಿಯಾ ಮೂವರು ಅಲ್ಲ..! ಇನ್‌ಸ್ಟಾಗ್ರಾಂ ಪ್ರತಿ ಪೋಸ್ಟ್‌ಗೆ 3 ಕೋಟಿ ಗಳಿಸೋ ಸೆಲೆಬ್ರಿಟಿ ಇವರು


ಅಷ್ಟರಲ್ಲಿ ವಿಷಯ ತಿಳಿದು ಆಸ್ಪತ್ರೆಗೆ ಸಂಚಾರ ಪೊಲೀಸರು ಬಂದರು ನಾನು ಅವರೊಂದಿಗೆ ಕೆ.ಎಸ್.ಲೇಔಟ್ ಸಂಚಾರ ಪೊಲೀಸ್ ಠಾಣೆಗೆ ಬಂದು ಅಪಘಾತದ ಬಗ್ಗೆ ವಿವರಿಸಿ ಹೇಳಿ ಅಪಘಾತ ಸಮಯದಲ್ಲಿ ನನ್ನ ಮಾಲೀಕತ್ವದ ಕಾರ್ ನಂಬರ್ ಕೆಎ-09-ಎಂಜಿ-5335ರ ವಾಹನವನ್ನು ನಾನೇ ಚಾಲನೆ ಮಾಡಿರುವುದಾಗಿ ಈ ನನ್ನ ಸ್ವ ಇಚ್ಛಾ ಹೇಳಿಕೆಯನ್ನು ನೀಡಿರುತ್ತೇನೆ. ಈ ನನ್ನ ಹೇಳಿಕೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ರವರು ಹೆಚ್.ಸಿ.9570 ಸುರೇಶ್‌ ಕುಮಾ‌ ಹೆಚ್.ಕೆಎಂಬುವರ ಕೈಯಲ್ಲಿ ಕಂಪ್ಯೂಟರ್ ನಲ್ಲಿ ಟೈಪ್ ಮಾಡಿಸಿ ಟೈಪ್ ಮಾಡಿದ್ದನ್ನು ನನಗೆ ಓದಿ ಹೇಳಿ ಪ್ರಿಂಟ್ ತೆಗೆದುಕೊಂಡಿರುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.