ಬೆಂಗಳೂರು: ನಟಿ ಪವಿತ್ರ ಲೋಕೇಶ್ ಮತ್ತು ತೆಲಗು ನಟ ನರೇಶ್ ಹೋಟೆಲ್‍ನಲ್ಲಿ ಒಂದೇ ಕೊಠಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಬಗ್ಗೆ ನರೇಶ್ ಪತ್ನಿ ಕಿಡಿಕಾರಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಒಂದೇ ಕೋಠಡಿಯಲ್ಲಿ ಪವಿತ್ರ ಮತ್ತು ನರೇಶ್ ವಾಸ್ತವ್ಯ ಹೂಡಿದ್ದರು. ಈ ವಿಷಯವನ್ನು ತಿಳಿದುಕೊಂಡ ನರೇಶ್ ಪತ್ನಿ ರಮ್ಯಾ ಅವರು ಹೋಟೆಲ್‍ನ ಕೊಠಡಿಗೆ ಆಗಮಿಸಿದ್ದಾರೆ. ಈ ವೇಳೆ ಇಬ್ಬರ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ.


ಇದನ್ನೂ ಓದಿ: ಪವಿತ್ರ ಲೋಕೇಶ್ ಧರಿಸಿರೋ ಡೈಮಂಡ್ ನೆಕ್ಲೆಸ್ ಸುತ್ತ ಅನುಮಾನದ ಹುತ್ತ..!


ಮಾಧ‍್ಯಮ ಪ್ರತಿನಿಧಿಗಳನ್ನು ಕಂಡ ಪವಿತ್ರಾ ಅವರು ಹೋಟೆಲ್‍ನ ಲಿಫ್ಟ್‍ನಿಂದ ಹೊರಬಂದು ಸೈಲೆಂಟ್ ಆಗಿ ಹೊರಹೊಗಿದ್ದಾರೆ. ಆದರೆ ಈ ವೇಳೆ ನಟಿಯ ಜೊತೆಗಿದ್ದ ನರೇಶ್ ಅವರು ಶಿಳ್ಳೆ ಹೊಡೆಯುತ್ತಾ ಹೊರ ಬಂದಿದ್ದಾರೆ. ಬಳಿಕ ರಮ್ಯಾ ಅವರು ಪ್ರಶ್ನಿಸಿದ್ದಕ್ಕೆ ಹಾರಿಕೆ ಉತ್ತರ ನೀಡಿ ಒಂದೇ ಕಾರಿನಲ್ಲಿ ಹೊರ ನಡೆದಿದ್ದಾರೆ. ನರೇಶ್ ಮತ್ತು ಪವಿತ್ರ ಒಟ್ಟಿಗೆ ಹೋಗಿರುವುದು ಮಾಧ‍್ಯಮಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.


ಕಳೆದ ಕೆಲವು ದಿನಗಳಿಂದ ನಟಿ ಪವಿತ್ರ ಲೋಕೇಶ್ ಅವರದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಮಾಧ್ಯಮಗಳಿಂದ ಹಿಡಿದು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರ ಲೋಕೇಶ್ ಮತ್ತು ನರೇಶ್ ಬಗ್ಗೆಯೇ ಗುಸುಗುಸುಗಳು ಕೇಳಿಬರುತ್ತಿದ್ದವು. ಈಗಾಗಲೇ 3 ಮದುವೆಯಾಗಿರೋ ನಟಿ ಪವಿತ್ರ ಅವರು ನರೇಶ್ ಜೊತೆಗೆ 4ನೇ ಮದುವೆಯಾಗಿದ್ದಾರಂತೆ, ಅವರ ಜೊತೆಯೇ ಇದ್ದಾರಂತೆ ಅನ್ನೋ ಸುದ್ದಿಗಳು ಹರಿದಾಡಿದ್ದವು. ಈ ಬೆನ್ನಲ್ಲಿಯೇ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನರೇಶ್ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಪವಿತ್ರಾ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.  


ಇದನ್ನೂ ಓದಿ: Kranti Movie : ಡಿ ಬಾಸ್ 'ಕ್ರಾಂತಿ' ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಚಿತಾ ರಾಮ್!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ