Kranti Movie : ಡಿ ಬಾಸ್ 'ಕ್ರಾಂತಿ' ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಚಿತಾ ರಾಮ್!

ನಿಮ್ಗೆ ಗೊತ್ತಿರೋ ಹಾಗೇ ಕ್ರಾಂತಿ ಸಿನಿಮಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ  ಇದೀಗ ಸಿಕ್ಕಿರೋ ಲೇಟೆಸ್ಟ್ ಮಾಹಿತಿ ಪ್ರಕಾರ ಕ್ರಾಂತಿ ಸಿನಿಮಾ ಚಿತ್ರೀಕರಣಕ್ಕೆ ರಚಿತಾ ರಾಮ್ ವಿದೇಶಕ್ಕೆ ಹಾರಿದ್ದಾರೆ.

Written by - YASHODHA POOJARI | Last Updated : Jul 2, 2022, 02:27 PM IST
Kranti Movie : ಡಿ ಬಾಸ್ 'ಕ್ರಾಂತಿ' ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ರಚಿತಾ ರಾಮ್! title=

ಡಿ ಬಾಸ್ ದರ್ಶನ್ ನಟನೆಯ ಬಹು ನಿರೀಕ್ಷಿತ "ಕ್ರಾಂತಿ"  ಸಿನಿಮಾ ಶೂಟಿಂಗ್ ಅಬ್ಬರದಿಂದ ಶುರುವಾಗಿದೆ. ಡಿ ಬಾಸ್ ಸಿನಿಮಾವನ್ನ ತೆರೆ ಮೇಲೆ ನೋಡೋಕೆ ಅಭಿಮಾನಿಗಳು ಬಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಯಾವಾಗಪ್ಪ ಚಾಲೆಂಜಿಂಗ್ ಸ್ಟಾರ್ ದರ್ಶನ್ ನ ತೆರೆಮೇಲೆ ನೋಡೋದು ಅಂತ ವೇಟ್ ಮಾಡ್ತಾ ಇದ್ದಾರೆ. ಕ್ರಾಂತಿ ಸಿನಿಮಾವನ್ನ ನೋಡಲೇಬೇಕು ಅನ್ನೋದು ಸಹಸ್ರಾರು ದರ್ಶನ್ ಅಭಿಮಾನಿಗಳ ಆಸೆ. ಕ್ರಾಂತಿ ಸಿನಿಮಾ ಬಗ್ಗೆ ಏನ್ ಅಪ್ಡೇಟ್ ಮಾಹಿತಿ ಸಿಗುತ್ತೆ ಅಂತ ಕ್ಷಣ ಕ್ಷಣಕ್ಕೂ ಸರ್ಚ್ ಮಾಡ್ತಾ ಇದ್ದಾರೆ ಫ್ಯಾನ್ಸ್.
 
ಕ್ರಾಂತಿ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಚಿತ್ರೀಕರಣ ಮಾಡೋ ಮೂಲಕ ನಿರೀಕ್ಷೆಯನ್ನ ದುಪ್ಪಟ್ಟು ಮಾಡುತ್ತಿದೆ. ಕ್ರಾಂತಿ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ಯಾವ  ರೀತಿ ಕಮಲ್ ಮಾಡುತ್ತಾರೋ ಅನ್ನೋ ದೊಡ್ಡ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿದೆ.

ಇದನ್ನೂ ಓದಿ ಪುಟ್ಟ ಅಭಿಮಾನಿಯ ಹುಟ್ಟುಹಬಕ್ಕೆ ಶುಭಾಶಯ ತಿಳಿಸಿದ ‘ರಕ್ಕಮ್ಮ’ ಖ್ಯಾತಿಯ ಜಾಕ್ವಲಿನ್!

ನಿಮ್ಗೆ ಗೊತ್ತಿರೋ ಹಾಗೇ ಕ್ರಾಂತಿ ಸಿನಿಮಾಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿ  ಇದೀಗ ಸಿಕ್ಕಿರೋ ಲೇಟೆಸ್ಟ್ ಮಾಹಿತಿ ಪ್ರಕಾರ ಕ್ರಾಂತಿ ಸಿನಿಮಾ ಚಿತ್ರೀಕರಣಕ್ಕೆ ರಚಿತಾ ರಾಮ್ ವಿದೇಶಕ್ಕೆ ಹಾರಿದ್ದಾರೆ.

ಯಸ್ ಕ್ರಾಂತಿ ಸಿನಿಮಾ ಶೂಟಿಂಗ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಚಿತಾ ರಾಮ್, ಶೈಲಜಾ ನಾಗ್  ಪೋಲ್ಯಾಂಡ್ ಗೆ ಹಾರಿದ್ದಾರೆ, ರಚಿತಾ ರಾಮ್ ತಮ್ಮ ಫೇಸ್ ಬುಕ್ ಪೇಜ್ನಲ್ಲಿ ಎರಡು ವಿಡಿಯೋ ಹಂಚಿಕೊಂಡಿರೋ ರಚಿತಾ better late then never ಅಂತ ಎರಡು ಪೋಸ್ಟ್ಗಳನ್ನ ಶೇರ್ ಮಾಡಿದ್ದಾರೆ.

 

ರಚಿತಾ ರಾಮ್ ಶೇರ್ ಮಾಡಿರೋ ಪೋಸ್ಟ್ ಗಳನ್ನ ಫ್ಯಾನ್ಸ್ ಇದೀಗ ಸಿಕ್ಕಾಪಟ್ಟೆ ಶೇರ್ ಮಾಡೋದ್ರಲ ಮೂಲಕ ಒಂದಷ್ಟು ಪ್ರಶ್ನೆಗಳನ್ನ ಕೇಳುತ್ತಿದ್ದಾರೆ.

ಅಭಿಮಾನಿಗಳಲ್ಲಿ ಕಾಡುತ್ತಿರೋ ಪ್ರಶ್ನೆ ಏನಪ್ಪ ಅಂದ್ರೆ ಕ್ರಾಂತಿ ಸಿನಿಮಾ ರಿಲೀಸ್ ಯಾವಾಗ,..? ಯಾವಾಗ ನಾವು ಸಿನಿಮಾನ ದಸರಾದಂತೆ ಸೆಲೆಬ್ರೇಶನ್ ಮಾಡೋದು ಅಂತ ಕೇಳುತ್ತಿದ್ದಾರೆ.
 ಅದೇನೇ ಇರಲಿ ಕ್ರಾಂತಿ ಸಿನಿಮಾ ರಿಲೀಸ್ ಗೂ ಮುನ್ನ ಭರ್ಜರಿ ಮತ್ತು ಭಯಂಕರ ಹವಾ ಕ್ರಿಯೇಟ್ ಮಾಡ್ತಾ ಇದೆ.

ಸಿನಿಮಾ ತಂಡಕ್ಕೆ ಕ್ರಾಂತಿ ಯ ಬಗ್ಗೆ ಒಂದಷ್ಟು ಲೇಟೆಸ್ಟ್ ಮಾಹಿತಿನ್ನ ಕೊಡಿ ಅಂತ ಫ್ಯಾನ್ಸ್ ಕೂಡ ರಿಕ್ವೆಸ್ಟ್ ಮಾಡ್ತಾ ಇದ್ದಾರೆ. ರಚಿತಾ ರಾಮ್ ಪೋಸ್ಟ್ ನೋಡಿದ ಬಳಿಕ ಕ್ರಾಂತಿ ಯಾವ ರೀತಿ ಮಹಾಕ್ರಾಂತಿ ಮಾಡುತ್ತೋ ಅನ್ನೋ ನಿರೀಕ್ಷೆ ಮಾತ್ರ ಹೆಚ್ಚಾಗಿ ಹೋಗಿದೆ.

ಇದನ್ನೂ ಓದಿ : ಪವಿತ್ರ ಲೋಕೇಶ್ ಧರಿಸಿರೋ ಡೈಮಂಡ್ ನೆಕ್ಲೆಸ್ ಸುತ್ತ ಅನುಮಾನದ ಹುತ್ತ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News