ಬೆಂಗಳೂರು: ಬಹುಭಾಷಾ ನಟಿ ಪ್ರಣಿತಾ ಸುಭಾಷ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಬಂಪ್ ಫೋಟೊಗಳನ್ನು ಹಂಚಿಕೊಂಡಿದ್ದ ನಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ತಾಯ್ತನದ ಸಂಭ್ರಮ ಎದುರು ನೋಡುತ್ತಿದ್ದ ನಟಿ ಇದೀಗ ಹಣ್ಣು ಮಗುವಿಗೆ ಜನ್ಮ ನೀಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.   


COMMERCIAL BREAK
SCROLL TO CONTINUE READING

ತಮ್ಮ ಮಗುವಿನೊಂದಿಗೆ ಖುಷಿಯಲ್ಲಿರುವ ಫೋಟೋವನ್ನು ಪ್ರಣಿತಾ ಹಂಚಿಕೊಂಡಿದ್ದಾರೆ. ‘ನಮ್ಮ ಹೆಣ್ಣು ಮಗು ಹುಟ್ಟಿದಾಗಿನಿಂದಲೂ ಕಳೆದ ಕೆಲವು ದಿನಗಳು ಅತಿವಾಸ್ತವಿಕವಾಗಿವೆ... ಸ್ತ್ರೀರೋಗತಜ್ಞ ತಾಯಿ(ಡಾ.ಜಯಶ್ರೀ)ಯನ್ನು ಹೊಂದಿರುವ ನಾನು ನಿಜವಾಗಿಯೂ ಅದೃಷ್ಟಶಾಲಿ. ಆದರೆ, ಈ ಗಳಿಗೆ ಅವರಿಗೆ ಭಾವನಾತ್ಮಕವಾಗಿ ಅತ್ಯಂತ ಕಷ್ಟಕರ ಸಮಯವಾಗಿತ್ತು. ಅದೃಷ್ಟವಶಾತ್ ಆಸ್ಟರ್ ಆರ್‌ವಿ(Aster RV Hospital) ಆಸ್ಪತ್ರೆಯಲ್ಲಿ ಡಾ.ಸುನೀಲ್ ಈಶ್ವರ್ ಮತ್ತು ಅವರ ತಂಡ ನಮ್ಮನ್ನು ಚೆನ್ನಾಗಿ ನೋಡಿಕೊಂಡಿತು. ಅವರ ಸಹಾಯದಿಂದ ನನ್ನ ಡೆಲಿವರಿ ಸುಗಮವಾಯಿತು’ ಎಂದು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್‌ಗೆ ಬ್ಯಾಟ್‌ ಗಿಫ್ಟ್‌ ಕೊಟ್ಟ ಕ್ರಿಕೆಟರ್‌ ಬಟ್ಲರ್..!‌


ನಟಿ ಪ್ರಣಿತಾ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕೊರೊನಾ ಸಮಯದಲ್ಲಿ ಪ್ರಣಿತಾ ತಮ್ಮ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಹುದಿನಗಳಿಂದ ಪ್ರೀತಿಸುತ್ತಿದ್ದ ಉದ್ಯಮಿ ನಿತಿನ್​ ರಾಜು ಅವರ ಜೊತೆಗೆ ನಟಿ ಸಪ್ತಪದಿ ತುಳಿದಿದ್ದರು.


ಸಲ್ಮಾನ್ ಖಾನ್‌ಗೆ ಬೆದರಿಕೆ ಪ್ರಕರಣ: ದೆಹಲಿ ತಲುಪಿದ ಮಹಾರಾಷ್ಟ್ರ ಪೊಲೀಸರು, ಬಿಷ್ಣೋಯ್ ವಿಚಾರಣೆ  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.