ಸ್ತನ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಮಹಿಮಾ ಚೌಧರಿ, ಧೈರ್ಯದ ಪ್ರತೀಕ ಎಂದ ಅನುಪಮ್ ಖೇರ್..!

ಬಾಲಿವುಡ್ ನಟಿ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಗತಿಯನ್ನು ಹಿರಿಯ ನಟ ಅನುಪಮ್ ಖೇರ್ ಅವರು ಬಹಿರಂಗಪಡಿಸಿದ್ದಾರೆ, ಅಷ್ಟೇ ಅಲ್ಲದೆ ಅವರು ಈಗ ಈ ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಮತ್ತೆ ನಟನೆಗೆ ಮರಳಲು ಸಿದ್ದರಾಗಿದ್ದಾರೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

Written by - Zee Kannada News Desk | Last Updated : Jun 9, 2022, 07:40 PM IST
  • ಬಾಲಿವುಡ್ ನಟಿ ಮಹಿಮಾ ಚೌಧರಿ ದಾಗ್: ದಿ ಫೈರ್, ಪ್ಯಾರ್ ಕೋಯಿ ಖೇಲ್ ನಹೀನ್, ದೀವಾನೆ, ಕುರುಕ್ಷೇತ್ರ, ಧಡ್ಕನ್, ಲಜ್ಜಾ, ಬಾಗ್‌ಬಾನ್, ಜಮೀರ್: ದಿ ಫೈರ್ ವಿಥಿನ್, ಓಂ ಜೈ ಜಗದೀಶ್ ಮತ್ತು ದಿಲ್ ಹೈ ತುಮ್ಹಾರಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
  • ಅವರು ಕೊನೆಯದಾಗಿ 2016 ರ ಚಲನಚಿತ್ರ ಡಾರ್ಕ್ ಚಾಕೊಲೇಟ್‌ನಲ್ಲಿ ನಟಿಸಿದ್ದರು.
ಸ್ತನ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಮಹಿಮಾ ಚೌಧರಿ, ಧೈರ್ಯದ ಪ್ರತೀಕ ಎಂದ ಅನುಪಮ್ ಖೇರ್..!   title=

ನವದೆಹಲಿ: ಬಾಲಿವುಡ್ ನಟಿ ಮಹಿಮಾ ಚೌಧರಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಗತಿಯನ್ನು ಹಿರಿಯ ನಟ ಅನುಪಮ್ ಖೇರ್ ಅವರು ಬಹಿರಂಗಪಡಿಸಿದ್ದಾರೆ, ಅಷ್ಟೇ ಅಲ್ಲದೆ ಅವರು ಈಗ ಈ ಕ್ಯಾನ್ಸರ್ ನಿಂದ ಚೇತರಿಸಿಕೊಂಡು ಮತ್ತೆ ನಟನೆಗೆ ಮರಳಲು ಸಿದ್ದರಾಗಿದ್ದಾರೆ ಎಂದು ಅವರು ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Hijab Row : ಹಿಜಾಬ್ ಧರಿಸಿ ಅಮಾನತಾಗಿದ್ದ 6 ವಿದ್ಯಾರ್ಥಿನಿಯರು ಇಂದು ಮರಳಿ ಕಾಲೇಜಿಗೆ!

ಗುರುವಾರದಂದು ನಟಿ ಮಹಿಮಾ ಚೌಧರಿ ಅವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿರುವ ಹಿರಿಯ ನಟ ಅನುಮಪ್ ಖೇರ್ "ಮಹಿಮಾ ಚೌಧರಿಯ ಧೈರ್ಯ ಮತ್ತು ಕ್ಯಾನ್ಸರ್ ನ ಕಥೆ. ನನ್ನ 525 ನೇ ಚಿತ್ರ ದಿ ಸಿಗ್ನೇಚರ್‌ನಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸಲು ನಾನು ಮಹಿಮಾ ಚೌಧರಿ ಅವರಿಗೆ ಒಂದು ತಿಂಗಳ ಹಿಂದೆ ಕರೆ ಮಾಡಿದ್ದೆ, ಈ ಸಂದರ್ಭದಲ್ಲಿ ಅವರಿಗೆ ಸ್ತನ ಕ್ಯಾನ್ಸರ್ ಇದೆ ಎನ್ನುವ ಸಂಗತಿಯನ್ನು ಕಂಡುಕೊಂಡೆನು.ಈ ಸಂದರ್ಭದಲ್ಲಿ ಅವರ ವರ್ತನೆಯೂ ನಿಜಕ್ಕೂ ಜಗತ್ತಿನಾದ್ಯಂತ ಇರುವ ಮಹಿಳೆಯರಿಗೆ ಹೊಸ ಭರವಸೆಯನ್ನು ನೀಡುತ್ತದೆ.ಅವರು ಇದನ್ನು ಬಹಿರಂಗಪಡಿಸಲು ನನ್ನನ್ನು ಕೇಳಿಕೊಳ್ಳುತ್ತಾ ನನ್ನನ್ನು ಶಾಶ್ವತ ಆಶಾವಾದಿ ಎಂದು ಕರೆದರು, ಆದರೆ ಅವರು ನನಗೆ ಪ್ರೀತಿಯ ಮಹಿಮಾ"ಎನ್ನುವ ಹೃದ್ಯಪೂರಕ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Anupam Kher (@anupampkher)

ಇನ್ನೂ ಮುಂದುವರೆದು ಅವರ "ನೀವು ನನ್ನ ನಾಯಕಿ! ಸ್ನೇಹಿತರೇ, ಅವರಿಗೆ ನಿಮ್ಮ ಪ್ರೀತಿ, ಪ್ರೀತಿ,ಹಾರೈಕೆಗಳು, ಪ್ರಾರ್ಥನೆಗಳು ಮತ್ತು ಆಶೀರ್ವಾದಗಳನ್ನು ಕಳುಹಿಸಿ.ಅವರು ಮತ್ತೆ ಎಂದಿನಂತೆ ಸಿನಿಮಾಗೆ ಮರಳಲು ಸಿದ್ದವಾಗಿದ್ದಾರೆ. ಈಗ ಮತ್ತೆ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಅವರ ನಟನಾ ಅವಕಾಶವನ್ನು ಬಳಸಿಕೊಳ್ಳುವ ಅವಕಾಶ ನಿಮಗಿದೆ, ಅವರಿಗೆ ಜೈ ಹೋ" ಎಂದು ಅನುಪಮ್ ಖೇರ್ ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ಪ್ರಭುತ್ವ ನಡೆಸುತ್ತಿರುವ ನಿರಂತರ ದಾಳಿಯಿಂದ ದೇಶದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ'-ಸಿದ್ಧರಾಮಯ್ಯ

ಬಾಲಿವುಡ್ ನಟಿ ಮಹಿಮಾ ಚೌಧರಿ ದಾಗ್: ದಿ ಫೈರ್, ಪ್ಯಾರ್ ಕೋಯಿ ಖೇಲ್ ನಹೀನ್, ದೀವಾನೆ, ಕುರುಕ್ಷೇತ್ರ, ಧಡ್ಕನ್, ಲಜ್ಜಾ, ಬಾಗ್‌ಬಾನ್, ಜಮೀರ್: ದಿ ಫೈರ್ ವಿಥಿನ್, ಓಂ ಜೈ ಜಗದೀಶ್ ಮತ್ತು ದಿಲ್ ಹೈ ತುಮ್ಹಾರಾ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2016 ರ ಚಲನಚಿತ್ರ ಡಾರ್ಕ್ ಚಾಕೊಲೇಟ್‌ನಲ್ಲಿ ನಟಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 

Trending News