ಬೆಂಗಳೂರು : ಕರುನಾಡ ಬೆಡಗಿ ಶ್ರೀಲೀಲಾ (Shree Leela) ಸದ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‌ಗಳ ಜೊತೆಯಲ್ಲಿ ನಟಿಸೋದಕ್ಕೆ ಶ್ರೀಲೀಲಾ ಸಿದ್ಧರಾಗಿದ್ದಾರೆ. ಇದೀಗ ಟಾಲಿವುಡ್‌ (Tollywood) ಅಂಗಳದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಶ್ರೀಲೀಲಾ ಟಾಲಿವುಡ್‌ನ ಯಂಗ್ ರೆಬೆಲ್‌ ಸ್ಟಾರ್‌ ಜೊತೆಗೂ ಮಿಂಚಲು ಹೊರಟಿದ್ದಾರಂತೆ.


COMMERCIAL BREAK
SCROLL TO CONTINUE READING

ಶ್ರೀಲೀಲಾ ಅಭಿನಯದ ಮೊದಲ ತೆಲುಗು ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದೇ ತಡ ತೆಲುಗು ಸಿನಿರಂಗದಲ್ಲೂ (Telugu film) ಹವಾ ಎಬ್ಬಿಸಿದ್ದರು. ಶ್ರೀಲೀಲಾಗೆ (Shree Leela) ದೊಡ್ಡ ದೊಡ್ಡ ಆಫರ್‌ಗಳೇ ಹುಡುಕಿಕೊಂಡು ಬರುತ್ತಿವೆ. ಈಗಾಗಲೇ ರವಿತೇಜ ಜೊತೆಗೆ ಶ್ರೀಲೀಲಾ ಅಭಿನಯಿಸೋದು ಪಕ್ಕಾ ಆಗಿದೆ. ಇದರ ಜೊತೆಗೆ ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ.


ಇದನ್ನೂ ಓದಿ : ‘ಡಿ’ ಬಾಸ್ ಅಭಿಮಾನಿಗಳಿಗೆ ಡಬಲ್ ಧಮಾಖ..! ಏನೇನ್ ಸರ್ಪ್ರೈಸ್ ಗೊತ್ತಾ..?


 ಪ್ರಭಾಸ್‌ ಜೊತೆ ಶ್ರೀಲೀಲಾ..!
ನಟ ಪ್ರಭಾಸ್‌ (Prabhas) ಅಭಿನಯದ ಹೈ ಬಜೆಟ್‌ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದೆ. ಈ ಮೂಲಕ ಟಾಲಿವುಡ್‌ ರೆಬೆಲ್‌ ಸ್ಟಾರ್‌ ಪ್ರಭಾಸ್‌ ಜೊತೆಗೂ ಶ್ರೀಲೀಲಾ ಮಿಂಚೋದು ಪಕ್ಕಾ ಎಂಬಂತಾಗಿದೆ.


ಅಂದಹಾಗೆ ಮೊನ್ನೆ ಮೊನ್ನೆಯಷ್ಟೇ ನಟಿ ಶ್ರೀಲೀಲಾ ಬಗ್ಗೆ ಟಾಲಿವುಡ್‌ನಲ್ಲಿ (Tollywood) ಒಂದು ಸುದ್ದಿ ಹರಿದಾಡಿತ್ತು. ಅದೆನಂದ್ರೆ ಮಹೇಶ್‌ ಬಾಬು ಅಭಿನಯದ 27ನೇ ಚಿತ್ರದಿಂದ ಶ್ರೀಲೀಲಾ ಹೊರಬಂದಿದ್ದಾರೆ ಅಂತಾ. ಅಷ್ಟಕ್ಕೂ 2ನೇ ನಾಯಕಿಯ ಪಟ್ಟದಲ್ಲಿ ಶ್ರೀಲೀಲಾ ಕೂರಬೇಕಿತ್ತು. ಆದರೆ ಸಂಭಾವನೆಯ ವಿಚಾರಕ್ಕೆ ಶ್ರೀಲೀಲಾ ಆಫರ್‌ನ ಡ್ರಾಪ್‌ ಮಾಡಿದ್ದಾರೆ ಎನ್ನಲಾಗಿತ್ತು. ಇದೀಗ ಶ್ರೀಲೀಲಾರ ಸಾಲು ಸಾಲು ಸಿನಿಮಾಗಳೇ ಅನೌನ್ಸ್‌ ಆಗ್ತಿರೋದು ಶ್ರೀಲೀಲಾ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.


ಇದನ್ನೂ ಓದಿ : Hiranya: ಕನ್ನಡದಲ್ಲಿ 'ಹಿರಣ್ಯ'ನ ಅಬ್ಬರಕ್ಕೆ ಕೌಂಟ್‌ಡೌನ್‌ ಶುರು..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.