Video: ನಿಶ್ಚಿತಾರ್ಥ ಮಾಡಿಕೊಂಡ `ಕನ್ನಡ ಕೋಗಿಲೆ`ಯ ಅಖಿಲಾ ಪಜಿಮಣ್ಣು!
ನಿಶ್ಚಿತಾರ್ಥದ ವಿಡಿಯೋವನ್ನು ಅಖಿಲಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಇದು ಅರೇಂಜ್ ಮ್ಯಾರೇಜ್ ಅಂತೆ. ಧನಂಜಯ್ ಶರ್ಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯ 'ಕನ್ನಡ ಕೋಗಿಲೆ' ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದ ಗಾಯಕಿ ಅಖಿಲಾ ಪಜಿಮಣ್ಣು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಧನಂಜಯ್ ಶರ್ಮಾ ಅವರ ಜೊತೆ ಅಖಿಲಾ ಉಂಗುರ ಬದಲಾಯಿಸಿಕೊಂಡಿದ್ದು ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ.
ನಿಶ್ಚಿತಾರ್ಥದ ವಿಡಿಯೋವನ್ನು ಅಖಿಲಾ(Akhila pajimannu) ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ನಿಶ್ಚಿತಾರ್ಥದ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. ಇದು ಅರೇಂಜ್ ಮ್ಯಾರೇಜ್ ಅಂತೆ. ಧನಂಜಯ್ ಶರ್ಮಾ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ಜೋಡಿಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಅಖಿಲಾ ಹಾಗೂ ಧನಂಜಯ್ ಧನ್ಯವಾದ ಕೂಡ ತಿಳಿಸಿದ್ದಾರೆ.
Drugs Case: Sushant Singh Rajput ಆಪ್ತ ಸ್ನೇಹಿತನನ್ನು ಬಂಧಿಸಿದ NCB
'ಕನ್ನಡ ಕೋಗಿಲೆ' ಸೀಸನ್ 1 ಹಾಗೂ 2ರ ರನ್ನರ್‌ಅಪ್ ಆಗಿರುವ ಅಖಿಲಾ ಪಜಿಮಣ್ಣು ಅವರು ಹಳೆಯ ಹಾಡುಗಳನ್ನು ಮತ್ತೆ ಹಾಡಿ ಕವರ್ ಸಾಂಗ್ ಆಗಿ ಮಾಡುತ್ತಿದ್ದಾರೆ. ಇವರ ಹಾಡುಗಳನ್ನು ಇಷ್ಟಪಡುವ ದೊಡ್ಡ ಬಳಗವೇ ಇದೆ. ಅಖಿಲಾರ 'ಈ ಸುಂದರ ಬೆಳದಿಂಗಳ... ಈ ತಂಪಿನ ಅಂಗಳದಲಿ...' ಹಾಡಿನ ಕವರ್ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಹಿಟ್ ಆಗಿತ್ತು. 'ಸಂಗಾತಿ' ಹಾಡಿನ ಕವರ್ ಸಾಂಗ್ ಕೂಡ ಮಾಡಿದ್ದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಮುಂಜಾನೆ ರಾಗ' ಶೋನಲ್ಲಿ ಅಖಿಲಾ ನಿರೂಪಕಿಯಾಗಿದ್ದಾರೆ.
KGF 2: ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದೇ ತಡ ಪ್ರಧಾನಿಗೆ ಪತ್ರ ಬರೆದ Rocking Star ಫ್ಯಾನ್ಸ್..
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.