KGF 2: ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದೇ ತಡ ಪ್ರಧಾನಿಗೆ ಪತ್ರ ಬರೆದ Rocking Star ಫ್ಯಾನ್ಸ್..

ರಾಕಿಭಾಯ್ ಅಭಿಮಾನಿಗಳು ಬಹು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಕೆಜಿಎಫ್ 2 (KGF 2) ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಜುಲೈ 16ರಂದು ವಿಶ್ವಾದ್ಯಂತ ಕೆಜಿಎಫ್ 2 ತೆರೆ ಕಾಣಲಿದೆ. 

Written by - Ranjitha R K | Last Updated : Feb 2, 2021, 12:01 PM IST
  • ಕೆಜಿಎಫ್ 2 ಬಿಡುಗಡೆಗಾಗಿ ಅಭಿಮಾನಿಗಳ ಕಾತರ
  • ರಾಕಿ ಭಾಯ್ ಅಭಿಮಾನಿಗಳಿಂದ ಪ್ರಧಾನಿಗೆ ಪತ್ರ
  • ಕೆಜಿಎಫ್ 2 ರಿಲೀಸ್ ದಿನದಂದು ರಾಷ್ಟ್ರೀಯ ರಜೆ ನೀಡಲು ಮನವಿ
KGF 2: ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದ್ದೇ ತಡ ಪ್ರಧಾನಿಗೆ ಪತ್ರ ಬರೆದ Rocking Star ಫ್ಯಾನ್ಸ್.. title=
ರಾಕಿ ಭಾಯ್ ಅಭಿಮಾನಿಗಳಿಂದ ಪ್ರಧಾನಿಗೆ ಪತ್ರ (Photo twitter)

ಬೆಂಗಳೂರು : ರಾಕಿಭಾಯ್ ಅಭಿಮಾನಿಗಳು ಬಹು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ಕೆಜಿಎಫ್ 2 (KGF 2) ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಜುಲೈ 16ರಂದು ವಿಶ್ವಾದ್ಯಂತ ಕೆಜಿಎಫ್ 2 ತೆರೆ ಕಾಣಲಿದೆ. ಚಿತ್ರ ಬಿಡುಗಡೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಇದೀಗ ಯಶ್ (Yash) ಅಭಿಮಾನಿಗಳು ಮತ್ತೊಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಚಿತ್ರ ಬಿಡುಗಡೆಯ ಮೊದಲ ದಿನವೇ ಸಿನೆಮಾ ವೀಕ್ಷಿಸುವ ಉದ್ದೇಶದಿಂದ ಕೆಜಿಎಫ್ 2 ಸಿನೆಮಾ ರಿಲೀಸ್ ದಿನದಂದು ರಾಷ್ಟ್ರೀಯ ರಜೆ (National Holiday) ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. 

ಪ್ರಧಾನ ಮಂತ್ರಿಗೆ ಪತ್ರ ಬರೆದ ಯಶ್ ಅಭಿಮಾನಿಗಳು :
ಕೆಜಿಎಫ್ 2 (KGF2) ಚಿತ್ರ ತಂಡ ಟ್ವಿಟರ್ ನಲ್ಲಿ ಸಿನೆಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಇದಾದ ನಂತರ ಯಶ್ (Yash) ಅಭಿಮಾನಿಗಳು ಪ್ರಧಾನ ಮಥ್ರಿ ನರೆಮದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದ್ದಾರೆ. ಚಿತ್ರ ಬಿಡುಗಡೆಯ ದಿನದಂದು ರಾಷ್ಟ್ರೀಯ ರಜೆ ಎಂದು ಘೋಷಿಸುವಂತೆ ಪತ್ರದಲ್ಲಿ ಮನವಿ ಮಾಡಲಾಗಿದೆ. 

ಇದನ್ನೂ ಓದಿ : Rocking Star Yash ಅಭಿಮಾನಿಗಳಿಗೆ ಗುಡ್ ನ್ಯೂಸ್, ಜುಲೈ 16ರಂದು ತೆರೆಗೆ ಬರಲಿದೆ KGF 2

ಪ್ರಧಾನಿಗೆ ಬರೆದ ಪತ್ರದಲ್ಲೇನಿದೆ?
ಕೆಜಿಎಫ್ ಅಭಿಮಾನಿಗಳು ಪ್ರಧಾನ ಮತ್ರಿಗೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ (Social media) ವೈರಲ್ ಆಗುತ್ತಿದೆ. ಈ ಪತ್ರದ ಸಾರಾಂಶ ಹೀಗಿದೆ.. ನಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ 2 ಸಿನೆಮಾ ಜುಲೈ 16ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.  ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  ನಮ್ಮ ಬಾವನೆಯನ್ನು ಅರ್ಥಮಾಡಿಕೊಂಡು ಚಿತ್ರ ಬಿಡುಗಡೆಯ ದಿನದಂದು ರಾಷ್ಟ್ರೀಯ ರಜೆ (National Holiday) ನೀಡಬೇಕೆಂದು ಮನವಿ. ಇದು ಬರೀಯ ಸಿನೆಮಾವಲ್ಲ, (Cinema) ಇದು ನಮ್ಮ ಭಾವನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಕೆಜಿಎಫ್ 2 ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲದಲ್ಲಿ ತೆರೆ ಕಾಣಲಿದೆ. ಚಿತ್ರದಲ್ಲಿ ಅನಂತ್ ನಾಗ್, ನಾಗಾಭರಣ, ಸಂಜಯ್ ದತ್(Sanjay Dutt) , ರವೀನಾ ಟಂಡನ್, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮೊದಲಾದವರು ಮುಖ್ಯ ಪಾತ್ರದಲ್ಲಿದ್ದಾರೆ. 

ಇದನ್ನೂ ಓದಿ : ಜಗತ್ತಿನ ಅತೀ ಎತ್ತರದ ಕಟ್ಟಡ 'ಬುರ್ಜ್ ಖಲೀಫಾ' ಮೇಲೆ ಕನ್ನಡದ ಕೀರ್ತಿ ಪತಾಕೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News