ಬೆಂಗಳೂರು : ಒಂದಷ್ಟು ನಿರೀಕ್ಷೆಗಳ ಒಡ್ಡೋಲಗದ ನಡುವೆ ಬಿಡುಗಡೆಗೆ ಸಜ್ಜಾಗಿರುವ ಹೋಪ್ ಸಿನಿಮಾ ಜುಲೈ 8ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಈಗಾಗ್ಲೇ ಪೋಸ್ಟರ್, ಟೀಸರ್ ಮೂಲಕ ಸದ್ದು ಮಾಡ್ತಿರುವ ಹೋಪ್ ಟ್ರೇಲರ್ ನ್ನು ಸಚಿವ ಅಶ್ವತ್ಥ್ ನಾರಾಯಣ್ ಇಂದು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.


COMMERCIAL BREAK
SCROLL TO CONTINUE READING

ಸಚಿವರಾದ ಅಶ್ವತ್ಥ್ ನಾರಾಯಣ್ ಮಾತಾನಾಡಿ, ಬಹಳ ಒಳ್ಳೆ ವಿಶೇಷ ಆಯ್ಕೆ ಮಾಡಿಕೊಂಡಿದ್ದೀರಾ.ವರ್ಗಾವಣೆ ಸರ್ಕಾರದ ಮುಖ್ಯ ಬಾಧೆ.ನಾವು ಅದ್ರಲ್ಲೇ ಮುಳುಗಿರುವವರು. ನಾವು ಅದನ್ನು ತುಂಬು ಅರ್ಥ ಮಾಡಿಕೊಂಡಿದ್ದೇನೆ.ವರ್ಗಾವಣೆ ಅನ್ನೋದು ಪಿಡುಗು.ಅದೊಂದು ಚಾಲೆಂಜ್.ಹೀಗಾಗಿ ಇದರ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿರುವುದು ಶ್ಲಾಘನೀಯ.ಇದು ಸಮಾಜದ ಮೇಲೆ ಹೇಗೆ ಪರಿಣಾಮ ಬೀರುತ್ತದೆ. ಜಾಗೃತಿ ಮೂಡಿಸುವ ಕೆಲಸವೆಲ್ಲಾ ಆಗ್ಬೇಕು ಅನ್ನೋವ ಪ್ರಯತ್ನವನ್ನು ಸಿನಿಮಾ ಮೂಲಕ ಮಾಡಿದ್ದಾರೆ. ಇಡೀ ತಂಡಕ್ಕೆ ಒಳ್ಳೆಯದು ಆಗಲಿ ಎಂದರು.


ಇದನ್ನೂ ಓದಿ: ಕರ್ನಾಟಕ ಶಿಕ್ಷಣ ಇಲಾಖೆಗೆ ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ


Shocking News: ಹಳ್ಳದಲ್ಲಿ ತೇಲಿಬಂದ ಭ್ರೂಣಗಳು! ಬೆಚ್ಚಿಬಿದ್ದ ಬೆಳಗಾವಿ ಜನರು


ಶ್ವೇತಾ ಶ್ರೀವಾಸ್ತವ್ ಮಾತಾನಾಡಿ, ಏಳು ವರ್ಷದ ನಂತ್ರ ಎಲ್ಲರೂ ಭೇಟಿಯಾಗ್ತಿರೋದು ಖುಷಿ ಕೊಟ್ಟಿದೆ. ವೈಯಕ್ತಿಕವಾಗಿ ಈ ಕಥೆ ಕನೆಕ್ಟ್ ಆಯ್ತು. ಸಮಾಜವನ್ನು ಕಣ್ತೆರೆಸುವ ಕಥೆ ಇದು. ತುಂಬಾ ಸೂಕ್ಷ್ಮ ಸಬೆಕ್ಟ್ ಇದು. ಸಿನಿಮಾದಲ್ಲಿ ಒಳ್ಳೆ ಕಲಾವಿದರು ಇದ್ದಾರೆ. ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ ಪ್ರತಿಯೊಬ್ಬರು ಸಪೋರ್ಟ್ ಮಾಡಿ ಎಂದರು.


ಕರ್ನಾಟಕ ಶಿಕ್ಷಣ ಇಲಾಖೆಗೆ ‘ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ


ಖ್ಯಾತ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್, ಹೋಪ್ ಸಿನಿಮಾಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ಜಲ್ವಂತ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು,  ಎಸ್.ಹಲ್ಲೇಶ್ ಕ್ಯಾಮರಾ ವರ್ಕ್ ಮಾಡಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿರುವ ಹೋಪ್ ಇದೇ ಜುಲೈ 8ರಂದು ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.