Shocking News: ಹಳ್ಳದಲ್ಲಿ ತೇಲಿಬಂದ ಭ್ರೂಣಗಳು! ಬೆಚ್ಚಿಬಿದ್ದ ಬೆಳಗಾವಿ ಜನರು

ಒಟ್ಟು 5 ಡಬ್ಬಿಗಳಲ್ಲಿ 7 ಭ್ರೂಣಗಳನ್ನು ಹಾಕಿ ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳಕ್ಕೆ ಎಸೆಯಲಾಗಿದೆ.

Written by - Zee Kannada News Desk | Last Updated : Jun 25, 2022, 09:20 AM IST
  • 7 ಭ್ರೂಣಗಳ ಮೃತದೇಹಗಳನ್ನು ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನಕೃತ್ಯ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ
  • 5 ಡಬ್ಬಿಗಳಲ್ಲಿ 7 ಭ್ರೂಣಗಳನ್ನು ಹಾಕಿ ಮೂಡಲಗಿ ಬಸ್ ನಿಲ್ದಾಣದ ಬಳಿಯಿರುವ ಹಳ್ಳಕ್ಕೆ ಎಸೆಯಲಾಗಿದೆ
  • ಪತ್ತೆಯಾಗಿರುವ ಭ್ರೂಣಗಳನ್ನು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ
Shocking News: ಹಳ್ಳದಲ್ಲಿ ತೇಲಿಬಂದ ಭ್ರೂಣಗಳು! ಬೆಚ್ಚಿಬಿದ್ದ ಬೆಳಗಾವಿ ಜನರು  title=
ಬೆಳಗಾವಿ ಜಿಲ್ಲೆಯಲ್ಲಿ ಹೀನಕೃತ್ಯ!

ಬೆಳಗಾವಿ: 7 ಭ್ರೂಣಗಳ ಮೃತದೇಹಗಳನ್ನು ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನಕೃತ್ಯ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದಿದೆ. ಭ್ರೂಣಗಳನ್ನು ಕಂಡು ಕುಂದಾನಗರಿ ಬೆಳಗಾವಿ ಜನರು ಬೆಚ್ಚಿಬಿದ್ದಿದ್ದಾರೆ. ಬಾಟಲಿಯಲ್ಲಿ ಹಾಕಿ ಹಳ್ಳಕ್ಕೆ ಬಿಡಲಾಗಿದ್ದು, ಶವ ನೋಡಿದ ಜನರು ಹೌಹಾರಿ ಹೋಗಿದ್ದಾರೆ.

ಭ್ರೂಣಗಳ ಮೃತದೇಹಗಳನ್ನು ಕೀಚಕರು ಹಳ್ಳಕ್ಕೆ ಹಾಕಿ ಕೈತೊಳೆದುಕೊಂಡಿದ್ದು, ಗಡಿ ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದೆಯಾ? ಅನ್ನೋ ಪ್ರಶ್ನೆ ಮೂಡಿದೆ. ಹೆಣ್ಣು ಭ್ರೂಣವೆಂಬ ಕಾರಣಕ್ಕೆ ಪಾಪಿ ಕೃತ್ಯ ಎಸಗಿದ್ದಾರಾ..? ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆ ನಿಷೇಧವಿದ್ದರೂ ಕಾನೂನಿನ ಭಯವೇ ಇಲ್ಲದಂತಾಗಿದೆ. 5 ತಿಂಗಳು ತುಂಬಿರುವ 7 ಭ್ರೂಣಗಳ ಹತ್ಯೆ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಸಾಕು ನಾಯಿ ಚಿಂಕಿಗೆ ಸೀಮಂತ ಮಾಡಿದ ರಂಗಭೂಮಿ ಕಲಾವಿದೆ...ಇಲ್ಲೊಂದು ಚಾರ್ಲಿ ಕಥನ..!

ಒಟ್ಟು 5 ಡಬ್ಬಿಗಳಲ್ಲಿ ಭ್ರೂಣಗಳನ್ನು ಹಾಕಿ ಮೂಡಲಗಿ ಬಸ್ ನಿಲ್ದಾಣದ ಬಳಿ ಇರುವ ಹಳ್ಳಕ್ಕೆ ಎಸೆಯಲಾಗಿದೆ. ಮೃತದೇಹಗಳನ್ನು ಯಾರು ಎಸೆದಿದ್ದಾರೆ ಅನ್ನೋದು ಇನ್ನೂ ನಿಗೂಢವಾಗಿದೆ. ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದು ಸ್ಕ್ಯಾನಿಂಗ್ ಸೆಂಟರ್ ಇರುವ ಖಾಸಗಿ ಆಸ್ಪತ್ರೆಯವರ ಕೃತ್ಯವೆಂದು ಶಂಕಿಸಲಾಗಿದೆ. ಹೀಗಾಗಿ ಗೋಕಾಕ್, ಮೂಡಲಗಿ ತಾಲೂಕಿನ ಆಸ್ಪತ್ರೆಗಳ ಮೇಲೆ ರೇಡ್ ನಡೆಸಲಾಗಿದೆ. 6 ಆಸ್ಪತ್ರೆಗಳ ಮೇಲೆ DHO ಡಾ.ಮಹೇಶ್ ಕೋಣಿ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲಿಸಲಾಗಿದೆ.

ಇಂದು ಅಂದರೆ ಶನಿವಾರ ಆರೋಗ್ಯ ಅಧಿಕಾರಿಗಳು ಅನುಮಾನ್ಪದ ಆಸ್ಪತ್ರೆಗಳನ್ನು ಸೀಜ್ ಮಾಡಲಿದ್ದಾರೆ. ಪತ್ತೆಯಾಗಿರುವ 7 ಭ್ರೂಣಗಳನ್ನು ಬೆಳಗಾವಿಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರಯೋಗಾಲಯದ  ವರದಿ ಬಂದ ಬಳಿಕವೇ ಭ್ರೂಣಗಳ ಹತ್ಯೆ ತನಿಖೆ ಚುರುಕಾಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ತನಗೆ ಸಂಬಂಧವೇ ಇಲ್ಲದಂತೆ ಕಣ್ಣಮುಚ್ಚಿ ಕುಳಿತಿದೆ.

ಇದನ್ನೂ ಓದಿ: Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ

‘ಇದನ್ನು ಯಾರು ಮಾಡಿದ್ದಾರೆ, ಭ್ರೂಣಗಳು ಎಲ್ಲಿಂದ ಬಂದಿದ್ದು ಅನ್ನೋ ಬಗ್ಗೆ ತನಿಖೆ ಮಾಡಲಾಗುವುದು. ಭ್ರೂಣಗಳ ಹತ್ಯೆ ಕುರಿತು ತನಿಖೆಗೆ ತಂಡ ರಚಿಸಲಾಗುವುದು. ಈ ಕುರಿತು ಡಿಸಿ ಗಮನಕ್ಕೆ ತಂದು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News