Sandalwood Update: ಈ ವಾರ ಬಿಡುಗಡೆಗೊಳ್ಳಲಿರುವ ಸಿನಿಮಾಗಳ ನಡುವೆ ಭಾರೀ ಕುತೂಹಲ ಮೂಡಿಸಿರುವ ಚಿತ್ರ ʼಮರ್ಯಾದೆ ಪ್ರಶ್ನೆ..ಇದೇ 22ನೇ ತಾರೀಖು ಚಿತ್ರ ತೆರೆಗಾಣುತ್ತಿದೆ. ಒಂದು ಯಶಸ್ವೀ ಚಿತ್ರ ಯಾವ್ಯಾವ ಸ್ವರೂಪದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತದೋ, ಆ ಎಲ್ಲ ರೀತಿಗಳಿಂದಲೂ ಸದ್ದು ಮಾಡುತ್ತಿರುವ 'ಮರ್ಯಾದೆ ಪ್ರಶ್ನೆ'ಯಲ್ಲಿ ಸುನೀಲ್ ರಾವ್, ಶೈನ್ ಶೆಟ್ಟಿ , ರಾಕೇಶ್ ಅಡಿಗ, ಪೂರ್ಣಚಂದ್ರ ಮೈಸೂರು ಸೇರಿದಂತೆ ಹೆಸರಾಂತ ಕಲಾವಿದರ ದಂಡು ಹಾಗೂ ಪ್ರತಿಭಾವಂತ ತಂತ್ರಜ್ಞರ ತಂಡ ಚಿತ್ರಕ್ಕಾಗಿ ದುಡಿದಿದೆ. ಅದ್ರಲ್ಲಿಯೂ ನಾಗರಾಜ್ ಸೋಮಯಾಜಿ ಕಲಾ ಕಸುವು ನಿರೀಕ್ಷೆ ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ತರಕಾರಿ ಕಚ್ಚಿ ತಿಂದರೆ ಸಾಕು ತಕ್ಷಣ ಡೌನ್‌ ಆಗುತ್ತೆ ಶುಗರ್‌ ಲೆವಲ್‌; ದಿನಕ್ಕೊಮ್ಮೆ ತಿಂದರೆ ಬರೋದೇ ಇಲ್ಲ ಮಧುಮೇಹ!


ನಿರ್ದೇಶಕ ನಾಗರಾಜ್ ಸೋಮಯಾಜಿ ಪಕ್ಕ ಮನರಂಜನಾತ್ಮಕ ಗುಣಗಳೊಂದಿಗೆ ಈ ಚಿತ್ರವನ್ನು ಅಣಿಗೊಳಿಸಿದ್ದಾರೆ. ಅಂದಹಾಗೇ ಇದು ನಾಗರಾಜ್ ಅವರ ಪಾಲಿಗೆ ಮೊದಲ ಹೆಜ್ಜೆ. ಈ ಮೊದಲ ಹೆಜ್ಜೆಯಲ್ಲಿಯೇ ವಿಶೇಷ ಚಿತ್ರವೊಂದನ್ನು ಪ್ರೇಕ್ಷಕರ ಮುಂದೆ ಹಾಜರುಪಡಿಸಲು ಹೊರಟಿದ್ದಾರೆ. ಆರ್ ಜೆ ಪ್ರದೀಪ್ ಹೆಣೆದ ಕಥೆಯನ್ನು ಅವರು ಅಚ್ಚುಕಟ್ಟಾಗಿ ದೃಶ್ಯರೂಪಕ್ಕೆ ಇಳಿಸಿದ ಖುಷಿ ಅವರಲ್ಲಿದೆ. ನವೆಂಬರ್-22 ರಂದು ಚಿತ್ರ ರಿಲೀಸ್ ಆಗುತ್ತಿದೆ. ಈ ಮೂಲಕ ಕನ್ನಡಿಗರಿಗೆ ಮರ್ಯಾದೆ ಪ್ರಶ್ನೆ ಚಿತ್ರ ಬದುಕಿನ ಹೊಸದೊಂದು ಅಧ್ಯಾಯವನ್ನ ಕಟ್ಟಿಕೊಡಲಿದೆ. ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳಿವೆ. ಆದರೆ, ಈ ಎಲ್ಲ ಪಾತ್ರಗಳ ನೈಜವಾಗಿಯೇ ಅಭಿನಯಿಸಿರೋದು ಕೂಡ ಕಾಣಿಸುತ್ತದೆ.


ಇದನ್ನೂ ಓದಿ: ದಟ್ಟ, ಉದ್ದ, ಗಾಢ ಕಪ್ಪು ಕೂದಲಿಗಾಗಿ ತುಂಬಾ ಲಾಭದಾಯಕ ಈ ಸಣ್ಣ ಬೀಜಗಳು, ಹೀಗೆ ಬಳಸಿದರೆ ಉತ್ತಮ ರಿಸಲ್ಟ್ ಗ್ಯಾರಂಟಿ!


ದಿ ಬೆಸ್ಟ್ ಆಕ್ಟರ್ ಹಾಗೂ ಮೈಕೋ ಕಿರುಚಿತ್ರ ಮಾಡಿ ಸೈ ಎನಿಸಿಕೊಂಡಿರುವ ನಾಗರಾಜ್ ಸೋಮಯಾಜಿ ಫೋಕೋಸ್ ಫೋಟೋಗ್ರಫಿ ಮೂಲಕ ಹೆಚ್ಚು ಖ್ಯಾತಿ ಪಡೆದವರು. ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫು ಸಿನಿಮಾ ನಿರ್ಮಾಣ ಮಾಡಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಅವರೀಗ ಮಧ್ಯಮ ವರ್ಗದವರ ಮರ್ಯಾದೆ ಪ್ರಶ್ನೆ ಕಥಾನಕವನ್ನು ಹರವಿಡಲು ಹೊರಟ್ಟಿದ್ದಾರೆ. ಅವರ ಮೊದಲ ಪ್ರಯತ್ನಕ್ಕೆ ಸಕ್ಕತ್ ಸ್ಟುಡಿಯೋ ಸಾಥ್ ಕೊಟ್ಟಿದೆ. ಕಥೆ ಒದಗಿಸಿ ಚಿತ್ರತಂಡದ ಜೊತೆ ಸಾಗಿರುವ ಆರ್ ಜೆ ಪ್ರದೀಪ್ ಕ್ರಿಯೇಟಿವ್ ಹೆಡ್ ಆಗಿಯೂ ಬೆಂಬಲ ನೀಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.