Chandan Shetty 2nd Marriage: ಕನ್ನಡದಲ್ಲಿ ಹಲವು ಸೂಪರ್ ಹಿಟ್ ಸಾಂಗ್‌ಗಳನ್ನು ನೀಡಿರುವ ನಟ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರ ಹೊಸ ಸಾಂಗ್ ಬಿಡುಗಡೆಯಾಗಿದೆ. ರಿಲೀಸ್ ಆದ ಒಂದೇ ದಿನಕ್ಕೆ ʼಕಾಟನ್ ಕ್ಯಾಂಡಿʼ ಹಾಡು ಸಖತ್ ಹಿಟ್ ಆಗಿದೆ. ಹೊಸ ವರ್ಷ ಹತ್ತಿರವಿರುವಾಗಲೇ ಈ ಹಾಡು ಬಿಡುಗಡೆಯಾಗಿದ್ದು, ಇದು ಪಾರ್ಟಿ ಸಾಂಗ್‌ ಅಂತಾ ಸೋಷಿಯಲ್‌ ಮೀಡಿಯಾ ಬಳಕೆದಾರರು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈಗಾಗಲೇ ಈ ಸಾಂಗ್‌ ಯೂಟ್ಯೂಬ್‌ನಲ್ಲಿ 1.6 ಮಿಲಿಯನ್‌ ವೀಕ್ಷಣೆಗಳನ್ನು ಕಂಡಿದೆ. 


COMMERCIAL BREAK
SCROLL TO CONTINUE READING

ಹಾಡು ಬಿಡುಗಡೆ ಮಾಡುವುದಾಗಿ ಚಂದನ್‌ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ಟಾರ್‌ ನಿವೇದಿತಾ ಗೌಡ ಜೊತೆಗೆ ವಿಚ್ಛೇದನ ಪಡೆದ ಬಳಿಕ ಚಂದನ್‌ ಶೆಟ್ಟಿ ಆಕ್ಟಿವ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಹೆಸರು ಮಾಡುವ ನಿಟ್ಟಿನಲ್ಲಿ ತಮ್ಮ ಚಿತ್ತ ನಟ್ಟಿದ್ದಾರೆ. ʼಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಅಂತಿದೆʼ ಅನ್ನೋ ಸಾಂಗ್‌ ಮೂಲಕ ಇಡೀ ಲಕ್ಷಾಂತರ ಜನರನ್ನು ಹುಚ್ಚೆಬ್ಬಿಸಿ ಕುಣಿಸಿದ ಚಂದನ್‌ ಶೆಟ್ಟಿ ಬಗ್ಗೆ ಇದೀಗ ಗಾಳಿಸುದ್ದಿಯೊಂದು ಹರಿದಾಡುತ್ತಿದೆ. ಶೀಘ್ರವೇ ಅವರು 2ನೇ ಮದುವೆ ಆಗುತ್ತಾರೆ ಅನ್ನೋ ವದಂತಿ ಹಬ್ಬಿದೆ. ಇದೀಗ ರಿಲೀಸ್‌ ಆಗಿರುವ ʼಕಾಟನ್‌ ಕ್ಯಾಂಡಿʼ ಹಾಡಿನಲ್ಲಿ ಚಂದನ್‌ ಶೆಟ್ಟಿ ತಮಗೆ ಬ್ರೇಕಪ್‌ ಆಗಿರೋ ಬಗ್ಗೆ ತಿಳಿಸಿದ್ದಾರೆ. ಇದು ಚಂದನ್‌ ಶೆಟ್ಟಿ ತಮ್ಮ 2ನೇ ಮದುವೆ ಬಗ್ಗೆ ನೀಡಿರೋ ಸುಳಿವು ಇರಬಹುದು ಅಂತಾ ನೆಟಿಜನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ. 


ಇದನ್ನೂ ಓದಿ: ವಿಶೇಷ ವ್ಯಕ್ತಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಲ್ಮಾನ್‌ ಖಾನ್‌! ಪಾರ್ಟಿಯಲ್ಲಿ ಹೊರಬಿತ್ತು ಬಹುಕಾಲದ ಶಾಕಿಂಗ್‌ ಸತ್ಯ?!


ಅಂದಹಾಗೆ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪ್ರೀತಿಸಿ ಮದುವೆಯಾದವರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕಾಲಾನಂತರದಲ್ಲಿ ಇಬ್ಬರ ಜೀವನದಲ್ಲಿ ಬಿರುಗಾಳಿ ಎದ್ದ ಕಾರಣ ಈ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದೆ. ರೂಲ್ಸ್‌ನ ಪ್ರಕಾರವೇ ಈ ಜೋಡಿ ಸಪರೇಟ್‌ ಆಗಿದ್ದು, ಒಬ್ಬರಿಗೊಬ್ಬರು ಗೌರವ ನೀಡುತ್ತಾ ಇಬ್ಬರೂ ದೂರವಾಗಿದ್ದಾರೆ. ಇದೀಗ ಚಂದನ್‌ ಶೆಟ್ಟಿಗೆ ಅವರ ಮನೆಯಿಂದಲೇ 2ನೇ ಮದುವೆಯಾಗುವಂತೆ ಒತ್ತಾಯಗಳು ಕೇಳಿ ಬರ್ತಾ ಇದೆಯಂತೆ. ಚಿಕ್ಕ ವಯಸ್ಸಿಗೆ ವಿಚ್ಛೇದನವಾಗಿರೋ ಕಾರಣ ನೀನು ಮತ್ತೊಂದು ಮದುವೆಯಾಗಬೇಕು ಅಂತಾ ಮನೆಯವರು ಸಲಹೆ ನೀಡಿದ್ದಾರಂತೆ. ಹೀಗಾಗಿ ಚಂದನ್‌ ಶೆಟ್ಟಿ 2ನೇ ಮದುವೆಯಾಗಲು ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ. 


ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಖ್ಯಾತ ನಿರೂಪಕಿ! ನೆಚ್ಚಿನ ಆಂಕರ್‌ ಸ್ಥಿತಿ ಕಂಡು ಫ್ಯಾನ್ಸ್‌ ಶಾಕ್...‌


ಈ ಗಾಳಿಸುದ್ದಿಗಳ ಬಗ್ಗೆ ನಟ-ನಟಿ ಇಬ್ಬರ ಕಡೆಯಿಂದಲೂ ಯಾವುದೇ ರೀತಿ ಪ್ರತಿಕ್ರಿಯೆ ಬಂದಿಲ್ಲ. ಆದರೆ ಶೀಘ್ರವೇ ಚಂದನ್‌ ಶೆಟ್ಟಿ 2ನೇ ಮದುವೆಯಾಗುತ್ತಾರೆ ಅಂತಾ ಮಾತ್ರ ಹೇಳಲಾಗುತ್ತಿದೆ. ಅವರು ಯಾರ ಜೊತೆಗೆ ಮದುವೆಯಾಗುತ್ತಾರೆ ಅನ್ನೋದು ಸೀಕ್ರೆಟ್‌ ಆಗಿದೆ. ಕೆಲವರು ಚಂದನ್‌ ಅವರು ಸಂಜನಾ ಅವರನ್ನೇ ಮದುವೆಯಾಗುತ್ತಾರೆ ಅಂತಾ ಹೇಳಿದ್ರೆ, ಇನ್ನೂ ಕೆಲವರು ಚಂದನ್‌ ಅವರು ಪೋಷಕರು ತೋರಿಸಿದ ಹುಡುಗಿಯನ್ನ ಮದುವೆಯಾಗುತ್ತಾರೆ ಅಂತಾ ಹೇಳುತ್ತಿದ್ದಾರೆ. ಹೊಸ ವರ್ಷಕ್ಕೆ ತಮ್ಮ ೨ನೇ ಮದುವೆ ಬಗ್ಗೆ ಚಂದನ್ ಅಧಿಕೃತವಾಗಿ ಮಾಹಿತಿ ನೀಡುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುತ್ತಾರಾ ಕಾದು ನೋಡಬೇಕಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.