ಕುಟುಂಬದ ಆರನೇ ಸದಸ್ಯನಂತಿದ್ದ ಮುದ್ದಿನ ಶ್ವಾನ ʼನೀಮೋʼ ನಿಧನ- "ನನ್ನ ಜೀವನದ ಭಾಗ ದೇವರ ಬಳಿ ಹೋದ" ಎನ್ನುತ್ತಾ ಕಣ್ಣೀರಿಟ್ಟ ಗೀತಾ ಶಿವರಾಜ್‌ಕುಮಾರ್‌

 Geetha Shivarajkumar: ಶಿವರಾಜ್‌ ಕುಮಾರ್‌ ಕುಟುಂಬಕ್ಕೆ ತಡೆಯಲಾರದ ದುಃಖ ಬಾಧಿಸಿದೆ. ಈ ಬಗ್ಗೆ ಗೀತಾ ಶಿವರಾಜ್‌ ಕುಮಾರ್‌ ಅವರು ಪೋಸ್ಟ್‌ ಒಂದನ್ನು ಬರೆದಿದ್ದು, ತಮ್ಮ ಕುಟುಂಬದ ಪ್ರೀತಿಯ ಸದಸ್ಯ, ಮುದ್ದಿನ ಶ್ವಾನ ನಿಧನದ ಬಗ್ಗೆ ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ.

Written by - Bhavishya Shetty | Last Updated : Dec 28, 2024, 02:24 PM IST
    • ಅಮೆರಿಕಾಗೆ ತೆರಳಿದ್ದ ನಟ ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಸಕ್ಸಸ್‌ ಆಗಿದೆ
    • ಶಿವರಾಜ್‌ ಕುಮಾರ್‌ ಅವರ ಕುಟುಂಬ ತುಂಬಾ ಮುದ್ದಾಗಿ ಬೆಳೆಸಿದ್ದ ʼನೀಮೋʼ ಎಂಬ ಶ್ವಾನ ಅಸುನೀಗಿದೆ
    • "ನನ್ನ ಜೀವನದ ಭಾಗವಾಗಿದ್ದ ನೀಮೋ ದೇವರ ಹತ್ತಿರ ಹೋದ" ಎಂದು ಭಾವನಾತ್ಮಕ ಪೋಸ್ಟ್‌
ಕುಟುಂಬದ ಆರನೇ ಸದಸ್ಯನಂತಿದ್ದ ಮುದ್ದಿನ ಶ್ವಾನ ʼನೀಮೋʼ ನಿಧನ- "ನನ್ನ ಜೀವನದ ಭಾಗ ದೇವರ ಬಳಿ ಹೋದ" ಎನ್ನುತ್ತಾ ಕಣ್ಣೀರಿಟ್ಟ ಗೀತಾ ಶಿವರಾಜ್‌ಕುಮಾರ್‌ title=
Geetha Shivarajkumar Post

Geetha Shivarajkumar: ಇತ್ತೀಚೆಗೆ ಚಿಕಿತ್ಸೆಗೆಂದು ಅಮೆರಿಕಾಗೆ ತೆರಳಿದ್ದ ನಟ ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಸಕ್ಸಸ್‌ ಆಗಿದೆ. ಈ ಬಗ್ಗೆ ಪತ್ನಿ ಗೀತಾ ಅವರು, ಮಾಹಿತಿ ಕೂಡ ಹಂಚಿಕೊಂಡಿದ್ದರು. ಇನ್ನು ಸದ್ಯದಲ್ಲೇ ಬೆಂಗಳೂರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ.

ಆದರೆ ಈ ಬೆನ್ನಲ್ಲೇ ಶಿವರಾಜ್‌ ಕುಮಾರ್‌ ಕುಟುಂಬಕ್ಕೆ ತಡೆಯಲಾರದ ದುಃಖ ಬಾಧಿಸಿದೆ. ಈ ಬಗ್ಗೆ ಗೀತಾ ಶಿವರಾಜ್‌ ಕುಮಾರ್‌ ಅವರು ಪೋಸ್ಟ್‌ ಒಂದನ್ನು ಬರೆದಿದ್ದು, ತಮ್ಮ ಕುಟುಂಬದ ಪ್ರೀತಿಯ ಸದಸ್ಯ, ಮುದ್ದಿನ ಶ್ವಾನ ನಿಧನದ ಬಗ್ಗೆ ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಮೊಸರಿಗೆ ಈ ಪುಡಿ ಸೇರಿಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಮತ್ತೆಂದೂ ಬೆಳ್ಳಗಾಗಲ್ಲ..   

ಶಿವರಾಜ್‌ ಕುಮಾರ್‌ ಅವರ ಕುಟುಂಬ ತುಂಬಾ ಮುದ್ದಾಗಿ ಬೆಳೆಸಿದ್ದ ʼನೀಮೋʼ ಎಂಬ ಶ್ವಾನ ಅಸುನೀಗಿದೆ. ಈ ಬಗ್ಗೆ ಬರೆದುಕೊಂಡಿರುವ ಗೀತಾ ಅವರು, "ನನ್ನ ಜೀವನದ ಭಾಗವಾಗಿದ್ದ ನೀಮೋ ದೇವರ ಹತ್ತಿರ ಹೋದ" ಎಂದು ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ.

"ನಮ್ಮ ಮನೆಯಲ್ಲಿ ನಾವು ಐದಲ್ಲಾ, ಆರು ಜನ. ಶಿವಣ್ಣ, ಗೀತಾ, ನಿಶು, ನಿವಿ, ದಿಲೀಪ್ ಮತ್ತು ನನ್ನ ಮರಿ ನೀಮೋ. ನಿಶು ಹುಟ್ಟುಹಬ್ಬಕ್ಕೆ ದಿಲೀಪ್ ಅವರು ಮದುವೆಗೆ ಮುಂಚೆ ನೀಮೋನನ್ನು ಗಿಫ್ಟಾಗಿ ತಂದರು. ನಿಶು ಡಾಕ್ಟರ್ ಆಗಿದ್ದರಿಂದ ಅವಳಿಗೆ ನೀಮೋನನ್ನು ನೋಡಿಕೊಳ್ಳಲು ಸಮಯ ಆಗೋದಿಲ್ಲ ಎಂದು ನಮ್ಮ ಮನೆಗೆ ತಂದ್ವಿ. ಹೀಗೆ ಅವನು ನಮ್ಮ ಮನೆಯಲ್ಲಿ ಆರನೆಯವನಾದ"

"ಎಲ್ಲರೂ ಅವರ ಪೆಟ್ ಹಿಂದೆ ಓಡಾಡ್ತಾ ಇರ್ತಾರೆ. ಆದ್ರೆ ನೀಮೋ ಯಾವಾಗೂ ನನ್ನ ಹಿಂದೆ. ನಾನು ಕಿಚನ್‌ನಲ್ಲಿ ಇರುವಾಗ ಅಥವಾ ಮನೆಯಲ್ಲಿ ಎಲ್ಲೇ ಹೋದ್ರೂ ಅವನು ಯಾವಾಗಲೂ ನನ್ನ ಹಿಂದೆ. ನನ್ನ ಕೆಲ್ಸ ಮುಗಿಯುವುದು ಎಷ್ಟೇ ಹೊತ್ತಾದರೂ ಅವನು ಮಾತ್ರ ನನ್ನ ಹಿಂದೆ. ಶಿವಣ್ಣ ಅವರ ಕಾಲ ಬಳಿ ಅಂಟಿಕೊಂಡು, ಆಂಗಲ್ ಅಡ್ಡಸ್ಟ್ ಮಾಡಿಕೊಂಡು, ನನ್ನ ಮುಖ ಕಾಣೋ ಹಾಗೆ ಕೂರ್ತಿದ್ದ ನೀಮೋ"

"ನೀಮೋ ನನ್ನ ಜೀವನದ ಭಾಗ. ನೀಮೋ, ಗೀತಾ ಇಬ್ಬರಲ್ಲ, ನಾವಿಬ್ಬರೂ ಒಂದೇ. ಅವನು ಬೆಳೆಯುವಾಗ ಅವನು ಎಷ್ಟೇ ದೊಡ್ಡವನಾದ್ರು ಮಗುವಿನಂತೆ ಆರೈಕೆ ಮಾಡಿ, ಅವನ ಊಟ, ತಿಂಡಿ, ಅವನಿಗೆ ಜ್ವರ ಬಂದರೆ ತಕ್ಷಣ ಟೀಟ್‌ಮೆಂಟ್, ಅದಾದ ಮೇಲೆ ಅವನಿಗೆ ಕರೆಕ್ಟ್ ಟೈಮಿಗೆ ಮೆಡಿಸಿನ್, ಹೀಗೆ ತುಂಬಾ ಕಾಳಜಿಯಿಂದ ನೋಡಿಕೊಂಡಿದ್ದು ನಿವಿ. ಈಗ ಈ ಮರಿ ನಮ್ಮನ್ನೆಲ್ಲಾ ಬಿಟ್ಟು ದೇವರ ಹತ್ತಿರ ಹೋದ. ನನ್ನ ಮರಿ ನಾನು ಅಮೇರಿಕಾಗೆ ಬಂದ ಮೇಲೆ ನನ್ನನ್ನು ಬಿಟ್ಟು ಹೋದ. ಅವನ ನಿಸ್ವಾರ್ಥ ಪ್ರೀತಿ ಯಾರಿಂದಲೂ ತುಂಬಲು ಸಾಧ್ಯವಾಗೋಲ್ಲ. ನಾವು ಅಮೇರಿಕಾಗೆ ಬಂದ ಮೇಲೆನೇ ಅವನು ಹೊರಡಬೇಕು ಎಂದು ಅವನು ಡಿಸೈಡ್ ಮಾಡಿದ್ದ ಅನ್ಸುತ್ತೆ" ಎನ್ನುತ್ತಾ ಒಂದು ಪುಟದ ಭಾವನಾತ್ಮಕ ನೋಟ್‌ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಸತತ ಏರಿಕೆಯತ್ತ ಸಾಗಿದ್ದ ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ! ಇಂದೆಷ್ಟಿದೆ 10 ಗ್ರಾಂ ಚಿನ್ನದ ದರ?!  

"ನೀಮೋ ಸದಾ ನಮ್ಮೊಳಗಿದ್ದಾನೆ, ನನ್ನೊಳಗಿದ್ದಾನೆ. ಯಾವಾಗೂ ಇರ್ತಾನೆ. ಅವನು ಹೋಗಿದ್ದನ್ನು ನಾನು ಕಣ್ಣಲ್ಲಿ ನೋಡಿಲ್ಲ. ನೋಡಿದ್ದರೂ ಅವನು ಹೋಗಿದ್ದಾನೆ ಎಂದು ನಾನು ಎಂದೂ ಒಪ್ಪಿಕೊಳ್ಳಲ್ಲ. ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗೋವಾಗ ನಮ್ಮ ನೋವನ್ನೂ ಅವರ ಜೊತೆಯಲ್ಲಿ ತಗೆದುಕೊಂಡು ಹೋಗ್ತಾರಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತಗೊಂಡಿದ್ದಾನೆ. ಲವ್ ಯು ನೀಮೋ.." ಎಂದು ತಮ್ಮ ಮುದ್ದಿನ ಶ್ವಾನಕ್ಕೆ ಗೀತಾ ಶಿವರಾಜಕುಮಾರ್ ಕಣ್ಣೀರಿನ ವಿದಾಯ ಹೇಳಿದ್ದಾರೆ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News