ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ-ನಟಿಯರ ಮದುವೆ ಸಂಭ್ರಮ ಜೋರಾಗಿದೆ. ರೀಲ್‌ ಲೈಫ್‌ ಅಂದ್ರೆನೇ ಹಾಗೆ. ಸೀರಿಯಲ್‌ಗಳಲ್ಲಿ ಕಥೆಗೆ ತಕ್ಕಂತೆ ಮದುವೆ ಮದುವೆಗಳು ನಡೆಯುತ್ತವೆ. ಆದರೆ ರಿಯಲ್‌ ಲೈಫ್‌ನಲ್ಲಿ ಕೂಡ ಈ ಜೋಡಿಗಳು ಹೊಸ ಜೀವನಕ್ಕೆ ಕಾಲಿಡುತ್ತಿವೆ. 


COMMERCIAL BREAK
SCROLL TO CONTINUE READING

ಮೊನ್ನೆ ಮೊನ್ನೆಯಷ್ಟೆ ಲಕ್ಷ್ಮಿ ಬಾರಮ್ಮ ಖ್ಯಾತಿಯ ನಟಿ ರಶ್ಮಿ ಪ್ರಭಾಕರ್‌ ಅವರು ನಿಖಿಲ್‌ ಭಾರ್ಗವ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ತಮ್ಮ ಈ ನ್ಯೂ ಜರ್ನಿಯನ್ನ ಈ ಮುದ್ದಾದ ಜೋಡಿ ಸಖತ್‌ ಎಂಜಾಯ್‌ ಮಾಡ್ತಿದೆ. 


ಇದನ್ನೂ ಓದಿ : Drugs Case : ಮುಂಬೈ ಡ್ರಗ್ಸ್ ಪ್ರಕರಣ, ಶಾರುಖ್ ಖಾನ್ ಪುತ್ರನಿಗೆ ಕ್ಲೀನ್ ಚಿಟ್!


ಇನ್ನು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟಿ  ಐಶ್ವರ್ಯ ತಾವು ಪ್ರೀತಿಸಿದ ಹುಡುಗ, ನಟ ವಿನಯ್ ಗುರು ಜೊತೆ ಹಿರಿಯರ ಸಮ್ಮುಖದಲ್ಲಿ  ಮೇ 19ರಂದು  ಸಪ್ತಪದಿ ತುಳಿದಿದ್ದಾರೆ. ಅದರಲ್ಲೂ ಈ ಜೋಡಿ ಮಾಡಿಸಿದ ಫೋಟೋಶೂಟ್‌ ಸಖತ್‌ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು.


ವಿನಯ್‌ ಹಾಗೂ ಐಶ್ವರ್ಯ  ಸೂಪರ್‌ ಆಗಿ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿದ್ದು, ಜೋಡಿ ಸಖತ್‌ ಆಗಿ ಕಾಣಿಸಿದ್ದಾರೆ. ಅತ್ತ ಹಾಟ್‌ ಲುಕ್‌ಗೂ ಸೈ, ಟ್ರೇಡಿಷನಲ್‌ ವೇರ್‌ನಲ್ಲೂ ಸೂಪರ್‌ ಆಗಿ ಕಾಣುವ ಐಶ್ವರ್ಯ ಅಂತೂ ತಮ್ಮ ಹುಡುಗನ ಜೊತೆ ಮುದ್ದಾಗಿ ಕಾಣಿಸಿದ್ದಾರೆ. ಸದ್ಯ ಈ ಫೋಟೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿವೆ.


ಇದೀಗ ಕಿರುತೆರೆಯ ಮತ್ತೊಂದು ಮುದ್ದಾದ ಜೋಡಿ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದೆ. ಆ ಜೋಡಿ ನಟ ಶಶಿ ಹಾಗೂ ಲಾವಣ್ಯ. ಈ ಜೋಡಿ ಕಲರ್ಸ್‌ ಸೂಪರ್‌ನಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಗಳಾಗಿ ಮಿಂಚಿದ್ರು. ಅಲ್ಲಿ ಅವರಿಬ್ಬರೂ ಪರಿಚಯವಾಗಿ, ಆ ಸ್ನೇಹ ಪ್ರೀತಿಗೆ ತಿರುಗಿ ಸದ್ಯ ಗುರು-ಹಿರಿಯರ ಸಮ್ಮುಖದಲ್ಲಿ ತಮ್ಮ ಸಂಪ್ರದಾಯದಂತೆ ದುವೆಯಾಗಿದ್ದಾರೆ. ವಿಶೇಷ ಅಂದ್ರೆ ರಾಜ ರಾಣಿ ಧಾರಾವಾಹಿ ಈ ಇಬ್ಬರಿಗೂ ಕೂಡ ಒಳ್ಳೆಯ ನೇಮ್‌ ಹಾಗೂ ಫೇಮ್‌ ತಂದು ಕೊಟ್ಟ ಧಾರಾವಾಹಿ ಅಂತ ಹೇಳಿದ್ರೆ ತಪ್ಪಾಗಲ್ಲ. 


ಸದ್ಯ ನಟ ಶಶಿ ಕಿರುತೆರೆಯಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದಾರೆ. ಆದ್ರೆ ನಟಿ ಲಾವಣ್ಯ ಶೂಟಿಂಗ್‌ನಲ್ಲಿ ಸಕ್ರಿಯವಾಗಿದ್ದು, ಸದ್ಯ ಸಖತ್‌ ಬ್ಯುಸಿಯಾಗಿದ್ದಾರೆ. ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ದಾಸ ಪುರಂದರ ಧಾರಾವಾಹಿಯಲ್ಲಿ ಪದ್ದಮ್ಮ ಪಾತ್ರದ ಮೂಲಕ ನಟಿ ಲಾವಣ್ಯ ಪ್ರೇಕ್ಷಕರ ಮನ ಗೆದ್ದಿದ್ದು, ನೋಡುಗರಿಗೆ ಪದ್ದಮ್ಮ ತುಂಬಾನೇ ಇಷ್ಟವಾಗಿದ್ದಾರೆ. 


ಇದನ್ನೂ ಓದಿ : ಹಾಲಿವುಡ್ ನಟ ರೇ ಲಿಯೊಟ್ಟಾ ಇನ್ನಿಲ್ಲ


ಇನ್ನು ಈ ಜೋಡಿ ಕೂಡ ಈಗಿನ ಟ್ರೆಂಡ್‌ಗೆ ತಕ್ಕಂತೆ ಸಖತ್‌ ಆಗಿ ಪ್ರೀ ವೆಂಡ್ಡಿಂಗ್‌ ಶೂಟ್‌ ಮಾಡಿಸಿದ್ದಾರೆ. ನಟ ಶಶಿ ತಾವು ಪ್ರೀತಿಸಿದ ಹುಡುಯನ್ನು ವರಿಸಿದ್ದು, ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ನಾಲ್ಕು ವರ್ಷಗಳಿಂದ ಕಂಡ ಕನಸು ನನಸಾಗಿ ಎರಡು ದಿನಗಳಾಯಿತು. ಸಿಕ್ಕಿಳು ನಮ್ಮ ಮನೆಯ ಅರಸಿ.. ನೀವೆಲ್ಲಾ ಹರಸಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಆ ಫೋಟೋಗಳಿಗೆ ವಿಶಸ್‌ಗಳ ಸುರಿಮಳೆಯೇ ಸುರಿದಿದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.