ಹಾಲಿವುಡ್ ನಟ ರೇ ಲಿಯೊಟ್ಟಾ ಇನ್ನಿಲ್ಲ

ಅಮೇರಿಕನ್ ಹಿರಿಯ ನಟ ಮತ್ತು ನಿರ್ಮಾಪಕ ರೇ ಲಿಯೊಟ್ಟಾ ಅವರು 67 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಡೆಡ್‌ಲೈನ್‌ನ ವರದಿಯ ಪ್ರಕಾರ, ರೇ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಅವರು ನಿದ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅವರು ಅಲ್ಲಿ ಡೇಂಜರಸ್ ವಾಟರ್ಸ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

Written by - Zee Kannada News Desk | Last Updated : May 27, 2022, 12:27 AM IST
  • ರೇ ಲಿಯೊಟ್ಟಾ ಅವರು ಮಾರ್ಟಿನ್ ಸ್ಕಾರ್ಸೆಸೆಯ ಕ್ರೈಮ್ ಕ್ಲಾಸಿಕ್ ಗುಡ್‌ಫೆಲ್ಲಾಸ್‌ನಲ್ಲಿ ನಟಿಸುವ ಮೂಲಕ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದರು.
  • ಈಗ ಅವರ ನಿಧನಕ್ಕೆ ಚಿತ್ರ ಜಗತ್ತು ಕಂಬನಿ ಮಿಡಿದಿದೆ.
ಹಾಲಿವುಡ್  ನಟ ರೇ ಲಿಯೊಟ್ಟಾ ಇನ್ನಿಲ್ಲ  title=
file photo

ನವದೆಹಲಿ: ಅಮೇರಿಕನ್ ಹಿರಿಯ ನಟ ಮತ್ತು ನಿರ್ಮಾಪಕ ರೇ ಲಿಯೊಟ್ಟಾ ಅವರು 67 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.ಡೆಡ್‌ಲೈನ್‌ನ ವರದಿಯ ಪ್ರಕಾರ, ರೇ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಅವರು ನಿದ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅವರು ಅಲ್ಲಿ ಡೇಂಜರಸ್ ವಾಟರ್ಸ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ರೇ ಲಿಯೊಟ್ಟಾ ಅವರು ಮಾರ್ಟಿನ್ ಸ್ಕಾರ್ಸೆಸೆಯ ಕ್ರೈಮ್ ಕ್ಲಾಸಿಕ್ ಗುಡ್‌ಫೆಲ್ಲಾಸ್‌ನಲ್ಲಿ ನಟಿಸುವ ಮೂಲಕ ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿದರು.ಈಗ ಅವರ ನಿಧನಕ್ಕೆ ಚಿತ್ರ ಜಗತ್ತು ಕಂಬನಿ ಮಿಡಿದಿದೆ.

ಇದನ್ನೂ ಓದಿ- ಬಿಬಿಎಂಪಿ ದಾಸಪ್ಫ ಆಸ್ಪತ್ರೆ 24 ಗಂಟೆ ಕಾರ್ಯನಿರ್ವಹಿಸಲು ಸಜ್ಜು!

ಅವರಿಗೆ ಲಿಯೊಟಾ ಕರ್ಸೆನ್ ಎಂಬ ಪುತ್ರಿ ಇದ್ದಾಳೆ. ವರದಿಯ ಪ್ರಕಾರ, ಅವರು ಜೇಸಿ ನಿಟ್ಟೊಲೊ ಅವರೊಂದಿಗೆ ವಿವಾಹವಾಗಲು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬೆಳ್ಳಿ ತೆರೆಯಷ್ಟೇ ಅಲ್ಲದೆ ಅವರು ಕಿರುತೆರೆಯಲ್ಲಿಯೂ ನಟಿಸಿದ್ದರು.ಆಪಲ್ ಟಿವಿ+ ಸರಣಿ ಬ್ಲ್ಯಾಕ್ ಬರ್ಡ್, ಪ್ರೈಮ್ ವಿಡಿಯೋಸ್ ಹನ್ನಾದಲ್ಲಿ ಟ್ಯಾರನ್ ಎಗರ್ಟನ್ ಅವರೊಂದಿಗೆ ಮತ್ತು ಎನ್‌ಬಿಸಿ ನಾಟಕ ಷೇಡ್ಸ್ ಆಫ್ ಬ್ಲೂ (2016-18) ನಲ್ಲಿ ಜೆನ್ನಿಫರ್ ಲೋಪೆಜ್ ಅವರೊಂದಿಗೆ ನಟಿಸುವ ಮೂಲಕ ಕಿರುತೆರೆಯಲ್ಲಿಯೂ ಕೂಡ ಅವರು ಸೈ ಎನಿಸಿಕೊಂಡಿದ್ದರು.

ರೇ ಲಿಯೊಟ್ಟಾ ಅವರಿಗೆ 2005 ರಲ್ಲಿ ಇ ಆರ್ ನಲ್ಲಿನ ಅತಿಥಿ ಪಾತ್ರಕ್ಕಾಗಿ ಪ್ರೈಮ್‌ಟೈಮ್ ಎಮ್ಮಿ ಪ್ರಶಸ್ತಿ ಲಭಿಸಿದೆ.ಅವರು ಕಿರುಸರಣಿ ಟೆಕ್ಸಾಸ್ ರೈಸಿಂಗ್ (2015) ಮತ್ತು ದಿ ರ್ಯಾಟ್ ಪ್ಯಾಕ್‌ಗಾಗಿ ಎರಡು ಬಾರಿ SAG ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು.1998 ರ ಟೆಲಿಫಿಲ್ಮ್‌ನಲ್ಲಿ, ಡಾನ್ ಚೆಡ್ಲ್, ಜೋ ಮಾಂಟೆಗ್ನಾ ಮತ್ತು ಆಂಗಸ್ ಮ್ಯಾಕ್‌ಫೇಡೆನ್ ಎದುರು ಫ್ರಾಂಕ್ ಸಿನಾತ್ರಾ ಪಾತ್ರದಲ್ಲಿ ಅವರು ನಟಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News