ಬೆಂಗಳೂರು : ಕನ್ನಡದ ಮನೆ ಮಾತಾಗಿರುವ ಧಾರವಾಹಿ ಭಾಗ್ಯಲಕ್ಷ್ಮೀ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಇನ್ನೇನು 100 ಸಂಚಿಕೆ ಪೂರೈಸುವ ಸಂಭ್ರಮದಲ್ಲಿರುವ ಧಾರವಾಹಿ ತಂಡಕ್ಕೆ ಮತ್ತೊಂದು ಸಂತಸ. ಹೌದು ಈ ಧಾರಾವಾಹಿ ಹಿಂದಿ ಭಾಷೆಗೂ ಡಬ್ ಆಗುತ್ತಿದ್ದು, ಸದ್ಯದಲ್ಲೇ ಹಿಂದಿ ಭಾಷೆಯಲ್ಲಿ ಪ್ರಸಾರ ಆರಂಭವಾಗಲಿದೆ. 


COMMERCIAL BREAK
SCROLL TO CONTINUE READING

ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಟಿಆರ್ ಪಿ ರೇಸ್ ನಲ್ಲೂ ಮುಂದಿರುವ ಭಾಗ್ಯಲಕ್ಷ್ಮೀ  ಧಾರವಾಹಿ ಇನ್ನು ಮುಂದೆ ಹಿಂದಿಯಲ್ಲಿಯೂ ಪ್ರಸಾರವಾಗಲಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ  ಈ ಧಾರಾವಾಹಿಯ ಹಿಂದಿ ವರ್ಸನ್ ಪ್ರಸಾರವಾಗಲಿದೆ.


ಇದನ್ನೂ ಓದಿ : Tejasswi Prakash : ʼಬಿಗ್‌ಬಾಸ್‌ ವಿನ್ನರ್‌ʼ ತೇಜಸ್ವಿ ಹಾಟ್‌ ಲುಕ್‌ಗೆ ಪ್ಯಾನ್ಸ್‌ ಫಿದಾ..! ವಿಡಿಯೋ ನೋಡಿ


ಕೆಲವೇ ತಿಂಗಳುಗಳ ಹಿಂದೆ ಆರಂಭವಾದ ಈ ಧಾರವಾಹಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದೆ. ಬಡ ಮನೆಯಲ್ಲಿ ಹುಟ್ಟಿದ ಅಕ್ಕ ತಂಗಿ, ಅವರ ಪ್ರೀತಿ, ತನ್ನ ತಂಗಿಗೆ ಶ್ರೀರಾಮನಥಹ ವರ ಬೇಕು ಎಂದು  ಎನ್ನುವ ಅಕ್ಕನ ಕಾಳಜಿ, ಅಕ್ಕನ ಮಾತು ತಪ್ಪ ತಂಗಿ ಈ ಎಲ್ಲಾ ಅಂಶಗಳು ಧಾರಾವಾಹಿಯಲ್ಲಿ ಮೇಳೈಸುತ್ತಿದೆ.  


ದೊಡ್ಡ ತಾರಾಬಳಗವನ್ನೇ ಹೊಂದಿರುವ ಈ ಧಾರಾವಾಹಿಯಲ್ಲಿ ಭಾಗ್ಯ ಆಗಿ ಸುಷ್ಮಾ ಕೆ ರಾವ್, ಲಕ್ಷ್ಮೀ ಆಗಿ ಭೂಮಿಕಾ ರಮೇಶ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸುದರ್ಶನ್ ರಂಗಪ್ರಸಾದ್, ಶಮಂತ್ ಬ್ರೋ ಗೌಡ, ಪದ್ಮಜಾ ರಾವ್, ಸುಷ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಗೆ ಯಶವಂತ್ ಪಾಂಡು ನಿರ್ದೇಶನವಿದೆ.  


ಇದನ್ನೂ ಓದಿ : Anushka Shetty : ಅನುಷ್ಕಾ ಶೆಟ್ಟಿಗೆ ಈ ಸ್ಟಾರ್‌ ಕ್ರಿಕೆಟಿಗನ ಮೇಲೆ ಪ್ಯಾರ್ಗೆ ಆಗ್ಬಿಟ್ಟೈತೆ ಅಂತೆ..! ಗೆಸ್‌ ಮಾಡಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.